ಸಾರಾಂಶ
ವೈಚಾರಿಕತೆ, ವೈಜ್ಙಾನಿಕತೆಗಳ ಮೂಲಕ ಜಾಗೃತಿ ಸಮಾಜ ಕಟ್ಟೊಣವೆಂದ ಅವರು ಜಗತ್ತಿನ ವಿಕಾಸದ ತಳಪಾಯವೇ ವಿಜ್ಞಾನ, ವಿಜ್ಞಾನದ ತಳಪಾಯವೇ ಪ್ರಶ್ನೆ ಹಾಗೂ ಅನ್ವೇಷಣೆ, ವೈಜ್ಞಾನಿಕ ಮನೋಭಾವದಿಂದ ಮಾತ್ರ ವ್ಯಕ್ತಿತ್ವ ವಿಕಸನ, ದೇಶದ ಅಭಿವೃದ್ದಿ ಸಾಧ್ಯ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ದೇಶದ ಹೆಮ್ಮೆಯ ವಿಜ್ಙಾನಿ ಸಿ.ವಿ.ರಾಮನ್ ಅವರು ಬೆಳಕಿನ ಚದುವಿಕೆಯನ್ನು ಸಂಶೋಧಿಸಿದ ಸ್ಮರಣಾರ್ಥ ಆಚರಿಸಲ್ಪಡುವ ರಾಷ್ಟ್ರೀಯ ವಿಜ್ಙಾನ ದಿನದಂದು ಪ್ರತಿಯೊಬ್ಬರೂ ಮೌಡ್ಯ ಕಂದಾಚಾರಗಳನ್ನು ತಿರಸ್ಕರಿಸಿ ವೈಜ್ಙಾನಿಕ ಮನೋಭಾವ ಬೆಳೆಸಿಕೊಳ್ಳುವ ಪ್ರತಿಜ್ಞೆಗೈಯ್ಯೋಣ ಎಂದು ಕಾಮಸಮುದ್ರ ಗ್ರಾಮ ಪಂಃಅಧ್ಯಕ್ಷ ಆದಿನಾರಾಯಣ ಹೇಳಿದರು.ಅವರು ತಾಲೂಕಿನ ಕಾಮಸಮುದ್ರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಅಗಸ್ತ್ಯ ಫೌಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಜ್ಞಾನಾಂಕುರ ಉತ್ಸವದಲ್ಲಿ ಮಾತನಾಡಿದರು.ವೈಚಾರಿಕ ಮನೋಭಾವ ಬೆಳೆಸಿಕೊಳ್ಳಿ
ವೈಚಾರಿಕತೆ, ವೈಜ್ಙಾನಿಕತೆಗಳ ಮೂಲಕ ಜಾಗೃತಿ ಸಮಾಜ ಕಟ್ಟೊಣವೆಂದ ಅವರು ಜಗತ್ತಿನ ವಿಕಾಸದ ತಳಪಾಯವೇ ವಿಜ್ಞಾನ, ವಿಜ್ಞಾನದ ತಳಪಾಯವೇ ಪ್ರಶ್ನೆ ಹಾಗೂ ಅನ್ವೇಷಣೆ, ವೈಜ್ಞಾನಿಕ ಮನೋಭಾವದಿಂದ ಮಾತ್ರ ವ್ಯಕ್ತಿತ್ವ ವಿಕಸನ, ದೇಶದ ಅಭಿವೃದ್ದಿ ಸಾಧ್ಯ ಎನ್ನುವುದು ನಿರೂಪಿತವಾದ ಸತ್ಯ. ರಾಷ್ಟ್ರೀಯ ವಿಜ್ಞಾನ ದಿನದಂದು ಸಂವಿಧಾನದ ಪ್ರಮುಖ ಆಶಯಗಳಲ್ಲಿ ಒಂದಾದ ವೈಜ್ಞಾನಿಕ ಹಾಗೂ ವೈಚಾರಿಕ ಮನೋಭಾವ ಬೆಳೆಸಿಕೊಳ್ಳುವ ಪ್ರತಿಜ್ಙೆಯನ್ನು ಎಲ್ಲರೂ ಮಾಡಬೇಕು ಎಂದು ಕರೆ ನೀಡಿದರು.ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ ಶಶಿಕಲಾ ಮಾತನಾಡಿ ವಿಜ್ಞಾನದ ವಿಸ್ಮಯಗಳು ನಮ್ಮ ಜಗತ್ತನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ, ವಿಜ್ಞಾಗಳನ್ನು ಬೆಂಬಲಿಸಿ ವೈಜ್ಞಾನಿಕ ಅನ್ವೇಷಣೆಯ ಜಗತ್ತನ್ನು ಅರಿಯಲು ಅವರಿಗೆ ಅವಕಾಶ ಒದಗಿಸಬೇಕು ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಅವಿಷ್ಕಾರಗಳು ಮತ್ತು ಜ್ಞಾನ ಕೇಂದ್ರಿತ ಭವ್ಯ ಭವಿಷ್ಯ ನಿರ್ಮಿಸಲು ಸಾಧ್ಯವಿದೆ ಎಂದರು.
ಇದೇ ವೇಳೆ ಮಕ್ಕಳಿಂದ ನಡೆದ ವಿಜ್ಙಾನ ವಸ್ತು ಪ್ರದರ್ಶನ ಗಮನ ಸೆಳೆಯಿತು.ಈ ವೇಳೆ ಸುಜಾತ, ಡಾ. ರಾಂಪ್ರಸಾದ್, ಯುವರಾಣಿ, ಜೆಸಿಬಿ ನಾರಾಯಣಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಶಿಕ್ಷಕ ವೆಂಕಟಸ್ವಾಮಿ, ಮುನಿನಾರಾಯಣಪ್ಪ, ರಮೇಶ್ ಆಚಾರಿ ಇದ್ದರು.