ಮಕ್ಕಳ ಬುದ್ಧಿಮತ್ತೆ ಪ್ರತಿಭೆ ಆಧರಿಸಿ ಪಾಲಕರು, ಶಿಕ್ಷಕರು ಮಕ್ಕಳ ಭವಿಷ್ಯದ ಬೆಳವಣಿಗೆಗೆ ಕಾಳಜಿ ವಹಿಸುವ ಸಂದರ್ಭದಲ್ಲಿ ಅಗತ್ಯ ಭಾಷಾ ಜ್ಞಾನವನ್ನೂ ನೀಡುವುದು ಅತ್ಯಗತ್ಯ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ತಿಳಿಸಿದರು.

ಹಾನಗಲ್ಲ: ಮಕ್ಕಳ ಬುದ್ಧಿಮತ್ತೆ ಪ್ರತಿಭೆ ಆಧರಿಸಿ ಪಾಲಕರು, ಶಿಕ್ಷಕರು ಮಕ್ಕಳ ಭವಿಷ್ಯದ ಬೆಳವಣಿಗೆಗೆ ಕಾಳಜಿ ವಹಿಸುವ ಸಂದರ್ಭದಲ್ಲಿ ಅಗತ್ಯ ಭಾಷಾ ಜ್ಞಾನವನ್ನೂ ನೀಡುವುದು ಅತ್ಯಗತ್ಯ ಎಂದು ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ತಿಳಿಸಿದರು.ಹಾಗನಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಬೇಸಿಗೆ ರಜೆ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಒಂದು ತಿಂಗಳ ಸ್ಪೋಕನ್ ಇಂಗ್ಲಿಷ್ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ರೋಶನಿ ಸಮಾಜ ಸೇವಾ ಸಂಸ್ಥೆಯ ಹಿತೈಷಿ ಪುನೀತಾ ಪೇಟಕರ ಮಾತನಾಡಿ, ಇಂಗ್ಲಿಷ್ ಕಲಿಕೆಗೆ ನಿರಾಸಕ್ತಿ ಬೇಡ. ವಿದ್ಯಾರ್ಜನೆ ಹಂತದಲ್ಲಿಯೇ ಭಾಷೆಗಳನ್ನು ಉತ್ತಮವಾಗಿ ರೂಢಿಸಿಕೊಳ್ಳಬೇಕು. ಕೀಳರಿಮೆ ಬಿಟ್ಟು ಮಕ್ಕಳ ಕಲಿಕೆಗೆ ಮುಂದಾದರೆ ಮಾತ್ರ ಅಭಿವೃದ್ಧಿ ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬುಬೇಕು. ಇಂಗ್ಲಿಷ್ ಭಾಷೆಯ ಬಗೆಗೆ ಭಯವೂ ಬೇಡ. ಅದು ಕೂಡ ಒಂದು ಭಾಷೆಯಾಗಿ ಕಲಿಯಬೇಕು ಎಂದರು.

ಕೆಡಿಪಿ ಸದಸ್ಯ ಮಹ್ಮದ್‌ಹನೀಫ್ ಬಂಕಾಪೂರ ಈ ಸಂದರ್ಭದಲ್ಲಿ ಮಾತನಾಡಿ, ಕಲಿಕೆಗೆ ಕಾಲ ವಯೋಮಾನದ ಮಿತಿ ಇಲ್ಲ. ಆದರೆ ಬಾಲ್ಯದಲ್ಲಿ ಭಾಷಾ ಕಲಿಕೆಗೆ ಉತ್ತಮವಾದುದು. ಜ್ಞಾನಕ್ಕಾಗಿ ಯಾವುದೇ ಭಾಷೆ ಕಲಿತರೂ ಅದು ನಮಗೆ ಒಳ್ಳೆಯ ಫಲ ನೀಡಬಲ್ಲದು ಎಂದರು.ತರಬೇತಿಯಲ್ಲಿ ಪಾಲ್ಗೊಂಡ ೪೧ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಂಶ ನೀಡಿದ ೧೧ ವಿಕಲಚೇತನ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಸ್ಪೋಕನ್ ಇಂಗ್ಲಿಷ್ ತರಬೇತಿ ಶಿಕ್ಷಕರಾದ ಮಲ್ಲಿಕಾರ್ಜುನ, ಸುಲೋಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.