ರಾಗಿ ಖರೀದಿ ಕೇಂದ್ರಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ನೋಂದಣಿ

| Published : May 05 2024, 02:04 AM IST

ರಾಗಿ ಖರೀದಿ ಕೇಂದ್ರಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ನೋಂದಣಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರುಜಿಲ್ಲೆಯ 3 ತಾಲೂಕುಗಳ ವ್ಯಾಪ್ತಿಯ ರಾಗಿ ಖರೀದಿ ಕೇಂದ್ರಗಳಲ್ಲಿ ಈ ವರ್ಷ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ರೈತರ ನೋಂದಣಿ ಒಂದೆಡೆಯಾದರೆ, ಸಮರ್ಪಕ ವಾಗಿ ಬೆಳೆ ಕೈ ಸೇರದೆ ರಾಗಿ ಖರೀದಿಯಲ್ಲಿ ನಿರೀಕ್ಷೆಗಿಂತ ಸುಮಾರು 2 ಲಕ್ಷ ಕ್ವಿಂಟಾಲ್ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಅಲ್ಲದೆ ಈ ಬಾರಿ ರಾಗಿ ಖರೀದಿ ಪ್ರಕ್ರಿಯೆಯೂ ತಡವಾಗಿ ಆರಂಭವಾಗಿದೆ.

ನಿರೀಕ್ಷೆಗಿಂತ 2 ಲಕ್ಷ ಕ್ವಿಂಟಾಲ್ ರಾಗಿ ಖರೀದಿಯಲ್ಲಿ ಕಡಿತ ಸಾಧ್ಯತೆ । ಮುಂಗಾರು ಮಳೆ ಬಾರದೆ ಬಹುತೇಕ ರಾಗಿ ಬೆಳೆ ನಾಶ

ಕನ್ನಡಪ್ರಭ ವಾರ್ತೆ, ಬೀರೂರು

ಜಿಲ್ಲೆಯ 3 ತಾಲೂಕುಗಳ ವ್ಯಾಪ್ತಿಯ ರಾಗಿ ಖರೀದಿ ಕೇಂದ್ರಗಳಲ್ಲಿ ಈ ವರ್ಷ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ರೈತರ ನೋಂದಣಿ ಒಂದೆಡೆಯಾದರೆ, ಸಮರ್ಪಕ ವಾಗಿ ಬೆಳೆ ಕೈ ಸೇರದೆ ರಾಗಿ ಖರೀದಿಯಲ್ಲಿ ನಿರೀಕ್ಷೆಗಿಂತ ಸುಮಾರು 2 ಲಕ್ಷ ಕ್ವಿಂಟಾಲ್ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.ಅಲ್ಲದೆ ಈ ಬಾರಿ ರಾಗಿ ಖರೀದಿ ಪ್ರಕ್ರಿಯೆಯೂ ತಡವಾಗಿ ಆರಂಭವಾಗಿದೆ.ಬಯಲು ಸೀಮೆ ಭಾಗದ ಕಡೂರು, ತರೀಕೆರೆ, ಅಜ್ಜಂಪುರ ಮತ್ತು ಚಿಕ್ಕಮಗಳೂರಿನ ಲಕ್ಯಾ ಹೋಬಳಿ ವ್ಯಾಪ್ತಿಯಲ್ಲಿ ಪ್ರತಿವರ್ಷ ಸುಮಾರು 45 ಸಾವಿರ ಹೆಕ್ಟರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತದೆ. ಆದರೆ ಕಳೆದ ಮುಂಗಾರಿನಲ್ಲಿ ಮಳೆ ಬಾರದೆ ಬಹುತೇಕ ರಾಗಿ ಬೆಳೆ ನಾಶವಾಗಿದೆ. ಹಾಗಾಗಿ ಸರ್ಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಬೆಂಬಲಬೆಲೆ ಹೆಚ್ಚಿಸಿದೆ. ಈ ಬಾರಿ 3.5 ಲಕ್ಷ ಕ್ವಿಂಟಾಲ್ ರಾಗಿ ನೋಂದಣಿ ಗುರಿ ಇದ್ದರೂ ಆಗಿದ್ದು 2.95 ಲಕ್ಷ ಕ್ವಿಂಟಾಲ್ ರಾಗಿ ಖರೀದಿ ನೋಂದಣಿ ಮಾತ್ರ. ಇದೀಗ ಏ.30ರವರೆಗೆ 2046 ರೈತರ ನೋಂದಣಿಯಾಗಿ ಈವರೆಗೆ 50359.50 ಸಾವಿರ ಕ್ವಿಂಟಾಲ್ ರಾಗಿ ಮಾತ್ರ ಖರೀದಿಸಲಾಗಿದೆ.

