ಸಾರಾಂಶ
ಚಿರತೆ ದಾಳಿಯಿಂದ ನಾಲ್ಕು ಕುರಿಗಳು ಬಲಿಯಾಗಿ ರೈತನಿಗೆ ಒಂದೂವರೆ ಲಕ್ಷ ರು. ನಷ್ಟ ಸಂಭವಿಸಿರುವ ಘಟನೆ ಅಗಸನಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಹಲಗೂರು: ಚಿರತೆ ದಾಳಿಯಿಂದ ನಾಲ್ಕು ಕುರಿಗಳು ಬಲಿಯಾಗಿ ರೈತನಿಗೆ ಒಂದೂವರೆ ಲಕ್ಷ ರು. ನಷ್ಟ ಸಂಭವಿಸಿರುವ ಘಟನೆ ಅಗಸನಪುರ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಗ್ರಾಮದ ರೈತ ಬಸವರಾಜು ಮನೆ ಕೊಟ್ಟಿಗೆಯಲ್ಲಿದ್ದ ನಾಲ್ಕು ಕುರಿಗಳ ಮೇಲೆ ಚಿರತೆ ದಾಳಿ ಮಾಡಿ ಕತ್ತಿನ ಭಾಗ ಕಚ್ಚಿ ತಿಂದಿವೆ. ಇದರಿಂದ ನಾಲ್ಕು ಕುರಿಗಳು ಮೃತಪಟ್ಟು, ಒಂದು ಕುರಿ ಗಾಯಗೊಂಡಿದೆ. ಸುಮಾರು ಒಂದುವರೆ ಲಕ್ಷ ರು. ನಷ್ಟ ಉಂಟು ಮಾಡಿದೆ. ರೈತ ಬಸವರಾಜು ಕುರಿ, ಮೇಕೆಗಳನ್ನು ಸಾಕಿಕೊಂಡು ಜೀವನ ನಡೆಸುತ್ತಿದ್ದರು.ತಡರಾತ್ರಿ ಚಿರತೆ ಎರಡು ಮರಿಗಳ ಜೊತೆ ಬಂದು ನಮ್ಮ ಕುರಿಗಳನ್ನು ಕಚ್ಚಿ ತಿಂದು ಹೋಗಿ ಒಂದುವರೆ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ನಮಗೆ ಸೂಕ್ತ ಪರಿಹಾರ ಕೊಡಿಸುವಂತೆ ಕೋರಿದರು. ರಾತ್ರಿ ವೇಳೆ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ, ಸಂಬಂಧಪಟ್ಟ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಬೋನನ್ನು ಇಡುವಂತೆ ಮನವಿ ಮಾಡಿದರು.