ಸಾರಾಂಶ
ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಿಜ, ಆದರೆ ಅದರ ಹೆಜ್ಜೆ ಗುರುತುಗಳು ಸಿಕ್ಕಿದೆ. ಪಂಪಾವಣದಲ್ಲಿ ವಾಯುವಿಹಾರ ಮಾಡುವವರು ನಾಲ್ಕು ದಿನ ವಾಯುವಿಹಾರ ಮಾಡಬಾರದು
ಮುನಿರಾಬಾದ್: ಮುನಿರಾಬಾದನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಜನನಿಬೀಡ ಪ್ರದೇಶ ಇಂದ್ರ ವೃತ್ತದ ಬಳಿ ಇರುವ ಇಂದ್ರಭವನ ಅಥಿತಿ ಗೃಹಕ್ಕೆ ಹೋಗುವ ರಸ್ತೆಯಲ್ಲಿ ಚಿರತೆ ರಾತ್ರಿ 10.30ಕ್ಕೆ ಕಾಣಿಸಿಕೊಂಡಿದೆ. ನಂತರ ಅದು ಪಕ್ಕದ ಪಂಪಾವಣ ಉದ್ಯಾವನದ ಗೇಟನ್ನು ಜಿಗಿದು ಉದ್ಯಾವನದ ಒಳಗೆ ಹೋಗಿದೆ ಎಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.ಈ ಕುರಿತು ಮಾತನಾಡಿದ ಆರ್‌ಎಫ್‌ಒ ವಲಯ ಅರಣ್ಯಾಧಿಕಾರಿ ಸ್ವಾಮಿ, ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು ನಿಜ, ಆದರೆ ಅದರ ಹೆಜ್ಜೆ ಗುರುತುಗಳು ಸಿಕ್ಕಿದೆ. ಪಂಪಾವಣದಲ್ಲಿ ವಾಯುವಿಹಾರ ಮಾಡುವವರು ನಾಲ್ಕು ದಿನ ವಾಯುವಿಹಾರ ಮಾಡಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮುನಿರಾಬಾದಿನಲ್ಲಿ ನಾಯಿಗಳು ಹೆಚ್ಚು ಇದ್ದು, ಚಿರತೆಗೆ ನಾಯಿ ಮೌಂಸ ಅಂದರೆ ಪ್ರಾಣ ಚಿರತೆ ಬರಲು ಇದು ಒಂದು ಕಾರಣವಾಗಿರಬಹುದು ಎಂದರು.ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ರಾತ್ರಿ ವೇಳೆ ಜಂಟಿಯಾಗಿ ಗಸ್ತು ತಿರುಗುತ್ತಿದ್ದಾರೆ. ಚಿರತೆ ಮತ್ತೇ ಪ್ರತ್ಯೇಕ್ಷವಾದರೆ ಅದನ್ನು ಹಿಡಿಯಲು ಬೋನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದುವರೆಗೆ ಗ್ರಾಮದಲ್ಲಿ ಮೂರು ಬಾರಿ ಚಿರತೆ ಪ್ರತ್ಯೇಕ್ಷವಾಗಿದೆ. ಅನೇಕ ವರ್ಷಗಳ ಹಿಂದೆ ಇಲ್ಲಿನ ಅಸೆಂಬ್ಲಿ ಯಾರ್ಡ್ ಪ್ರದೇಶದ ಬನ್ನಿಮಹಾಕಾಳಿ ದೇವಸ್ಥಾನ ನಿರ್ಮಾಣದ ವೇಳೆ ಪ್ರತ್ಯೇಕ್ಷವಾಗಿತ್ತು.ಇದುವರೆಗೆ ಮುನಿರಾಬಾದ ಗ್ರಾಪಂ ನಾಯಿಗಳನ್ನು ಹಿಡಿಯುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ, ಪಂಚಾಯಿತಿಯ ಈ ನಿರ್ಲಕ್ಷ್ಯ ಧೋರಣೆಯಿಂದ ಗ್ರಾಮಕ್ಕೆ ಚಿರತೆ ಬರುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.