ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಹಣ ವಸೂಲಿಗೆ ನಿಂತಿರುವ ಸಂಘಟನೆಗಳ ಮುಖಂಡರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಕಿಡಿಕಾರಿದರು.ಪಟ್ಟಣದ ಪ್ರವಾಸಿ ಮಂದಿರ ಆವರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಜನರ ಕುಂದುಕೊರತೆ ಆಲಿಸಿದ ಬಳಿಕ ಸಭೆ ಉದ್ದೇಶಿಸಿ ಮಾತನಾಡಿ, ಪುರಸಭೆ ಗುತ್ತಿಗೆ ನೌಕರ ಮನೀಶ್ ನನ್ನು ಗೊಳಿಸುವ ಕ್ರಮವನ್ನು ವಿರೋಧಿಸಿ ನನ್ನ ಹೆಸರನ್ನು ಬಳಸಿಕೊಂಡು ಕೆಲವು ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವರ ಬೂಟಾಟಿಕೆ ಮಾತುಗಳಿಗೆ ಜಗ್ಗುವ ಮಗನಲ್ಲ. ಇವರ ಬಂಡವಾಳವೆಲ್ಲವೂ ನನಗೆ ಗೊತ್ತಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂಘಟನೆಗಳ ಮುಖಂಡರು ರಾಜಿ ಪಂಚಾಯತಿ ಹೆಸರಿನಲ್ಲಿ ಹಣ ಮಾಡುವ ದಂಧೆಗೆ ಇಳಿದಿದ್ದಾರೆ ಎಂದು ದೂರಿದರು.ಬಾಡಿಗೆ ಹೋರಾಟಗಾರರನ್ನು ಕರೆಸಿಕೊಂಡು ಚಳವಳಿ ನಡೆಸುವ ಮೂಲಕ ನನ್ನ ವಿರುದ್ಧ ದಲಿತರನ್ನು ಎತ್ತಿ ಕಟ್ಟುವ ಷಡ್ಯಂತ್ರ ನಡೆಸುತ್ತಿದ್ದಾರೆ. ಇವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.
ಮದ್ದೂರು ಕ್ಷೇತ್ರದಲ್ಲಿ ನಾನು ಸಮಾಜ ಸೇವೆ ಮಾಡುತ್ತಿರುವುದು ನಾನು ಮತ್ತು ನನ್ನ ಅಪ್ಪನ ಸಂಪಾದನೆ ಹಣದಿಂದ ಹೊರತು ಬೇರೆಯವರ ರೀತಿ ಚಿಲ್ಲರೆ ಕಾಸು ಪಡೆದು ಚಳವಳಿ ಮಾಡುತ್ತಿಲ್ಲ. ಕ್ಷೇತ್ರದಲ್ಲಿ ವೋಟು ಇಲ್ಲದ ಕೆಲವು ದಲಿತ ಮುಖಂಡರು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಪ್ರತಿಮೆ ಎದುರು ಕುಳಿತು ಒಬ್ಬ ವ್ಯಕ್ತಿ ಸ್ವಾರ್ಥಕ್ಕೋಸ್ಕರ ಹೋರಾಟ ಮಾಡುತ್ತಿರುವ ಮುಖಂಡರುಗಳು ನಾಚಿಕೆ ಪಟ್ಟಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಮಂಡ್ಯದಲ್ಲಿ ಹೊಸ ಕೃಷಿ ವಿವಿ ಬದಲು
ಸುಸ್ಥಿರ ಕೃಷಿಗೆ ಆದ್ಯತೆ ಕೊಡಿ: ಗೌಡಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಡ್ಯ ಜಿಲ್ಲೆಯಲ್ಲಿ ಹೊಸ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಿ ಮೂಲೆಗುಂಪು ಮಾಡುವ ಬದಲು ಜಿಲ್ಲೆಯ ರೈತರಿಗೆ ಸುಸ್ಥಿರ ಕೃಷಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಡಾ। ಎಂ.ಎಚ್. ಮರೀಗೌಡ ಹಾರ್ಟಿಕಲ್ಚರಲ್ ಏಜುಕೇಷನ್ ಆ್ಯಂಡ್ ರಿಸರ್ಚ್ ಫೌಂಡೇಶನ್ ಒತ್ತಾಯಿಸಿದೆ.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಫೌಂಡೇಶನ್ ಅಧ್ಯಕ್ಷ ಡಾ। ಕೆ.ನಾರಾಯಣಗೌಡ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಆರು ಕೃಷಿ ವಿಶ್ವವಿದ್ಯಾಲಯಗಳಿದ್ದು ಶೇ.60ರಷ್ಟು ಖಾಲಿ ಹುದ್ದೆಗಳಿವೆ. ಈ ಸಮಸ್ಯೆಗಳ ನಡುವೆಯೇ ಹೊಸ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಇನ್ನಷ್ಟು ಸಮಸ್ಯೆ ಮೈಮೇಲೆ ಎಳೆದುಕೊಳ್ಳುವ ಬದಲು ಸುಸ್ಥಿರ ಕೃಷಿಗೆ ಯೋಜನೆಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.
ಮಂಡ್ಯ ಜಿಲ್ಲೆಯ ಬೆಲ್ಲಕ್ಕೆ ಬ್ರ್ಯಾಂಡ್ ಹೆಸರು ಕೊಟ್ಟು ಕಬ್ಬು ಬೆಳೆಯುವ ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಲ್ಲದ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಧನ ಸಹಾಯ ಮಾಡಬೇಕಿದೆ. ನಾಗಮಂಗಲ ತಾಲೂಕಿನಲ್ಲಿ ಹೊಸ ತೋಟಗಾರಿಕೆ ಕಾಲೇಜನ್ನು ಪ್ರಾರಂಭ ಮಾಡಬೇಕು. ಈ ನಿಟ್ಟಿನಲ್ಲಿ ಸಾಕಷ್ಟು ರೈತರಿಗೆ ಒಣ ಬೇಸಾಯ ತೋಟಗಾರಿಕೆ ತಂತ್ರಜ್ಞಾನವನ್ನು ತಿಳಿಸುವ ಜೊತೆಗೆ ನೀರಿನ ಸದ್ಬಳಕೆ ಹಾಗೂ ರೈತರು ಹೆಚ್ಚುವರಿ ಲಾಭವನ್ನು ಸಹ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕೃಷಿ ವಿವಿ ವಿಶ್ರಾಂತ ಕುಲಪತಿ ಶಿವಣ್ಣ ಇದ್ದರು.