ಚಿರತೆ ದಾಳಿ: ಹಸುವಿನ ಕರು, ಮೇಕೆ ಬಲಿ

| Published : Nov 14 2025, 01:45 AM IST

ಸಾರಾಂಶ

ಹಸುವಿನ ಕರು ಹಾಗೂ ಮೇಕೆ ಸಾವನ್ನಪ್ಪಿದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಮಹಜರು ನಡೆಸಿದ್ದಾರೆ. ರೈತರು ಮಾತ್ರ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಗುಂಡ್ಲುಪೇಟೆ: ತಾಲೂಕಿನ ಕನ್ನೇಗಾಲದಲ್ಲಿ ಚಿರತೆಗೆ ಹಸುವಿನ ಕರು ಹಾಗೂ ಕೋಡಹಳ್ಳಿ ಬಳಿ ಚಿರತೆಗೆ ಮೇಕೆ ಬಲಿಯಾದ ಘಟನೆ ಗುರುವಾರ ನಡೆದಿದೆ.

ತಾಲೂಕಿನ ಕನ್ನೇಗಾಲದ ರಾಜೇಗೌಡರಿಗೆ ಸೇರಿದ ಹಸುವಿನ ಕರುವಿನ ಮೇಲೆ ದಾಳಿ ನಡೆಸಿ ಸಾಯಿಸಿದರೆ, ಇತ್ತ ತಾಲೂಕಿನ ಕೋಡಹಳ್ಳಿ ಬಳಿಯ ಮಹದೇಶ್ವರ ದೇವಸ್ಥಾನದ ಬಳಿಯೂ ಚಿರತೆ ದಾಳಿ ನಡೆಸಿ ಮೇಕೆ ಸಾಯಿಸಿದೆ.ಹಸುವಿನ ಕರು ಹಾಗೂ ಮೇಕೆ ಸಾವನ್ನಪ್ಪಿದ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿ ಮಹಜರು ನಡೆಸಿದ್ದಾರೆ. ರೈತರು ಮಾತ್ರ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

೧೩ಜಿಪಿಟಿ೬

ಗುಂಡ್ಲುಪೇಟೆ ತಾಲೂಕಿನ ಕನ್ನೇಗಾಲದ ಬಳಿ ಚಿರತೆ ದಾಳಿಗೆ ಹಸುವಿನ ಕರು ಬಲಿಯಾಗಿದೆ.

೧೩ಜಿಪಿಟಿ೭

ಗುಂಡ್ಲುಫೇಟೆ ತಾಲೂಕಿನ ಕೋಡಹಳ್ಳಿ ಬಳಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ.