ಪ್ರಾ. ಆರ್.ಎಂ. ಕಲ್ಲನಗೌಡ್ರ ಮಾತನಾಡಿ, ಕನ್ನಡವು ಗಟ್ಟಿತನ ಭಾಷೆ, ಕನ್ನಡದ ಭಾಷೆಗೆ ಇರುವ ಶಕ್ತಿಯ ಇನ್ನಾವುದೆ ಭಾಷೆಯಲ್ಲಿ ಸಿಗದು ಎಂದರು.
ಮುಳಗುಂದ: ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಹೀಗೆ ಕನ್ನಡವೂ ಕನ್ನಡಿಗರೆಲ್ಲರ ಮನದ ಹಾಗೂ ಮನೆಯ ಭಾಷೆಯಾಗಿರಬೇಕು ಎಂದು ನಿವೃತ್ತ ಪ್ರಾ. ಸಾಹಿತಿ ಅನ್ನದಾನ ಹಿರೇಮಠ ತಿಳಿಸಿದರು.ಪಟ್ಟಣದ ಆರ್.ಎನ್. ದೇಶಪಾಂಡೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಪರಿಷತ್ತು ಸಹಯೋಗದಲ್ಲಿ ನಡೆದ ತಿಂಗಳ ನಾಡ ಹಬ್ಬದ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾ. ಆರ್.ಎಂ. ಕಲ್ಲನಗೌಡ್ರ ಮಾತನಾಡಿ, ಕನ್ನಡವು ಗಟ್ಟಿತನ ಭಾಷೆ, ಕನ್ನಡದ ಭಾಷೆಗೆ ಇರುವ ಶಕ್ತಿಯ ಇನ್ನಾವುದೆ ಭಾಷೆಯಲ್ಲಿ ಸಿಗದು. ನಾಡು- ನುಡಿ ಜಾಗೃತಿ ಎಲ್ಲರಲೂ ಬೆಳೆಯಬೇಕು. ಕರ್ನಾಟಕದ ಏಕೀಕರಣಕ್ಕಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಕೊಡುಗೆ ಅಪಾರ ಎಂದರು.
ಪ್ರೊ. ವಿಶ್ವನಾಥ ಟಿ. ಅವರು, ಕನ್ನಡ ಭಾಷೆಯ ಸಂಕ್ಷಿಪ್ತ ಇತಿಹಾಸ ಹಾಗೂ ಪ್ರಸ್ತುತ ಜನರಲ್ಲಿರುವ ಇಂಗ್ಲಿಷ್ ಭಾಷೆ ವ್ಯಾಮೋಹದ ಕುರಿತು ತಿಳಿಸಿದರು.ಈ ವೇಳೆ ಕರ್ನಾಟಕ ವಿದ್ಯಾವರ್ಧಕ ಸಂಘ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸದಸ್ಯರಾದ ವೀರಣ್ಣ ವಡ್ಡೀನ, ನಾಗರಾಜ, ಸುರೇಶ ಗೌಡ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಎನ್.ಕೆ. ಕಡೆಮನಿ ನಿರೂಪಿಸಿದರು. ಶಂಕರಣ್ಣ ಸಂಕಣ್ಣವರ ಹಾಗೂ ಸಂಗಡಿಗರಿಂದ ಗೀತ ಗಾಯನ ನಡೆಯಿತು.ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ಛಲ ಇರಲಿಗದಗ: ವಿದ್ಯಾರ್ಥಿಗಳ ಗುರಿ, ಉದ್ದೇಶಗಳು ಕನಸುಗಳ ಮೂಲಕ ಅವರನ್ನು ಉತ್ತೇಜಿಸುವಂತೆ ರೂಪುಗೊಳ್ಳಬೇಕು. ಆ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಅಲ್ಲದೇ ಗುರಿ ಮುಟ್ಟುವ ಛಲ ಹೊಂದಬೇಕೆಂದು ಆಶಾಕಿರಣ ರಿಹ್ಯಾಬಿಟೇಶನ್ ಸೆಂಟರ್‌ನ ವೈದ್ಯ ಡಾ. ಶಿವಪ್ರಸಾದ ದೊಡ್ಡಮನಿ ತಿಳಿಸಿದರು.ತಾಲೂಕಿನ ಹುಲಕೋಟಿ ಗ್ರಾಮದ ಸ್ವಾಮಿ ವಿವೇಕಾನಂದ ಪಪೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ 2025- 26ನೇ ಸಾಲಿನ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.ಶ್ರೀನಿವಾಸರಡ್ಡಿ ಗಿರಡ್ಡಿಯವರ ಮಾತನಾಡಿ, ಸತತ ಪರಿಶ್ರಮ, ಶ್ರದ್ಧೆಯಿಂದ ಗುರಿ ಸಾಧಿಸುವ ಛಲವಿದ್ದರೆ ವಿದ್ಯಾರ್ಥಿಗಳಿಗೆ ಅಸಾಧ್ಯವಾದುದು ಯಾವುದು ಇಲ್ಲ ಎಂದರು.
ಕಾಲೇಜಿನ ಪ್ರಾ. ಪ್ರಿಯಾ ಎಂ. ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧಿಸಲು ಕೆಲವು ಅಂಶಗಳನ್ನು ತ್ಯಾಗ ಮಾಡುವುದರ ಮೂಲಕ ಓದಿನಲ್ಲಿ ಏಕಾಗ್ರತೆಯನ್ನು ಹೊಂದಬೇಕು. ಅಲ್ಲದೆ ಸಾಧಿಸುವ ಛಲದಿಂದ ಮುನ್ನುಗ್ಗಬೇಕೆಂದರು.ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.