ರಾಗಿ ಖರೀದಿಗೆ ಹಿನ್ನೆಡೆ:

ತಾಲೂಕಿನಲ್ಲಿ ತೆರೆಯಲಾದ 8 ರಾಗಿ ಖರೀದಿ ಕೇಂದ್ರಗಳಲ್ಲಿ ನಿರೀಕ್ಷೆಯಂತೆ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಹಲವು ಕೇಂದ್ರದಲ್ಲಿ ರೈತರ ಸಂಖ್ಯೆ ಕಡಿಮೆಯಾಗಿರುವುದರಿಂದ ಜೂ.30ರವರೆಗೆ ಖರೀದಿಗೆ ಅವಕಾಶ ನೀಡಲಾಗಿದೆ. ಚಿಕ್ಕಮಗಳೂರು, ಕಡೂರು, ತರೀಕೆರೆ ಅಜ್ಜಂಪುರ ತಾಲೂಕಿನಲ್ಲಿ ರಾಗಿ ಬೆಳೆಯಲಾಗುತ್ತದೆ. ರೈತರು ದಿನ ಬಳಕೆಗೆ ಇಟ್ಟುಕೊಂಡು ಉಳಿದ ರಾಗಿ ಮಾರಾಟ ಮಾಡುತ್ತಾರೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಆಹಾರ ಇಲಾಖೆ ಅಂದಾಜಿನ ಪ್ರಕಾರ 3 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ರೈತರು ನೋಂದಣಿ ನಿರೀಕ್ಷೆ ಇತ್ತು. ಆದರೆ ಜಿಲ್ಲೆಯಲ್ಲಿ 10690 ರೈತರು 2,95,386 ಲಕ್ಷ ಕ್ವಿಂಟಾಲ್ ರಾಗಿ ಖರೀದಿಗೆ ನೋಂದಣಿ ಮಾಡಿಸಿದ್ದಾರೆ. ನೋಂದಣಿ ಮುಗಿದು ರಾಗಿ ಖರೀದಿ ಆರಂಭವಾಗಿದ್ದು, ಖರೀದಿ ಯಲ್ಲೂ ಹಿನ್ನಡೆಯಾಗಿದೆ. ಇಳುವರಿ ಕುಸಿತ: ರಾಗಿ ಪ್ರಮುಖವಾಗಿ ಮಳೆಯಾಶ್ರಿತ ಬೆಳೆ. ಕಳೆದ 2022ರಲ್ಲಿ ತೀವ್ರ ಮಳೆಯಿಂದಾಗಿ ಬೆಳೆ ಹಾನಿ ಯಾಗಿ ರಾಗಿ ಬೆಳೆ ಸರಿಯಾದ ಪ್ರಮಾಣದಲ್ಲಿ ಕೈ ಸೇರಲಿಲ್ಲ. 2023ರಲ್ಲೂ ಬರದಿಂದ ರಾಗಿ ಉತ್ಪಾದನೆ ಕುಸಿತವಾಗಿ ಒಟ್ಟು 2 ವರ್ಷ ಬೆಳೆ ಕೈಸೇರದ ಪರಿಣಾಮ ರಾಗಿ ಬೆಲೆ ಗಗನಮುಖಿಯಾಗಿದೆ. ಗ್ರಾಮೀಣ ಭಾಗದಲ್ಲಿ ರಾಗಿ ಬಡವರು ಸೇವಿಸುವ ಆಹಾರ. ಅಕ್ಕಿ ಶ್ರೀಮಂತರು ಸೇವಿಸುವ ಆಹಾರ ಎಂದು ಕರೆಯಲಾಗುತ್ತದೆ. ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಬತ್ತದ ಬೆಲೆಗಿಂತ ಹೆಚ್ಚಾಗಿದೆ. ಖರೀದಿ ಕುಸಿತಕ್ಕೆ ಹಿನ್ನಡೆ ಏನು? : ಬರದಿಂದ ಫಸಲು ಕುಸಿತ, ನೋಂದಣಿ ನಂತರ ತಡವಾಗಿ ಆರಂಭವಾದ ರಾಗಿ ಖರೀದಿ ಕೇಂದ್ರ. ಬೆಂಬಲ ಬೆಲೆಯಷ್ಟೇ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಹೆಚ್ಚಳವಾಗಿರುವುದು. ಮತ್ತು ರಾಗಿ ಬೆಂಬಲ ಬೆಲೆ 2022-23ರಲ್ಲಿ ಕ್ವಿಂಟಾಲ್‌ಗೆ 3.577ರು. ಇತ್ತು ಈಗ ರಾಗಿ ಬೆಂಬಲ ಬೆಲೆ 2023-24ಕ್ಕೆ 3.846 ರು.ಗೆ ಏರಿಕೆ ಮಾಡಿದೆ. ಜೂ.30ರವರೆಗೂ ರಾಗಿ ಖರೀದಿಗೆ ಅವಕಾಶ ಕಲ್ಪಿಸಿರುವುದು ರಾಗಿ ನೋಂದಣಿದಾರರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.8 ಕಡೆ ಖರೀದಿ ಕೇಂದ್ರ: ಜಿಲ್ಲೆಯಲ್ಲಿ ಚಿಕ್ಕಮಗಳೂರು, ಕಡೂರು(2), ಬೀರೂರು, ಪಂಚನಹಳ್ಳಿ(2), ಅಜ್ಜಂಪುರ ಹಾಗೂ ತರೀಕೆರೆ ಭಾಗದ ಎಪಿಎಂಸಿ ಕೇಂದ್ರಗಳ ಆವರಣದಲ್ಲಿ ಒಟ್ಟು 8 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಖರೀದಿ ಪ್ರಕ್ರಿಯೆ ಜೂ.30ರವರೆಗೆ ಅವಕಾಶ ನೀಡಿರುವ ಪರಿಣಾಮ ಕೊನೆ ಹಂತದಲ್ಲಿ ಸರಬರಾಜಿನಲ್ಲಿ ಖರೀದಿ ಪ್ರಮಾಣ ಹೆಚ್ಚಳ ವಾಗಬಹುದು ಇಲ್ಲ ಇಳಿಕೆಯೂ ಆಗಬಹುದು ಯಾವುದನ್ನು ನಿರೀಕ್ಷೆಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಖರೀದಿ ಕೇಂದ್ರದ ಅಧಿಕಾರಿಜಿಲ್ಲೆಯ 8 ರಾಗಿ ಖರೀದಿ ಕೇಂದ್ರಗಳಿಂದ ಈವರೆಗೂ 2.95.386 ಲಕ್ಷ ಕ್ವಿಂಟಾಲ್ ಮಾತ್ರ ರಾಗಿ ನೋಂದಣಿಯಾಗಿದ್ದು. ಸಮರ್ಪಕ ರಾಗಿ ಬೆಳೆ ಇಲ್ಲದ ಪರಿಣಾಮ ಖರೀದಿ ಪ್ರಮಾಣದಲ್ಲಿ ಒಂದಷ್ಟು ಹಿನ್ನಡೆಯಾಗಿದೆ. ಏ.30ರವರೆಗೆ 2046 ರೈತರಿಂದ 50359.50 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದೆ. ನೋಂದಣಿಯಾದ ರೈತರಿಗೆ ಜೂ.30ರವರೆಗೂ ರಾಗಿ ನೀಡಲು ಅವಕಾಶ ಕಲ್ಪಿಸಲಾಗಿದೆ.- ಯೋಗಾನಂದ್,

