ನರಸಿಂಹರಾಜಪುರಕಲಿಕಾ ಹಬ್ಬದ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಲಿಕೆ ಮಟ್ಟ ಹೆಚ್ಚಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ತಿಳಿಸಿದರು.
- ಸೇಂಟ್ ಜಾರ್ಜ್ ಸಿರಾಯನ್ ಕೆಥೋಡ್ರಲ್ ಚರ್ಚ್ ನಲ್ಲಿ ಎಫ್.ಎಲ್.ಎನ್. ಕಲಿಕಾ ಹಬ್ಬ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕಲಿಕಾ ಹಬ್ಬದ ಕಾರ್ಯಕ್ರಮದಿಂದ ಮಕ್ಕಳಲ್ಲಿ ಸಂಖ್ಯಾ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಲಿಕೆ ಮಟ್ಟ ಹೆಚ್ಚಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ತಿಳಿಸಿದರು.
ಶನಿವಾರ ಪಟ್ಟಣದ ಸೇಂಟ್ ಜಾರ್ಜ್ ಸಿರಾಯನ್ ಕೆಥೋಡ್ರಲ್ ಚರ್ಚನಲ್ಲಿ ನಗರ ಕ್ಲಸ್ಟರ್ ವ್ಯಾಪ್ತಿಯ ಎಫ್.ಎಲ್. ಎನ್. ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು. ಕಲಿಕಾ ಹಬ್ಬದಲ್ಲಿ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಲಾಗುವುದು. ಮಕ್ಕಳ ಬುನಾದಿ ಸಾಕ್ಷರತೆಗೆ ಸಂಬಂಧಿಸಿದಂತೆ ಕಲಿಕೆ ಮಟ್ಟವನ್ನು ಸ್ಪರ್ಧೆಗಳ ಮೂಲಕ ಗುರುತಿಸಲಾಗುತ್ತದೆ. ಕಳೆದ 4 ವರ್ಷದಿಂದ ರಾಜ್ಯಾ ದ್ಯಂತ ಕಲಿಕಾ ಹಬ್ಬ ನಡೆಯುತ್ತಿದೆ ಎಂದರು.ಶಿಕ್ಷಣ ಸಂಯೋಜಕ ಬಿ.ಕೆ.ರಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಿಕಾ ಹಬ್ಬ ಉದ್ದೇಶಗಳ ಬಗ್ಗೆ ವಿವರಿಸಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಫಾ.ಜಾರ್ಜ್ ಮಾತನಾಡಿ, ಕಲಿಕಾ ಹಬ್ಬದಂತಹ ಕಾರ್ಯಕ್ರಮ ಶಾಲಾ ಮಕ್ಕಳಿಗೆ ಅವಶ್ಯಕವಾಗಿದೆ. ನಾನು ಈ ಹಿಂದೆ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದೆ ಎಂದು ನೆನಪಿಸಿಕೊಂಡರು.
ನಂತರ ಮಕ್ಕಳು ಮತ್ತು ಪೋಷಕರಿಗೂ ಮೋಜಿನ ಆಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆದ್ದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬೋಗೇಶಪ್ಪ, ಶಿಕ್ಷಣ ಇಲಾಖೆಯ ಬಿಐಇಆರ್ ಟಿ.ತಿಮ್ಮೇಶ್, ಸೇಂಟ್ ಜಾರ್ಜ್ ಶಾಲೆ ಮುಖ್ಯ ಶಿಕ್ಷಕ ಎ.ಜೆ.ಆನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎಚ್.ಮಂಜಪ್ಪ, ಸಿ.ಆರ್. ಅನಂತಪ್ಪ , ಕೆಪಿಎಸ್ ಶಾಲಾ ಶಿಕ್ಷಕ ಶ್ರೀನಿವಾಸ್ , ಬೋಗೇಶ್ ಹಾಗೂ ವಿವಿಧ ಕ್ಲಸ್ಟರ್ ವ್ಯಾಪ್ತಿಯ ಸಿಆರ್.ಪಿ ಗಳು ಉಪಸ್ಥಿತರಿದ್ದರು.