ಒಳ ಪಂಗಡಗಳೆಲ್ಲ ಒಂದಾಗಿ, ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಲಿ

| Published : Jan 08 2025, 12:18 AM IST

ಒಳ ಪಂಗಡಗಳೆಲ್ಲ ಒಂದಾಗಿ, ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಹಲವು ಒಳ ಪಂಗಡಗಳಲ್ಲಿ ಹರಿದು ಹಂಚಿ ಹೋಗಿರುವ ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಬೇಕು ಎಂದು ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಹಲವು ಒಳ ಪಂಗಡಗಳಲ್ಲಿ ಹರಿದು ಹಂಚಿ ಹೋಗಿರುವ ಬ್ರಾಹ್ಮಣ ಸಮುದಾಯ ಒಗ್ಗಟ್ಟಾಗಬೇಕು ಎಂದು ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ ಕರೆ ನೀಡಿದರು.

ನಗರಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿಮತಸ್ಥ ಬ್ರಾಹ್ಮಣರ ಸಮ್ಮೇಳನ (ವಿಶ್ವಾಮಿತ್ರ) ಜ.18 ಮತ್ತು 19 ರಂದು ತ್ರಿಪುರವಾಸಿನಿ ಸಭಾಂಗಣ ಬಳ್ಳಾರಿ ರಸ್ತೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಬ್ರಾಹ್ಮಣ ಸಮಾಜದ ಸಮಸ್ಯೆಗಳು ಹಾಗೂ ಪರಿಹಾರದ ಬಗ್ಗೆ ಚಿಂತನ ಮಂಥನ ಸಮ್ಮೇಳನದಲ್ಲಿ ನಡೆಯಲಿದೆ. ಪ್ರಮುಖವಾದ ತ್ರಿಮತಗಳ ಬ್ರಾಹ್ಮಣರನ್ನು ಒಂದೇ ವೇದಿಕೆಯಲ್ಲಿ ತಂದು ಸಮಾಜದ ಸಂಘಟನೆ ಹಾಗೂ ಏಳಿಗೆಯ ಬಗ್ಗೆ ಉಪನ್ಯಾಸ ಹಾಗೂ ಪರಿಹಾರ ಮಾರ್ಗಗಳ ಕುರಿತಾಗಿ ಚರ್ಚೆಗಳು ನಡೆಯಲಿದೆ. ಸಮಾಜದ ಎಲ್ಲ ಬಾಂಧವರು ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಸಮಾಜದ ಎಲ್ಲಾ ಗುರುಗಳು ಒಂದಾಗಬೇಕು. ಯತಿಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದು ಸಮಾಜದ ಎಲ್ಲ ಮಠಾಧೀಶರಿಗೆ ಮನವಿ ಮಾಡುತ್ತೇವೆ. ಮನೆಯಲ್ಲಿ ತಮ್ಮ ಪಂಗಡಗಳ ಆಚರಣೆ ಮಾಡಲಿ. ಆದರೆ, ಎಲ್ಲ ವಿಪ್ರರು ಒಂದಾಗಲಿ ಎಂಬುವುದು ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಸಮಾಜದ ಒಳಿತಿಗಾಗಿ ಯತಿಗಳು ದಿನನಿತ್ಯ ತಮ್ಮ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರಿಗೆ ಸಮಾಜದ ತೊಂದರೆಗಳನ್ನು ತಿಳಿಸುವ ಪ್ರಯತ್ನ ಮಾಡುವ ಉದ್ದೇಶ ಹೊಂದಿದೆ. ಬಡ ಬ್ರಾಹ್ಮಣರಿಗೆ ಸಂಘಟನೆಯಿಂದ ಸಹಕಾರ ಮಾಡಲಾಗುವುದು. ಇಡಬ್ಲುಎಸ್‌ನ ಸೌಲಭ್ಯಗಳು ದೊರಕಿಸಿ ಕೊಡಲಾಗುತ್ತಿದೆ ಎಂದು ತಿಳಿಸಿದರು. ನಿವೃತ್ತ ಉಪನ್ಯಾಸಕ ರಾಜೇಂದ್ರ ಹುಲ್ಯಾಳಕರ ಮಾತನಾಡಿ, ಬ್ರಾಹ್ಮಣ ಸಮಾಜದ ಝಾನ್ಸಿರಾಣಿ ಲಕ್ಷ್ಮೀಬಾಯಿ, ವೀರಯೋಧ ಮಂಗಲಪಾಂಡೆ, ಚಾಣಕ್ಯ, ಹಕ್ಕಬುಕ್ಕರು ಹೀಗೆ ಅನೇಕ ಮಹನೀಯರು ಬ್ರಾಹ್ಮಣ ಸಮುದಾಯದವರಾಗಿದ್ದಾರೆ. ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ಸಮಾಜ ಎತ್ತಿ ಹಿಡಿದಿದೆ. ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯದ ಸಮಾಜ ಇಂದು ತನ್ನ ಅಸ್ಥಿತ್ವಕ್ಕಾಗಿ ಒಂದಾಗಬೇಕಿದೆ. ಸಮಾಜದ ಏಕತೆ ಮತ್ತು ಹಿಂದುಳಿದ ಬಾಂಧವರನ್ನು ಎತ್ತಿಹಿಡಿದು ಮುಖ್ಯವಾಹಿಸಿಗೆ ತರುವ ಕೆಲಸ ಸಂಘಟನೆಗಳಿಂದ ಆಗಬೇಕಾಗಿದೆ ಎಂದು ತಿಳಿಸಿದರು.ರಾಘವೇಂದ್ರಾಚಾರ್ಯ ಜೋಷಿ, ಪಂ.ರಂಗಾಚಾರ್ಯ, ನರಸಿಂಹ ಆಲೂರ, ಆರ್.ಜಿ.ಕುಲಕರ್ಣಿ, ನಿತಿನ ಹುಲ್ಯಾಳಕರ, ವಕೀಲ ಆರ್.ಪಿ.ಕುಲಕರ್ಣಿ, ಕಿರಣ ಜಾಲಿಹಾಳ, ಮುಕುಂದ ನ್ಯಾಮಣ್ಣವರ, ಅಶೋಕ ಹುಲ್ಯಾಳಕರ, ಶ್ರೀನಿವಾಸ ಅಪರಂಜಿ, ವಿಷ್ಣು ಕುಲಕರ್ಣಿ, ಅಶೋಕ ಮೈಗೂರ, ವಿನಾಯಕ ತಾಳಿಕೋಟಿ, ಎಸ್.ಕೆ.ತಾಳಿಕೋಟಿ, ಶ್ರೀನಿವಾಸ ಪುರೋಹಿತ ಮುಂತಾದವರಿದ್ದರು.