ಸಾರಾಂಶ
ಕನ್ನಡಪ್ರಭ ವಾರ್ತೆ ಕೆಜಿಎಫ್ಜಗತ್ತಿನ ಎಲ್ಲರೂ ತಮ್ಮ ಸುತ್ತಲಿನ ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ನಡೆಯುವ ಹಿಂಸೆ ತಡೆಯಲು ಕ್ರೀಯಾಶೀಲರಾಗಬೇಕೆಂದು ಕೆಜಿಎಫ್ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್‌ಕುಮಾರ್.ಎಂ. ತಿಳಿಸಿದರು.ಕೆಜಿಎಫ್‌ನ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಇಲಾಖೆ ಹಾಗೂ ನಗರಸಭೆಯಿಂದ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿರ್ಮೂಲನೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಗೆ ಕಾನೂನು ಅರಿವು ಅಗತ್ಯ
ಮಹಿಳೆಯರು ಮತ್ತು ಮಕ್ಕಳ ಮೇಲೆ ಹಿಂಸಾಚಾರ ವ್ಯಾಪಕವಾಗಿದೆ, ಇದು ಮಾನವ ಹಕ್ಕು ಉಲ್ಲಂಘನೆಗಳಲ್ಲಿ ಅತ್ಯಂತ ಗಂಭೀರವಾದುದು, ಜಗತ್ತಿನಾದ್ಯಂತ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆಯು ಹಿಂಸೆಗೆ ಒಳಗಾಗುತ್ತಾಳೆ. ಇದರಿಂದ ಮಹಿಳೆಯರು ಹೊರ ಬರಲು ಕಾನೂನು ತಿಳಿವಳಿಕೆ ಅಗತ್ಯವಾಗಿದೆ ಎಂದರು. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೆಲೆ ನಡೆಯುವ ಹಿಂಸೆ ತಡೆಗೆ ಜಾಗೃತಿ ಮೂಡಿಸುವುದಕ್ಕಾಗಿ ವಿಶ್ವ ಸಂಸ್ಥೆಯು ಅಭಿಯಾನವೊಂದನ್ನು ನಡೆಸಲಿದ್ದು, ನ.೨೫ ರಿಂದ ಡಿ.೧೦ ರವರೆಗೂ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಹಿಂಸೆ ತಡೆಗೆ ಕ್ರಿಯಾಶೀಲರಾಗಿ ಅಭಿಯಾನದ ಘೋಷವಾಕ್ಯ ಮಹಿಳಾಪರ ಹೋರಾಟಗಾರರು ಜಗತ್ತಿನ ವಿವಿಧ ಭಾಗಗಳಲ್ಲಿ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರ ದೌರ್ಜನ್ಯ ತಡೆಗೆ ಬೆಳಕು ಚೆಲ್ಲಲಿದ್ದಾರೆ.ಹೆಣ್ಣು ಮಕ್ಕಳಿಗೆ ಶಿಕ್ಷಣಒಂದನೇ ಅಪರ ಸಿವಿಲ್ ನ್ಯಾಯಾಧೀಶರಾದ ಶಮಿದ.ಕೆ ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಗ್ರಹ ಪ್ರತಿಯೊಂದು ಮನೆಯಿಂದಲೂ ಆರಂಭವಾಗಬೇಕಿದೆ, ಎಲ್ಲ ಕುಟುಂಬದಲ್ಲಿ ಹೆಣ್ಣುಮಕ್ಕಳನ್ನು ಗೌರವದಿಂದ ಸಮಾನವಾಗಿ ನಡೆಸಿಕೊಳ್ಳುವ ಆರೋಗ್ಯಕರ ವಾತಾವರಣ ಏರ್ಪಡಬೇಕಿರುವುದು ಎಲ್ಲಕ್ಕಿಂತ ಮುಖ್ಯ. ಕಡ್ಡಾಯ ಶಿಕ್ಷಣದ ಜೊತೆಗೆ ಸ್ವಯಂರಕ್ಷಣೆ ತರಬೇತಿ ಕಡ್ಡಾಯಗೊಳಿಸಬೇಕಿದ್ದು, ಶಾಲಾ ಕಾಲೇಜು ಹಂತದಿಂದಲೇ ಆರಂಭವಾಗಿದೆ ಎಂದರು.ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ ಮಾತನಾಡಿ, ಹೆಣ್ಣು ಮಕ್ಕಳಿಗೆ ರಾಜಕೀಯವಾಗಿ ನಗರಸಭೆ, ಪುರಸಭೆ, ಜಿಪಂ, ಗ್ರಾಪಂ, ವ್ಯಾಪ್ತಿಯಲ್ಲಿ ಮೀಸಲಾತಿ ನಿಗದಿಪಡಿಸದಂತೆ ಕೇಂದ್ರ ಸರಕಾರ, ರಾಜ್ಯ ಸರಕಾರಗಳಲ್ಲಿ ಹೆಣ್ಣು ಮಕ್ಕಳಿಗೆ ಶೇ.೫೦ ರಷ್ಟು ಮೀಸಲಾತಿ ನೀಡಬೇಕು, ಆಗ ಮಾತ್ರ ಹೆಣ್ಣು ಮಕ್ಕಳು ತಮ್ಮ ಹಕ್ಕುಗಳನ್ನು ರಕ್ಷಸಿಕೊಳ್ಳಲು ಸಾಧ್ಯವಾಗಲಿದೆ. ಅಲ್ಲದೆ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗೂ ಸಹಕಾರಿಯಾಗಲಿದೆ ಎಂದರು.ಕಚೇರಿಯಲ್ಲಿ ಮಹಿಳೆಗೆ ಸೌಲಭ್ಯ
ಪೌರಾಯುಕ್ತ ಪವನ್‌ಕುಮಾರ್ ಮಾತನಾಡಿ, ನಗರಸಭೆ ಕಚೇರಿಯಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದು, ಮಹಿಳೆಯರಿಗೆ ಸಮವಸ್ತ್ರ ಬದಲಿಸಿಕೊಂಡು ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೋಣೆಯನ್ನು ನೀಡಲಾಗಿದೆ. ಅಲ್ಲದೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮಾನವಾಗಿ ಮಹಿಳಾ ಉದ್ಯೋಗಿಗಳಿಗೆ ನೀಡಿದ್ದೇವೆ ಎಂದರು.ಸರಕಾರಿ ಅಭಿಯೋಜಕಿ ಭುವನ ರಾಣಿ ಹೆಣ್ಣುಮಕ್ಕಳಿಗೆ ದೌರ್ಜನ್ಯ ಅಂದರೆ ಏನು ? ಎಂದು ಆಶಾಕಾರ್‍ಯಕರ್ತರು ಹಾಗೂ ಅಂಗನವಾಡಿ ಕಾರ್‍ಯಕರ್ತರೊಂದಿಗೆ ಸಂವಾದ ಕಾರ್‍ಯಕ್ರಮ ನಡೆಸಿದರು. ಸಿಡಿಪಿಒ ರಾಜೇಶ್, ಸರಕಾರಿ ಅಭಿಯೋಜಕರಾದ ವೆಲಂಗಣಿ, ನಗರಸಭೆ ವ್ಯವಾಸ್ಥಪಕ ಶಶಿಕುಮಾರ್, ವಕೀಲರ ಸಂಘದ ಉಪಾಧ್ಯಕ್ಷ ಮಣಿವಣ್ಣನ್ ಇದ್ದರು.