ದೇಶದ ಯಾವುದೇ ಪ್ರಜೆಯು ತನ್ನ ಮೂಲ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಡಿ ಪರಿಹಾರ ಪಡೆಯಬಹುದು. ಪ್ರತಿಯೊಬ್ಬ ನಾಗರಿಕರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕಾನೂನು ಪ್ರತಿಯೊಬ್ಬ ನಾಗರಿಕನ ಹಕ್ಕು. ಭಾರತದ ಯಾವುದೇ ಪ್ರಜೆಯು ತನ್ನ ಮೂಲ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಡಿ ಪರಿಹಾರ ಪಡೆಯಬಹುದು ಎಂದು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿವಿ ಸಹಾಯಕ ಪಾಧ್ಯಾಪಕ ಡಾ.ಡಿ.ರಂಗಸ್ವಾಮಿ ಹೇಳಿದರು.

ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದಲ್ಲಿ ಶಾರದಾ ವಿಲಾಸ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋಟರಿ ಸಂಸ್ಥೆ ಸಹಯೋಗದೊಂದಿಗೆ ನಡೆಯುತ್ತಿರುವ 2ನೇ ದಿನ ಎನ್‌ಎಸ್‌ಎಸ್‌ನ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ಯಾವುದೇ ಪ್ರಜೆಯು ತನ್ನ ಮೂಲ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಡಿ ಪರಿಹಾರ ಪಡೆಯಬಹುದು. ಪ್ರತಿಯೊಬ್ಬ ನಾಗರಿಕರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಸಾಂವಿಧಾನಿಕ ಹಕ್ಕುಗಳ ಸಂಪೂರ್ಣ ಅನುಷ್ಠಾನ ಸಾಧ್ಯ ಎಂದರು. ಅಲ್ಲದೆ ಯಾವುದೇ ವ್ಯಕ್ತಿ ಅನ್ಯಾಯಕ್ಕೆ ಒಳಗಾದಾಗ, ನ್ಯಾಯ ಪಡೆಯುವ ಹಕ್ಕಿನ ಪುಷ್ಟೀಕರಣಕ್ಕಾಗಿ ಜಿಲ್ಲಾ ಹಾಗೂ ತಾಲೂಕು ಕಾನೂನು ಸೇವಾ ಆಯೋಗದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾವರ್ಧಕ ಕಾನೂನು ಕಾಲೇಜಿನ ಅಧ್ಯಾಪಕ ಡಾ.ಕುಮಾರ್, ರೋಟರಿ ಸಂಸ್ಥೆ ಅಧ್ಯಕ್ಷ ಡಾ.ರಾಘವೇಂದ್ರ, ಶಿಬಿರಾಧಿಕಾರಿ ಕು. ಸವಿತಾ ಹೆಚ್.ಎಂ, ಸಹಾಯಕ ಪಾಧ್ಯಪಕರಾದ ಪ್ರತಿಭಾ.ಬಿ.ಎಸ್, ಮಂಜಳ ಸೇರಿದಂತೆ ಇತರರು ಇದ್ದರು.