ಪ್ರತಿಯೊಬ್ಬರೂ ಸಂವಿಧಾನ ಗೌರವಿಸೋಣ: ಶ್ರೀನಿವಾಸ್‌ ಚಾಪಲ್

| Published : Jan 27 2024, 01:16 AM IST

ಪ್ರತಿಯೊಬ್ಬರೂ ಸಂವಿಧಾನ ಗೌರವಿಸೋಣ: ಶ್ರೀನಿವಾಸ್‌ ಚಾಪಲ್
Share this Article
  • FB
  • TW
  • Linkdin
  • Email

ಸಾರಾಂಶ

ವಡಗೇರಾ ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣವನ್ನು ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ನೆರವೇರಿಸಿ ಮಾತನಾಡಿದರು.

ವಡಗೇರಾ ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣವನ್ನು ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ನೆರವೇರಿಸಿ ಮಾತನಾಡಿದರು.ಕನ್ನಡಪ್ರಭ ವಾರ್ತೆ ಯಾದಗಿರಿ

ವಡಗೇರಾ ಪಟ್ಟಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣವನ್ನು ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ದೇಶಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅತ್ಯುತ್ತಮ ಸಂವಿಧಾನವನ್ನು ನೀಡುವ ಮೂಲಕ ನಮ್ಮೆಲ್ಲರ ಬಾಳಿಗೆ ದಾರಿದೀಪವಾಗಿದ್ದಾರೆ. ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸೋಣ ಎಂದು ಹೇಳಿದರು.

ಗಣರಾಜ್ಯೋತ್ಸವ ಒಂದು ರಾಷ್ಟ್ರೀಯ ಹಬ್ಬವನ್ನಾಗಿ ನಾವು ಆಚರಿಸುತ್ತೇವೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ನಾವೆಲ್ಲರು ಪಾಲಿಸೋಣ. ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದೆ ಎಂದು ಹೇಳಿದರು.

ಗ್ರೇಡ್-2 ತಹಸೀಲ್ದಾರ್ ಪ್ರಕಾಶ ಹೊಸಮನಿ, ಶಿರಸ್ತೇದಾರ ಸಂಗಮೇಶ್ ದೇಸಾಯಿ, ರಾಮನಗೌಡ, ರಾಮುಲು ನಾಯಕ, ಕಂದಾಯ ನಿರೀಕ್ಷಕ ಸಂಜೀವ ಕುಮಾರ್ ಕಾವಲಿ, ಓಂ ಪ್ರಕಾಶ್, ಸಾಹೇಬರೆಡ್ಡಿ ಪಾಟೀಲ್, ನಹಿಮ್ ಸಾಬ್, ಗೊಲ್ಲಾಳಪ್ಪ ಕಟಿಗಿಕಾರ, ಸಹನಾ, ಪ್ರಮುಖರಾದ ಗ್ರಾಪಂ ಅಧ್ಯಕ್ಷ ಅಶೋಕ್ ಸಾಹುಕಾರ ಕರಣಗಿ, ಉಪಾಧ್ಯಕ್ಷರಾದ ರಂಗಮ್ಮ ಹುಲಿ, ಸಿದ್ದಣ್ಣಗೌಡ ಕಾಡಂನೊರ, ಡಾ. ಸುಭಾಷ್ ಕರಣಗಿ, ಬಾಷುಮಿಯಾ ನಾಯ್ಕೋಡಿ, ಮರೆಪ್ಪ ಜಡಿ, ಬಸವರಾಜ ಸೊನ್ನದ, ಡಾ. ಮರಿಯಪ್ಪ ನಾಟೇಕಾರ ಇತರರಿದ್ದರು. ರವಿಕುಮಾರ ನೀಲಹಳ್ಳಿ ನಿರೂಪಿಸಿ, ವಂದಿಸಿದರು.