ಸಾರಾಂಶ
ಯಲಬುರ್ಗಾ: ರಂಗಭೂಮಿ ಕಲೆಯಿಂದ ಕಲಾವಿದರು ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ತಾಪಂ ಮಾಜಿ ಸದಸ್ಯ ಅಂದಾನಗೌಡ ಪೋ.ಪಾಟೀಲ್ ಹೇಳಿದರು.ತಾಲೂಕಿನ ಮುಧೋಳ ಗ್ರಾಮದಲ್ಲಿ ತ್ರಿಲಿಂಗೇಶ್ವರ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಗೂಳಿಬಸವೇಶ್ವರ ನಾಟ್ಯ ಸಂಘದಿಂದ ಆಯೋಜಿಸಿದ್ದ ಸಿಡಿದೆದ್ದ ಸೂರ್ಯ ಚಂದ್ರ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಂಗಭೂಮಿ ಕಲೆಯನ್ನು ಉಳಿಸಿ, ಬೆಳೆಸಲು ಎಲ್ಲರೂ ಕೈಜೋಡಿಸಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಆನಂದ ಉಳ್ಳಾಗಡ್ಡಿ ಮಾತನಾಡಿದರು.ಶ್ರೀಧರಮುರಡಿ ಹಿರೇಮಠ ಬಸವಲಿಂಗೇಶ್ವರ ಸ್ವಾಮೀಜಿ, ನಿಡಗುಂದಿಕೊಪ್ಪದ ಚನ್ನಬಸವ ಸ್ವಾಮೀಜಿ, ಕೆಆರ್‌ಪೇಟೆಯ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮುಮತಾಜಬಿ ಹಿರೇಮನಿ, ಉಪಾಧ್ಯಕ್ಷ ಅಶೋಕ ಭಜಂತ್ರಿ, ಮುಖಂಡರಾದ ಗುಡದೀರಪ್ಪ ಕಜ್ಜಿ, ಅಪ್ಪಣ್ಣ ಪಲ್ಲೇದ್, ಬಸವರಾಜ ಮಠದ, ಅಜ್ಜಯ್ಯ ಮಠದ, ಛತ್ರಪ್ಪ ಛಲವಾದಿ, ಗುರಪ್ಪ ಬಳಿಗಾರ್, ಬಾಶುಸಾಬ ಆರಬಳ್ಳಿನ, ಮಂಜುನಾಥ ಮುರಡಿ, ಯಲ್ಲಪ್ಪ ಹುನಗುಂದ ಇದ್ದರು.