ಸಂಘಟನೆಗಳು ಸಮಾಜದ ಧ್ವನಿಯಾಗಲಿ

| Published : Nov 04 2024, 12:45 AM IST

ಸಾರಾಂಶ

ಸಂಘ ಸಂಸ್ಥೆಗಳು ಸಮಾಜದ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ನುಡಿದರು.ತಾಲೂಕಿನ ನಾವಲಗಿ ಗ್ರಾಮದಲ್ಲಿ ಜಂಗಮ ಸಮಾಜದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಯುವಕ ಸಂಘದ ಉದ್ಘಾಟನಾ ಸಮಾರಂಭದದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿರುವ ಬಡವರ ಪರ ಟೊಂಕಕಟ್ಟಿ ಸರ್ವ ಪದಾಧಿಕಾರಿಗಳು ನಿಂತುಕೊಂಡು ಮೇಲೆತ್ತುವ ಕಾರ್ಯ ಮಾಡಿದಾಗ ಮಾತ್ರ ಸಂಘ ಸ್ಥಾಪನೆಗೊಂಡಿರುವುದಕ್ಕೆ ನಿಜಕ್ಕೂ ಸಾರ್ಥಕವಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಂಘ ಸಂಸ್ಥೆಗಳು ಸಮಾಜದ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ನುಡಿದರು.

ತಾಲೂಕಿನ ನಾವಲಗಿ ಗ್ರಾಮದಲ್ಲಿ ಜಂಗಮ ಸಮಾಜದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಯುವಕ ಸಂಘದ ಉದ್ಘಾಟನಾ ಸಮಾರಂಭದದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿರುವ ಬಡವರ ಪರ ಟೊಂಕಕಟ್ಟಿ ಸರ್ವ ಪದಾಧಿಕಾರಿಗಳು ನಿಂತುಕೊಂಡು ಮೇಲೆತ್ತುವ ಕಾರ್ಯ ಮಾಡಿದಾಗ ಮಾತ್ರ ಸಂಘ ಸ್ಥಾಪನೆಗೊಂಡಿರುವುದಕ್ಕೆ ನಿಜಕ್ಕೂ ಸಾರ್ಥಕವಾಗುತ್ತದೆ ಎಂದರು.

ತೇರದಾಳ-ನಾವಲಗಿ ಗಂಗಾಧರ ಶ್ರೀಗಳು ಮಾತನಾಡಿ, ಸಂಘಟನೆಯಿಂದ ಸಮಾಜಕ್ಕೆ ಬಲ ಬರುತ್ತದೆ ಸರ್ವ ಸದಸ್ಯರು ಹೊದಾಣಿಕೆಯಿಂದ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದರು. ಪ್ರವಚನ ಕೇಸರಿ ಶ್ರೀಶೈಲಯ ಹಿರೇಮಠ ಶ್ರೀಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ಮರೇಗುದ್ದಿ ಅಡವಿಸಿದ್ದೇಶ್ವರ ಮಠದ ಗುರುಪಾದ ಸ್ವಾಮೀಜಿ, ಮುತ್ತಿನಕಂತಿಮಠದ ಶಿವಲಿಂಗ ಶಿವಾಚಾರ್ಯರು, ಸಿದ್ದು ಕೊಣ್ಣೂರ, ವಿದ್ಯಾಧರ ಸವದಿ, ಜಮಖಂಡಿಯ ಜಂಗಮ ಸಮಾಜದ ಹಿರಿಯರಾದ ಅಶೋಕ ಗಾಂವಿ, ದುರದುಂಡಯ್ಯ ಲಿಂಗದ, ಶಿವಪುತ್ರಯ್ಯ ಸಿದ್ದಗಿರಿಮಠ, ಗ್ರಾಪಂ ಅಧ್ಯಕ್ಷ ಸದಾಶಿವ ಸವದಿ, ಶಿವಾನಂದ ಬಾಗಲಕೋಟಮಠ, ಬಸಯ್ಯ ಹಿರೇಮಠ, ಗುರು ಮರಡಿಮಠ, ಶಿವಲಿಂಗಯ್ಯ ಅಮ್ಮಣಗಿಮಠ, ಅಶೋಕ ಮರಡಿಮಠ, ಮುಪ್ಪಯ್ಯ ಹಿರೇಮಠ, ಶಿವಲಿಂಗಯ್ಯ ಅಮಣ್ಣಗಿಮಠ, ಮಲ್ಲಪ್ಪ ಗಣಿ, ದಾನಪ್ಪ ಅಸಂಗಿ, ಬಸಯ್ಯ ಹಿರೇಮಠ, ಸಂಘದ ಅಧ್ಯಕ್ಷ ಗಂಗಯ್ಯ ಹಿರೇಮಠ, ಕುಮಾರ ಹಿರೇಮಠ, ಬಸಯ್ಯ ಕಾಡದೇವರ, ಮಹಾಂತೇಶ ಕಾಡದೇವರ ಸೇರಿದಂತೆ ಅನೇಕರಿದ್ದರು.