ಸಾರಾಂಶ
ಪ್ರತಿಯೋಬ್ಬರು ಸಂಗೋಳ್ಳಿ ರಾಯಣ್ಣನಂತಹ ಪರಾಕ್ರಮಿಯು ಸ್ವಾತಂತ್ರ‍್ಯ ಹೋರಾಟದಲ್ಲಿ ಧುಮುಕಿ ಯುದ್ಧಗಳನ್ನು ಎದುರಿಸಿದ್ದು ಅವಿಸ್ಮರಣೀಯ
ಭಕ್ತಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಚೆಂಡೂರುಕನ್ನಡಪ್ರಭ ವಾರ್ತೆ ಯಲಬುರ್ಗಾ
ಹಾಲುಮತ ಸಮಾಜದ ಪ್ರತಿಯೊಬ್ಬರು ಸರ್ಕಾರದ ನಾನಾ ಯೋಜನೆ ಬಳಸಿಕೊಂಡು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಮುಖಂಡ ಕೆರಿಬಸಪ್ಪ ಚೆಂಡೂರು ಹೇಳಿದರು.ತಾಲೂಕಿನ ಬಂಡಿಹಾಳ ಗ್ರಾಮದಲ್ಲಿ ಹಾಲುಮತ ಸಮುದಾಯ ಗ್ರಾಮ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಭಕ್ತಶ್ರೇಷ್ಠ ಕನಕದಾಸರ ಕನಕದಾಸರ ಜಯಂತಿ ಕಾರ್ಯಕ್ರಮದ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೋಬ್ಬರು ಸಂಗೋಳ್ಳಿ ರಾಯಣ್ಣನಂತಹ ಪರಾಕ್ರಮಿಯು ಸ್ವಾತಂತ್ರ‍್ಯ ಹೋರಾಟದಲ್ಲಿ ಧುಮುಕಿ ಯುದ್ಧಗಳನ್ನು ಎದುರಿಸಿದ್ದು ಅವಿಸ್ಮರಣೀಯವಾಗಿದೆ ಎಂದರು.
ಕನಕದಾಸರು ಕುಲ-ಕುಲ ಎಂದು ಹೊಡೆದಾಡದಿರಿ, ದೇಹ, ಆತ್ಮ, ಗಾಳಿ, ನೀರು, ಬೆಳಕು ಇವುಗಳಿಗೆ ಯಾವ ಕುಲವಿದೆ ಎಂದು ತಿಳಿಸಿಕೊಟ್ಟ ಮಹಾನ್ ಸಂತರಾಗಿದ್ದಾರೆ.೧೫ ಮತ್ತು ೧೬ನೇ ಶತಮಾನದ ಜನಪ್ರಿಯ ಭಕ್ತಿಪಂಥದ ಮುಖ್ಯ ದಾಸಶ್ರೇಷ್ಠರಲ್ಲಿ ಕನಕದಾಸರು ಒಬ್ಬರು. ದಾಸ ಸಾಹಿತ್ಯದಲ್ಲಿ ಜೀವನ ಪಾಠ ಕಂಡುಕೊಂಡವರು. ಅವರ ಜೀವನ ಚರಿತ್ರೆ, ಕೀರ್ತನೆಗಳು ಎಲ್ಲರಿಗೂ ಸ್ಫೂರ್ತಿಯಾಗಿವೆ ಎಂದು ಹೇಳಿದರು.ಕನಕದಾಸ ಜಯಂತಿ ನಿಮಿತ್ತ ಗ್ರಾಮದಲ್ಲಿ ಬೆಳಗ್ಗೆ ಭಾವಚಿತ್ರ ಮೆರವಣಿಗೆ, ಅಭಿಷೇಕ, ಅನ್ನಸಂರ್ತಪಣೆ, ಡೊಳ್ಳು ಕುಣಿತ, ಮಹಿಳೆಯರಿಂದ ಕುಂಭಕಳಸ ಸೇವೆ ಜರುಗಿತು.
ಈ ಸಂದರ್ಭದಲ್ಲಿ ಬಸವರಾಜ ನಿಡಗುಂದಿ, ಶರಣಪ್ಪ ಕಳಸಪ್ಪನವರ, ಶಿವರಾಜ ಕಳಸಪ್ಪನವರ, ಶರಣಪ್ಪ ನಿಡಗುಂದಿ, ಬಸವರಾಜ ಹೆಗಡೆ, ಬಸವರಾಜ ಮುಗಳಿ, ಶರಣಪ್ಪ ನಾಗರಾಳ, ಕೆರಿಯಪ್ಪ, ಮಹೇಶ ಕಳಸಪ್ಪನವರ,ಪವನ ಕಳಸಪ್ಪನವರ, ವಿಷ್ಣು ಕರಿಗಾರ, ಮಂಜುನಾಥ ಕುಮಾರ ಮತ್ತಿತರರು ಇದ್ದರು.