ಮಕ್ಕಳು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಲಿ: ಸದಾನಂದ ಮಹಾರಾಜ್

| Published : Sep 26 2024, 10:10 AM IST

ಸಾರಾಂಶ

ಸಿಂಧನೂರು ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ವಿಜೇತರಿಗೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್ ಬಹುಮಾನ ವಿತರಿಸಿದರು.

ಸಿಂಧನೂರು: ಮಕ್ಕಳು ಮಹಾನ್ ದಾರ್ಶನಿಕರ ಜೀವನ ಚರಿತ್ರೆ ಓದಿ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸದಾನಂದ ಮಹಾರಾಜ್ ಹೇಳಿದರು.

ನಗರದ ಉಪ್ಪಾರವಾಡಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಈ ಸಾಲಿನ ತಾಲೂಕು ಮಟ್ಟದ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಸಹನೆ, ತಾಳ್ಮೆ, ತ್ಯಾಗ ಹಾಗೂ ಸಾಮರಸ್ಯ ಬದುಕಿನ ಬಗ್ಗೆ ತಿಳುವಳಿಕೆ ನೀಡುತ್ತಿದೆ ಎಂದರು.

ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಸ್.ಶರಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆಯರಾದ ರಮಾದೇವಿ ಶಂಭೋಜಿ, ಕೆ.ಚಂದ್ರಕಲಾ, ರೂಪಾಲಿ ಆನಂದ ಮಾತನಾಡಿದರು. ಕಾರ್ಯದರ್ಶಿ ಬೀರಪ್ಪ ಶಂಭೋಜಿ, ನಿರ್ಣಾಯಕ ಅಮರೇಶ ಹೂಗಾರ, ಜಿಲ್ಲಾ ಎಸ್ಜಿವಿ ಶರ್ಫುದ್ದಿನ್, ಕಬ್ ಮಾಸ್ಟರ್ ಶಂಕರದೇವರು ಹಿರೇಮಠ, ಗೈಡ್ ಕ್ಯಾಪ್ಟನ್ ಉಮಾದೇವಿ ಡಿ, ಬಸಮ್ಮ ಹಿರೇಮಠ, ಕವಿತಾ ಹೊಳಿಯಪ್ಪ, ಸ್ಕೌಟ್ ಮಾಸ್ಟರ್ಸ್ ಸಿದ್ದಪ್ಪ, ಬೀರಪ್ಪ ಉಪಸ್ಥಿತರಿದ್ದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿಕ್ಕಯ ಪಂಡಿತ ಕಬ್ ಮತ್ತು ಬುಲ್ ಬುಲ್ ಘಟಕಗಳು, ವಿರುಪಾಪುರ ಸರ್ಕಾರಿ ಪ್ರೌಢ ಶಾಲೆಯ ಸಾವಿತ್ರಿಬಾಯಿ ಫುಲೆ ಗೈಡ್ ಘಟಕ ತಂಡಗಳು ಜಿಲ್ಲಾ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆಗೆ ಆಯ್ಕೆಯಾಗಿವೆ.