ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಗ್ರಾಮೀಣ ಕ್ರೀಡಾ ಪ್ರತಿಭೆಗಳು ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಬೇಕು ಎಂದು ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಆಶಿಸಿದರು.ಅಮೃತಿ ಗ್ರಾಮದಲ್ಲಿ ಆಯೋಜಿಸಿದ್ದ ಮೇಲುಕೋಟೆ ವೃತ್ತಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿ, ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಶಿಕ್ಷಣದ ಜತೆಗೆ ಕ್ರೀಡೆ ಅತಿ ಮುಖ್ಯ. ಪ್ರತಿಶಾಲೆಯಲ್ಲೂ ವಿದ್ಯಾರ್ಥಿಗಳನ್ನು ಕನಿಷ್ಠ ಒಂದು ಅವಧಿ ಕ್ರೀಡಾಚಟುವಟಿಕೆಯಲ್ಲಿ ತೊಡಗಿಸಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ತ್ಯಾಗರಾಜು ಮಾತನಾಡಿ, ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬ ಮಾತಿನಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ ಎಂದರು.ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವಿದೆ. ನಮ್ಮ ಗ್ರಾಮದಲ್ಲಿ ಕ್ರೀಡಾಕೂಟ ಆಯೋಜಿಸಲು ಗ್ರಾಮಸ್ಥರು ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿದರು ಎಂದರು.
ಕ್ರೀಡಾಕೂಟಕ್ಕೆ ಜಿಪಂ ಮಾಜಿ ಸದಸ್ಯರಾದ ಎಚ್.ಮಂಜುನಾಥ್ ಮತ್ತು ಎಚ್.ತ್ಯಾಗರಾಜು ಊಟದ ವ್ಯವಸ್ಥೆ ಮಾಡಿದ್ದರೆ. ಶಂಕರ್ ಪದಕಗಳು, ವಿಶೇಷ ಬಹುಮಾನಗಳು ಹಾಗೂ ಟ್ರೋಪಿಕೊಡುಗೆ ನೀಡಿದ್ದರು. ಗ್ರಾಮದ ಗುಂಡು ತೋಪನ್ನೇ ಗ್ರಾಮಸ್ಥರು ಪರಿಶ್ರಮದಿಂದ ಕ್ರೀಡಾಂಗಣವನ್ನಾಗಿ ಪರಿವರ್ತಿಸಿದ್ದರು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ಅಮೃತಿ ಎಸ್.ಡಿಎಂಸಿ ಅಧ್ಯಕ್ಷ ನಾಗೇಶ್, ಗ್ರಾಪಂ ಅಧ್ಯಕ್ಷೆ ಮಂಜುಳ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವಿಜಯೇಂದ್ರಮೂರ್ತಿ, ಇಸಿಒ ಶ್ರೀನಿವಾಸ್ ರವೀಂದ್ರ, ಜಕ್ಕನಹಳ್ಳಿ ಪ್ರೌಢಶಾಲೆ ಎಸ್ ಡಿಎಂಸಿ ಅಧ್ಯಕ್ಷ ಶಂಕರ್, ಸಮಾಜಸೇವಕ ಈರಣ್ಣ, ಪುನೀತ್, ಗ್ರಾಪಂ ಸದಸ್ಯರಾದ ಸೋಮಶೇಖರ್, ಜಯರಾಮೇಗೌಡ, ಗಂಗಮ್ಮ, ಎಚ್.ರಾಜಶೇಖರ್, ಯೋಗಣ್ಣ, ಮೃತಿ ಲೋಕೇಶ್, ಪದವೀದರ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್, ದೈಹಿಕ ಶಿಕ್ಷಕರಸಂಘದ ಕಾರ್ಯದರ್ಶಿ ರಮೇಶ್, ನಿರ್ದೇಶಕ ಚಂದ್ರು, ಪಿಡಿಓ ಸುರೇಶ್, ದಾಸೇಗೌಡ, ಕರಣ್ ಕುಮಾರ್, ಕೆಂಪೇಗೌಡ, ಮಾದೇಶ್ , ವಿಎಸ್‌ಎಸ್‌ಎನ್ ಬಿ ಅಧ್ಯಕ್ಷ ಜೆ.ಪಿ.ಶಿವಶಂಕರ್, ಪ್ರಕಾಶ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಕುಮಾರ್ , ಚನ್ನೇಗೌಡ, ನಟರಾಜು, ಮತ್ತಿತರರು ಇದ್ದರು.