ಸಾರಾಂಶ
ಪ್ಲಾಸ್ಟಿಕ್ ನಮಗೆ, ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಮಾರಕವಾಗಿದೆ. ಇದು ಕೊಳೆಯಲಾಗದ ಪದಾರ್ಥ. ಇದನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಎಸ್.ಎನ್. ರಜಪೂತ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಈ ಮೊದಲು ಸ್ವರ್ಣ ಯುಗ, ಬೆಳ್ಳಿ ಯುಗ ತಾಮ್ರ ಯುಗ ಮತ್ತು ಕಬ್ಬಿನ ಯುಗಗಳಿದ್ದವು. ಈಗ ಪ್ಲಾಸ್ಟಿಕ್ ಯುಗವಾಗಿದೆ. ಪ್ಲಾಸ್ಟಿಕ್ ನಮಗೆ, ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಮಾರಕವಾಗಿದೆ. ಇದು ಕೊಳೆಯಲಾಗದ ಪದಾರ್ಥ. ಇದನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಭೂಗೋಳಶಾಸ್ತ್ರದ ಮುಖ್ಯಸ್ಥ ಎಸ್.ಎನ್. ರಜಪೂತ ಹೇಳಿದರು.ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟೆ ಐ.ಕ್ಯೂ.ಎ.ಸಿ, ಭೂಗೋಳಶಾಸ್ತ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಅ ಮತ್ತು ಬ ಘಟಕಗಳ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮಕಾರ್ಯಕ್ರಮದಲ್ಲಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ. ಒಡೆಯರ್ ಪ್ಲಾಸ್ಟಿಕ್ ಮುಕ್ತರಾಗಿ ಪ್ರಕೃತಿ ಮತ್ತು ಜೀವ ಸಂಕುಲ ಉಳಿಸೋಣ ಪ್ಲಾಸ್ಟಿಕ್ ಬ್ಯಾಗಗಳ ಬಳಕೆ ನಿಷೇಧಿಸಿ ಬಟ್ಟೆ ಬ್ಯಾಗ್ ಗಳನ್ನು ಉಪಯೋಗಿಸಬೇಕೆಂದರು.
ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ಸಿದ್ದಪಡಿಸಿದ ಬಟ್ಟೆ ಬ್ಯಾಗ್ ಗಳನ್ನು ಪ್ರದರ್ಶಿಸಲಾಯಿತು. ಐ.ಕ್ಯೂ.ಎ.ಸಿ ಸಂಯೋಜಕ ಪಿ.ಕೆ. ಚೌಗಲಾ ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ.ಎಂ.ವಿ. ಬಾಜಪ್ಪನವರ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಜಿ.ಐ. ನಂದಿಕೋಲಮಠ ಉಪಸ್ಥಿತರಿದ್ದರು.