ಸಾರಾಂಶ
ವಿಜಯಪುರದ ಬಸವನಗರದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ರವಿ ಮೇಲಿನಮನಿ ಅವರ ಮೇಲೆ ದುಷ್ಕರ್ಮಿಗಳು ಕಾರು ಹತ್ತಿಸಿ ಅಪಘಾತವೆಂದು ಬಿಂಬಿಸಿಹತ್ಯೆ ಮಾಡಿದ್ದು, ಸ್ಥಳೀಯ ಪೊಲೀಸರು ಈ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಕೀಲರ ಸಂಘ ಆಗ್ರಪಡಿಸಿತು.
ಕನ್ನಡಪ್ರಭ ವಾರ್ತೆ ಮದ್ದೂರು
ವಿಜಯಪುರದಲ್ಲಿ ವಕೀಲ ರವಿ ಮೇಲಿನಮನಿ ಅವರ ಹತ್ಯೆ ಖಂಡಿಸಿ ಪಟ್ಟಣದ ವಕೀಲರು ಸೋಮವಾರ ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ ವಕೀಲರು ವಿಜಯಪುರದಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರವಿ ಮೇಲಿನಮನಿ ಅವರನ್ನು ಪೂರ್ವ ಯೋಜಿತವಾಗಿ ಹತ್ಯೆ ಮಾಡಿರುವುದನ್ನು ಸಭೆ ತೀವ್ರವಾಗಿ ಖಂಡಿಸಿತು.
ವಿಜಯಪುರದ ಬಸವನಗರದ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ರವಿ ಮೇಲಿನಮನಿ ಅವರ ಮೇಲೆ ದುಷ್ಕರ್ಮಿಗಳು ಕಾರು ಹತ್ತಿಸಿ ಅಪಘಾತವೆಂದು ಬಿಂಬಿಸಿಹತ್ಯೆ ಮಾಡಿದ್ದು, ಸ್ಥಳೀಯ ಪೊಲೀಸರು ಈ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಕೀಲರ ಸಂಘ ಆಗ್ರಪಡಿಸಿತು.ಸಭೆಯಲ್ಲಿ ಮೃತ ವಕೀಲ ರವಿ ಮೇಲಿನಮನಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಕೀಲರುಗಳು ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲು ನಿರ್ಧಾರ ಕೈಗೊಂಡರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ಖಜಾಂಚಿ ಎನ್.ಎಸ್ .ಪ್ರಸನ್ನ, ಜಂಟಿ ಕಾರ್ಯದರ್ಶಿ ಸುವರ್ಣ, ವಕೀಲರಾದ ಎಚ್.ವಿ.ಬಾಲರಾಜು, ಎಚ್.ಮಾದೇಗೌಡ, ಟಿ.ನಾಗರಾಜು, ಶಿವಣ್ಣ, ಸುನಿಲ್ ಕುಮಾರ್, ದಯಾನಂದ, ಪ್ರಶಾಂತ್, ಕಮಲಮ್ಮ, ರಾಮಲಿಂಗಯ್ಯ, ಉಮೇಶ್, ಶೋಭಾ, ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.