ನಗರದ ಅಂಬೇವಾಡಿಯಲ್ಲಿರುವ ವಿಟಿಯು ಕಾಲೇಜು ಆವರಣದ ಗಟಾರಿನಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡ ಸುಮಾರ ೧೫ ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಹಿಡಿಯಲು ಹೋಗಿದ್ದ ಉರಗಪ್ರೇಮಿ ಮೇಲೆ ಹೆಬ್ಬಾವು ದಾಳಿ ಮಾಡಿದೆ.
ಕನ್ನಡಪ್ರಭ ವಾರ್ತೆ ದಾಂಡೇಲಿ
ನಗರದ ಅಂಬೇವಾಡಿಯಲ್ಲಿರುವ ವಿಟಿಯು ಕಾಲೇಜು ಆವರಣದ ಗಟಾರಿನಲ್ಲಿ ಶನಿವಾರ ರಾತ್ರಿ ಕಾಣಿಸಿಕೊಂಡ ಸುಮಾರ ೧೫ ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವು ಹಿಡಿಯಲು ಹೋಗಿದ್ದ ಉರಗಪ್ರೇಮಿ ಮೇಲೆ ಹೆಬ್ಬಾವು ದಾಳಿ ಮಾಡಿದೆ. ಆದರೆ ಯಾವುದೇ ಅನಾಹುತ ಆಗಿಲ್ಲ. ರಜಾಕ್ ಶಾ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.ವಿಟಿಯು ಕಾಲೇಜು ಆವರಣದ ಗಟಾರಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಇರುವುದನ್ನು ಗಮನಿಸಿದ ವಿದ್ಯಾರ್ಥಿಗಳು ತಕ್ಷಣವೇ ಕಾಲೇಜಿನ ಶಿಕ್ಷಕರಿಗೆ ಮಾಹಿತಿ ನೀಡಿದರು. ಶಿಕ್ಷಕರು ಅರಣ್ಯ ಇಲಾಖೆಗೆ ಹಾಗೂ ಉರಗ ತಜ್ಞ ರಜಾಕ್ ಶಾ ಅವರಿಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ಬಂದ ಉರಗ ತಜ್ಞ ರಜಾಕ್ ಶಾ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸಾಕಷ್ಟು ಶ್ರಮಪಟ್ಟು ಕಾರ್ಯಾಚರಣೆ ನಡೆಸಿದರು. ಹೆಬ್ಬಾವು ಹಿಡಿಯುವ ಸಂದರ್ಭದಲ್ಲಿ ರಾಜಾಕ್ ಶಾ ಅವರನ್ನು ಕಚ್ಚಲು ಹೆಬ್ಬಾವು ಯತ್ನಿಸಿತು. ಆದರೆ ಅವರ ಬಟ್ಟೆ ಮಾತ್ರ ಹಾವಿನ ಬಾಯಿಗೆ ಸಿಕ್ಕಿತು. ಇದರಿಂದ ಅವರಿಗೆ ಅಪಾಯ ತಪ್ಪಿತು. ಬಳಿಕ ವಿದ್ಯಾರ್ಥಿಗಳ, ಶಿಕ್ಷಕರ ಸಹಕಾರದೊಂದಿಗೆ ಹೆಬ್ಬಾವನ್ನು ಸೆರೆಹಿಡಿದು, ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.ರಜಾಕ್ ಶಾ ಒಬ್ಬ ನುರಿತ ಉರಗ ತಜ್ಞರಷ್ಟೆ ಅಲ್ಲ, ಅವರು ಕಳೆದ 3 ದಶಕಗಳಿಂದ ಹಾವು, ಮೊಸಳೆ, ಹದ್ದು, ಆಮೆ, ಕಾಡುಮೃಗ ಹೀಗೆ ಯಾವುದೇ ಪ್ರಾಣಿಗಳಿಗೆ ತೊಂದರೆ ಅಥವಾ ಅಪಾಯ ಆದಾಗಲೆಲ್ಲ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿ ಅವುಗಳನ್ನು ರಕ್ಷಿಸುತ್ತ ಬಂದಿದ್ದಾರೆ.ಎರಡು ಗುಂಪುಗಳ ನಡುವೆ ಹೊಡೆದಾಟ; 10 ಮಂದಿ ವಿರುದ್ಧ ಪ್ರಕರಣ
ಕಾರವಾರ ನಗರದ ಸಾಯಿಕಟ್ಟಾ ಪ್ರದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿಯೇ ಎರಡು ಗುಂಪುಗಳ ನಡುವೆ ಭೀಕರ ಗಲಾಟೆ ನಡೆದಿದ್ದು, ಈ ಸಂಬಂಧ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ಒಟ್ಟು 10 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ನಡುರಾತ್ರಿಯಲ್ಲಿ ನಡೆದ ಈ ಗುಂಪು ಘರ್ಷಣೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.ಕಳೆದ ಮೇ 8ರಂದು ರಾತ್ರಿ ಸುಮಾರು 11.30ರ ವೇಳೆಗೆ ಸಾಯಿಕಟ್ಟಾದ ಸಾಯಿ ಮಂದಿರದ ಎದುರು ಈ ಘಟನೆ ಸಂಭವಿಸಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಪರಸ್ಪರ ಹೊಡೆದಾಡಿಕೊಳ್ಳುವ ಹಂತಕ್ಕೆ ತಲುಪಿತ್ತು. ಜನವಸತಿ ಪ್ರದೇಶದಲ್ಲಿ ಅಶಿಸ್ತಿನಿಂದ ವರ್ತಿಸಿ ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡಿದ ಕಾರಣ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹತ್ತು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.