ಚಳ್ಳಕೆರೆ ನಗರದ ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್‌ನಲ್ಲಿ ವಿಶ್ವ ಪ್ರಾಣಿಗಳ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳಿಗೆ ವಿವಿಧ ಪ್ರಾಣಿಗಳ ವೇಷಭೂಷಣದಲ್ಲಿ ಕಂಡರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ತ್ಯಾಗರಾಜ ನಗರದ ಚಿಗುರು ಈ-ಕಿಡ್ಸ್ ಪ್ರೀ ಸ್ಕೂಲ್‌ನಲ್ಲಿ ವಿಶ್ವಪ್ರಾಣಿಗಳ ದಿನಾಚರಣೆ ಅಂಗವಾಗಿ ಶಾಲೆಯ ಮಕ್ಕಳಿಗೆ ವಿವಿಧ ಪ್ರಾಣಿಗಳ ವೇಷಭೂಷಣವನ್ನು ತೊಡಿಸಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸ್ಥೆಯ ಕಾರ್ಯದರ್ಶಿ ಜೆ.ಸಿ.ಶಶಿಕುಮಾರ್ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಪ್ರಾಣಿಗಳ ಬಗ್ಗೆ ಸಹಾನುಭೂತಿಯನ್ನು ಹೊಂದಬೇಕಿದೆ. ನಮ್ಮ ಸ್ವಾರ್ಥಕ್ಕೆ ಕಾಡು ನಾಶಮಾಡಿ ಪ್ರಾಣಿಗಳಿಗೆ ಉಳಿಗಾವಿಲ್ಲದಂತೆ ಮಾಡುತ್ತಿದ್ದೇವೆ. ಕಾಡಿಲ್ಲದ ಕಾರಣ ಪ್ರಾಣಿಗಳು ನಾಡಿನತ್ತ ಬರುತ್ತಿದ್ದು, ಮನುಷ್ಯ ಹಾಗೂ ಪ್ರಾಣಿಗಳ ಮಧ್ಯ ಸಂಘರ್ಷ ಉಂಟಾಗಿದೆ. ಪ್ರಾಣಿಗಳು ಸಹ ಹಲವಾರು ಸಂದರ್ಭದಲ್ಲಿ ನಮಗೆ ಯಾವುದೇ ತೊಂದರೆ ನೀಡದಂತೆ ತಮ್ಮ ಜೀವನವನ್ನು ನಡೆಸುತ್ತವೆ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಪ್ರಾಣಿಗಳಿಂದ ಅಪಾಯವಿದ್ದರೂ ಅಂತಹ ಸಂದರ್ಭದಲ್ಲಿ ನಾವುಗಳು ಎಚ್ಚರಿಕೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಪ್ರಾಣಿ ಮತ್ತು ಮನುಷ್ಯರ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ. ಗ್ರಾಮೀಣ, ನಗರ ಪ್ರದೇಶಗಳಲ್ಲಿ ಚಿರತೆ, ಹುಲಿ, ಆನೆಗಳ ಕಾಟ ಹೆಚ್ಚುತ್ತಿದ್ದು, ನಾವು ಪ್ರತಿನಿತ್ಯವೂ ನಾಡುನಾಶದಿಂದ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ಆದ್ದರಿಂದ ಕಾಡುಬೆಳೆಸಿ, ನಾಡು ಉಳಿಸಬೇಕಿದೆ, ಕಾಡುಪ್ರಾಣಿಗಳಿಗೆ ಉಳಿವಿಗೆ ಎಲ್ಲರೂ ಪಣತೊಡಬೇಕಿದೆ ಇದಕ್ಕಾಗಿ ಮುಂಜಾಗ್ರತೆ ಅಗತ್ಯ. ಎಲ್ಲಾ ಪ್ರಾಣಿಗಳ ಬಗ್ಗೆ ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಬೃಂದಾ ವೆಂಕಟೇಶ್, ಸ್ಫೂರ್ತಿ ಶಶಿ, ಪುಪ್ಪ ಹರೀಶ್, ರಮ್ಯ, ಗೀತಾ ಮುಂತಾದವರು ಉಪಸ್ಥಿತರಿದ್ದರು.