ಸುಪ್ರೀಂಕೋರ್ಟ್‌ ಸಿಜೆಐ ಅಪಮಾನ ಖಂಡಿಸಿ ವಕೀಲರ ಪ್ರತಿಭಟನೆ

| Published : Oct 10 2025, 01:01 AM IST

ಸುಪ್ರೀಂಕೋರ್ಟ್‌ ಸಿಜೆಐ ಅಪಮಾನ ಖಂಡಿಸಿ ವಕೀಲರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸನಾತನ ಧರ್ಮದ ಪ್ರತಿಪಾದಕನೆಂದು ಹೇಳಿಕೊಂಡ ವಕೀಲ ರಾಕೇಶ್ ಕಿಶೋರ್ ಎನ್ನುವವರು ಶೂ ಎಸೆದು ಅಸಭ್ಯ ವರ್ತನೆ ತೋರಿದ್ದಾನೆ.

ಹೊಸಪೇಟೆ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಅಸಭ್ಯ ವರ್ತನೆ ತೋರಿದ ವಕೀಲನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ವಕೀಲರ ಸಂಘದಿಂದ ನಗರದ ತಹಸಿಲ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ದೇಶದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಸನಾತನ ಧರ್ಮದ ಪ್ರತಿಪಾದಕನೆಂದು ಹೇಳಿಕೊಂಡ ವಕೀಲ ರಾಕೇಶ್ ಕಿಶೋರ್ ಎನ್ನುವವರು ಶೂ ಎಸೆದು ಅಸಭ್ಯ ವರ್ತನೆ ತೋರಿದ್ದಾನೆ. ನ್ಯಾಯಾಂಗ ವ್ಯವಸ್ಥೆಯನ್ನು ಬೆಚ್ಚಿ ಬೀಳಿಸಿದೆ. ಹಲವು ಧರ್ಮಗಳುಳ್ಳ ದೇಶದಲ್ಲಿ ಜನತೆ ಅವುಗಳ ಅಸಮಾನತೆಗಳ ನಡುವೆಯೂ ಧಾರ್ಮಿಕ ಸಹಿಷ್ಣುತೆ ಮರೆದಿರುವುದಕ್ಕೆ ದೇಶದ ಸಾಂವಿಧಾನಿಕ ಆಡಳಿತ ವ್ಯವಸ್ಥೆ ಕಾರಣವಾಗಿದೆ. ಇದು ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಆಗಿರುವ ಅವಮಾನ ಎಂದು ಒತ್ತಾಯಿಸಿದರು.

ಶೂ ಎಸೆದ ಪ್ರಕರಣವನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಬೇಕು. ಇದರ ಹಿಂದೆ ಇರುವ ಪ್ರಚೋದಕ ಸಂಗತಿಗಳನ್ನು ಪತ್ತೆ ಹಚ್ಚಬೇಕು. ಜನತೆಗೆ, ನ್ಯಾಯಾಂಗ ವ್ಯವಸ್ಥೆ ಹಾಗೂ ಸಂವಿಧಾನದ ಘನತೆಯನ್ನು ಖಾತ್ರಿಪಡಿಸಲು ತಕ್ಷಣವೇ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು. ಶೂ ಎಸೆದ ವ್ಯಕ್ತಿಯ ವಿರುದ್ಧ ದೇಶ ದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮೂರ್ತಿ, ವಕೀಲರಾದ ತಾರಿಹಳ್ಳಿ ಹನುಂಮತಪ್ಪ, ಯರ‍್ರಿಸ್ವಾಮಿ, ಮರಿಯಪ್ಪ, ಕರುಣಾನಿಧಿ, ಕಟಗಿ ಜಂಬಯ್ಯ ನಾಯಕ, ರವಿರಾಜ್, ಗೋಪಾಲ್, ವೆಂಕಟೇಶ ಮತ್ತಿತರರಿದ್ದರು.

ಹೊಸಪೇಟೆ ವಕೀಲರ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.