ಮನುಷ್ಯ ಹುಟ್ಟುತ್ತಾನೆ, ಸಾಯುತ್ತಾನೆ. ಈ ಎರಡರ ಮಧ್ಯದ ಸಮಯದಲ್ಲಿ ಬದುಕು ಕಟ್ಟಿಕೊಳ್ಳುವವನು ಅಂಧ,ಚಂದದಿಂದ ಸಂಸಾರ ನಡೆಸಬೇಕು
ಗಂಗಾವತಿ: ಮನುಷ್ಯನ ಹುಟ್ಟು ಕೈಯಲ್ಲಿಲ್ಲ, ಸಾವು ಗೊತ್ತಿಲ್ಲ. ಈ ಎರಡರ ನಡುವೆ ಇರುವ ಬದುಕು ಮಾತ್ರ ನಿರಂತರವಾಗಿರುತ್ತದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ನಗರದ ಶ್ರೀಇಂಟರ್ ನ್ಯಾಷನಲ್ ಹಾಲ್‌ನಲ್ಲಿ ಜರುಗಿದ ವಿಪ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ಪಷ್ಠಿಪೂರ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಮನುಷ್ಯ ಹುಟ್ಟುತ್ತಾನೆ, ಸಾಯುತ್ತಾನೆ. ಈ ಎರಡರ ಮಧ್ಯದ ಸಮಯದಲ್ಲಿ ಬದುಕು ಕಟ್ಟಿಕೊಳ್ಳುವವನು ಅಂಧ,ಚಂದದಿಂದ ಸಂಸಾರ ನಡೆಸಬೇಕು.ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಭಗವಂತ ನೀಡಿದ ಅಮೂಲ್ಯ ಜೀವಕ್ಕೆ ಬೆಲೆ ಬರುತ್ತದೆ ಎಂದರು.
ಎಚ್.ಆರ್. ಶ್ರೀನಾಥ ಕುಟುಂಬದವರು ಧಾರ್ಮಿಕವಾಗಿದ್ದಾರೆ. ಭಗವಂತ ಇವರಿಗೆ ಇನ್ನೂ ಜನಸೇವೆ ಮಾಡುವ ಅವಕಾಶ ಕಲ್ಪಿಸಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಎಚ್. ಶ್ರೀನಾಥ, ಪತ್ನಿ ಸಂಧ್ಯಾ ಶ್ರೀನಾಥ ಅವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಕೊಟ್ಟೂರು ಸ್ವಾಮೀಜಿ, ಕೌತಳಂ ಗುರುಗಳು, ದೇವಿಕಾನಂದ ಗುರೂಜಿ,ದುರ್ಗಾದೇವಿ ಬೆಟ್ಟದ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸಿದ್ದರು.
ವೇದಿಕೆ ಮೇಲೆ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಲೀಕಯ್ಯ ಗುತ್ತೆದಾರ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಪರಣ್ಣ ಮುನವಳ್ಳಿ,ಜಿ.ವೀರಪ್ಪ,ಉದ್ಯಮಿ ಕೆ.ಕಾಳಪ್ಪ,ಎಚ್.ಎಂ. ಸಿದ್ದರಾಮಸ್ವಾಮಿ, ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ,ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು, ರಶ್ಮೀ ರಾಜಶೇಖರ ಹಿಟ್ನಾಳ್, ಮೌನೇಶ ದಢೇಸ್ಗೂರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.