ಕಡೂರುರೋಗ ಬರುವುದಕ್ಕಿಂತ ಮುನ್ನವೇ ಅಗತ್ಯ ಕ್ರಮಗಳನ್ನು ವಹಿಸುವುದು ಉತ್ತಮ. ಆರೋಗ್ಯಕರ ಭಾರತ ಕಟ್ಟಲು ಎಲ್ಲರೂ ಕೈ ಜೋಡಿಸೋಣ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.

ಪಲ್ಸ್ ಪೋಲಿಯೋ ಲಸಿಕೆಯ ಅಭಿಯಾನದ ಪೂರ್ವಭಾವಿ ಸಭೆ

ಕನ್ನಡಪ್ರಭ ವಾರ್ತೆ ಕಡೂರು

ರೋಗ ಬರುವುದಕ್ಕಿಂತ ಮುನ್ನವೇ ಅಗತ್ಯ ಕ್ರಮಗಳನ್ನು ವಹಿಸುವುದು ಉತ್ತಮ. ಆರೋಗ್ಯಕರ ಭಾರತ ಕಟ್ಟಲು ಎಲ್ಲರೂ ಕೈ ಜೋಡಿಸೋಣ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಡಿ.21ರಂದು ನಡೆಯಲಿರುವ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತ ಪೋಲಿಯೋ ಮುಕ್ತವಾಗಿದ್ದರೂ ವೈರಾಣುಗಳು ಯಾವಾಗ ಬೇಕಿದ್ದರೂ ಮನುಷ್ಯನ ದೇಹದಲ್ಲಿ ಸಕ್ರಿಯವಾಗಬಹುದು. ಆದ್ದರಿಂದ ಮುಂದಿನ ಪೀಳಿಗೆಯನ್ನು ಆರೋಗ್ಯಯುತವಾಗಿಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪೋಲಿಯೋ ಲಸಿಕಾ ಅಭಿಯಾನ ಯಶಸ್ವಿಯಾಗಲು ತಾಲೂಕು ಆಡಳಿತ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ನಮ್ಮ ದೇಶ ಪೋಲಿಯೋ ಮುಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದರೂ ನೆರೆ ರಾಷ್ಟ್ರಗಳಾದ ಆಫ್ಘಾನಿಸ್ಥಾನ, ಪಾಕಿಸ್ತಾನಗಳಲ್ಲಿ ಪೋಲಿಯೊ ಕಂಡು ಬಂದಿದೆ. ಆದ್ದರಿಂದ ಈ ಭಾರಿ ರಾಷ್ಟ್ರಾದ್ಯಂತ ಅಭಿಯಾನ ಮತ್ತೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ 5ವರ್ಷದೊಳಗಿನ 15,867 ಮಕ್ಕಳನ್ನು ಗುರುತಿಸಲಾಗಿದೆ. ಡಿ.21 ಭಾನುವಾರ ಬೆಳಿಗ್ಗೆ 8 ಗಂಟೆಗೆ ತಾಲೂಕು ಆಸ್ಪತ್ರೆಯಲ್ಲಿ ಶಾಸಕ ಕೆ.ಎಸ್.ಆನಂದ್ ಅಭಿಯಾನಕ್ಕೆ ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು. ಈ ಬಾರಿ 636 ವ್ಯಾಕ್ಸಿನೇಟರ್ ಗಳನ್ನು ನಿಯೋಜಿಸಿದೆ. ಗ್ರಾಮಾಂತರ ಪ್ರದೇಶಗಳಲ್ಲಿ 10 ದಿನ ಮತ್ತು ನಗರ ಪ್ರದೇಶ ಗಳಲ್ಲಿ 4 ದಿನ ಅಭಿಯಾನ ಮುಂದುವರಿಯುವುದು. ಡಿ.22 ಮತ್ತು 23ರಂದು ಮನೆಗಳ ಭೇಟಿ ಮಾಡಿ ಅಭಿಯಾನದಿಂದ ಹೊರಗಿ ದ್ದವರಿಗೆ ಲಸಿಕೆ ಹಾಕಲಾಗುವುದು. ಕಡೂರು, ಬೀರೂರು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳಲ್ಲಿ ಬೂತ್ ಗ ಳನ್ನು ಸ್ಥಾಪಿಸಲಾಗುವುದು. ಅಂಗನವಾಡಿ ಕೇಂದ್ರಗಳಲ್ಲೂ ಬೂತ್ ಸ್ಥಾಪಿಸುವ ಜತೆಗೆ ಸಂಚಾರಿ ಘಟಕಗಳನ್ನೂ ನಿಯೋಜಿಸ ಲಾಗುವುದು. ತಾಲೂಕಿನ ತೋಟಗಳು ಮತ್ತು ಇಟ್ಟಿಗೆ ಗೂಡುಗಳಲ್ಲಿ ಸರ್ವೇ ನಡೆಸಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಿಂದ ಬಂದಿರುವ ತಾತ್ಕಾಲಿಕ ಕೆಲಸಗಾರರ 94 ಮಕ್ಕಳನ್ನೂ ಗುರುತಿಸಿದ್ದು ಅವರು ಹೆಚ್ಚಿನ ಅಪಾಯಕ್ಕೆ ಒಳಪಡುವವರು ಎಂದು ಗುರುತಿಸಲಾಗಿದೆ. ಡಿ.18ರಿಂದ ಲಸಿಕೆಗಳನ್ನು ತಾಲ್ಲೂಕಿನಲ್ಲಿ ಸಂಗ್ರಹಿಸಲಾಗುವುದು, ಅಂದಿನಿಂದ ಡೀಪ್ ಫ್ರೀ ಜರ್ ಇರುವ ಪಿಎ ಚ್ ಸಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ಇರಲು ಮೆಸ್ಕಾಂನವರು ಸಹಕರಿಸಬೇಕು ಎಂದು ಕೋರಿದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್ ಗ್ರಾಪಂಗಳು ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ವಾಹನಗಳ ಮೂಲಕ ಪ್ರಚಾರ ನಡೆಸುವಂತೆ ಸೂಚಿಸಿದರು. ಬೀರೂರು ಬಿಇಒ ಬುರ್ಹನುದ್ದೀನ್ ಚೋಪ್ದಾರ್, ಬೀರೂರು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಕಡೂರು ಪುರಸಭೆ ಆರೋಗ್ಯಾಧಿಕಾರಿ ಶ್ರೀನಿವಾಸಮೂರ್ತಿ, ಬಿಇಒ ಕಚೇರಿ ನಾಗ ರಾಜ್, ಸಿಡಿಪಿಒ ಕಚೇರಿ ಮೇಲ್ವಿಚಾರಕಿ ಕವಿತಾ, ರೋಟರಿ ಕ್ಲಬ್ ಅಧ್ಯಕ್ಷ ರಘುರಾಮ್, ಲಯನ್ಸ್ ಕ್ಲಬ್ ಅಧ್ಯಕ್ಷ ತ್ಯಾಗರಾಜ್, ವಿವಿಧ ಇಲಾಖೆಯ ಅಧಿಕಾರಿಗಳು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. 11ಕೆಕೆಡಿಯು1.ಕಡೂರು ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿದರು. ಇಒ ಸಿ.ಆರ್.ಪ್ರವೀಣ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಇದ್ದರು.