ಉಪನಿರ್ದೇಶಕ ಆಹಾರ ಇಲಾಖೆ. ಚಿಕ್ಕಮಗಳೂರು.-------------

ತಾಲೂಕು- ನೋಂದಾಯಿತ- ನೋಂದಾಯಿತ- ಕೇಂದ್ರಕ್ಕೆ ನೀಡಿದ - ರಾಗಿ ಪ್ರಮಾಣ

ರೈತರು ರಾಗಿ ಪ್ರಮಾಣ(ಕ್ವಿಂಟಲ್‌) ರೈತರ ಸಂಖ್ಯೆ

ಚಿಕ್ಕಮಗಳೂರು ಎಪಿಎಂಸಿ 1150 25969.00 270 5953.50ಕಡೂರು ಎಪಿಎಂಸಿ ಯಾರ್ಡ್- 1 2647 74161.00 341 8810.50 ಎಪಿಎಂಸಿ ಯಾರ್ಡ್- 2. 2032 56578.00 294 7941 ಎಪಿಎಂಸಿ ಬೀರೂರು 861 24154.50 201 5025 ಎಪಿಎಂಸಿ ಪಂಚನಹಳ್ಳಿ 1301 37119 331 7411ತರೀಕೆರೆ ಎಪಿಎಂಸಿ 394 11345 164 3800.50ಅಜ್ಜಂಪುರ ಎಪಿಎಂಸಿ 2027 58332.50 379 9961 ಒಟ್ಟು 10690 295386.00 2046 50359.50

3 ಬೀರೂರು1ಬೀರೂರು ಎಪಿಎಂಸಿ ಮಾರುಕಟ್ಟೆಯ ರೈತಸಂಪರ್ಕ ಕೇಂದ್ರದ ಸಮೀಪದಲ್ಲಿ ರೈತರಿಂದ ಕೃಷಿ ಅಧಿಕಾರಿಗಳು ರಾಗಿ ಖರೀದಿಸುತ್ತಿರುವುದು.