ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಭಾರತದ ಮಣ್ಣಿಗಾಗಿ ಹೋರಾಟ ನಡೆಸಿ, ಈ ನೆಲಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿರುವ ವೀರ ಸೈನಿಕರನ್ನು ನಾವೆಲ್ಲರೂ ‘ಮಹಾತ್ಮರು’ ಎನ್ನುವ ಮೂಲಕ ಸ್ಮರಿಸಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಆಡಿಟೋರಿಯಂನಲ್ಲಿ ಕಾರ್ಗಿಲ್ ಗೆಲುವಿಗೆ 25 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಯುವ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ‘ಮುಟ್ಟಿದರೆ ತಟ್ಟಿಬಿಡ್ತೀವಿ’ ಎಂಬ ಅರ್ಥ ಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವ ಬ್ರಿಗೇಡ್ ವತಿಯಿಂದ ಆಯೋಜಿಸಲಾಗಿದ್ದ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಬಗ್ಗು ಬಡಿಯಲೆಂದೆ ಇಲ್ಲಿಯ ಪೋಲಿಸರಿಂದ ಸಣ್ಣ ಪ್ರಯತ್ನ ನಡೆದಿದ್ದು, ದುರ್ದೈವದ ಸಂಗತಿಯಾಗಿದೆ. ಆದರೆ, ಬಗ್ಗುವ ಜನಾಂಗಕ್ಕೆ ಸೇರಿದವರು ನಾವಲ್ಲ. ತಟ್ಟುವವರ ಜನಾಂಗಕ್ಕೆ ಸೇರಿದವರಾಗಿದ್ದೇವೆ. ಹೀಗಾಗಿ ನಮ್ಮನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ನಮ್ಮ ಪೋಲಿಸರು ನನ್ನ ಕಾರ್ಯಕ್ರಮ ತಡೆದಿದ್ದರು ಚಿಂತೆ ಇರಲಿಲ್ಲ. ಯಾಕೆಂದರೆ ಈ ಐತಿಹಾಸಿಕ ದಿನದ ಮಹತ್ವವನ್ನು ಈಗಾಗಲೇ ನಾನು ನೂರಾರು ಯುವಕರಿಗೆ ಮನ ಮುಟ್ಟಿಸಿದ್ದೇನೆ ಎಂದರು.ಈ ದೇಶದ ಮೇಲೆ ಹಿಂದಿನಿಂದಲೂ ಬ್ರಿಟಿಷರು, ಮೊಘಲರು ಹಾಗೂ ತುರಕರು ಸೇರಿದಂತೆ ಹಲವರು ಆಕ್ರಮಣಗಳನ್ನು ಮಾಡಿದ್ದಾರೆ. ಈ ಎಲ್ಲಾ ಆಕ್ರಮಣಗಳಲ್ಲಿ ಮುಸ್ಲಿಂರ ಆಕ್ರಮಣ ಬರ್ಬರತೆಯಿಂದ ಹಾಗೂ ಕ್ರೂರತೆಯಿಂದ ಕೂಡಿತ್ತು. ಆದರೆ, ನಮ್ಮ ಸೈನಿಕ ಮಾತ್ರ ಯಾವುದಕ್ಕೂ ಎದೆಗುಂದದೆ ಹೋರಾಟ ನಡೆಸಿ ವೀರ ವಿಜಯನಾಗಿ ಹೊರಹೊಮ್ಮಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.
ಭಾರತ ದೇಶ ಎಲ್ಲದರಲ್ಲೂ ಮಾತೃ ಸ್ವರೂಪವನ್ನು ಕಂಡಂತ ದೇಶ. ಆದರೆ, ಅಂದಿನ ಕಾಲದಲ್ಲಿ ಮುಸ್ಲಿಂ ಆಕ್ರಮಣಕಾರರು ಹಿಂದೂ ಹೆಣ್ಣು ಮಕ್ಕಳನ್ನು ಬರ್ಬರವಾಗಿ ಹಿಂಸೆ ನೀಡಿ,ಮತಾಂತರ ಮಾಡುತ್ತಿದ್ದರು. ನಾವು ಇಂದಿಗೂ ಗಮನಿಸುವ ಅಂಶವೆಂದರೆ ಕಳೆದ ಹತ್ತು ವರ್ಷಗಳಿಂದ ಪಾಕಿಸ್ತಾನ ಸತ್ತು ಹೋಗಿದೆ.ಯುದ್ಧ ಹೋಗಲಿ, ಭಯೋತ್ಪಾದನೆ ಚಟುವಟಿಕೆಗಳ ಸದ್ದು ಸಹ ಮಾಡುತ್ತಿಲ್ಲ ಎಂದು ಹೇಳಿದರು.ಕಾಶ್ಮೀರದ ಮೂರನೇ ಒಂದು ಭಾಗ ಇದೀಗ ನಮ್ಮ ಹತ್ತಿರ ಇಲ್ಲ. ಪಾಕಿಸ್ತಾನದ ಹಿಡಿತದಲ್ಲಿ ಇದೆ. ದೇಶದ ಸೈನಿಕರಿಗೆ ಯಾವ ರೀತಿ ಉತ್ತರ ನೀಡಬೇಕು ನೀಡಿ ಎಂದು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹೇಳಿದರು.ಅದಕ್ಕೆ ಉತ್ತರವಾಗಿ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದರು. ೯೩ ಸಾವಿರ ಜನ ಸೈನಿಕರ ಎದೀರಿಗೆ ನಮ್ಮ ಸೈನಿಕರು ನಿಂತಿದ್ದರು. ಸೈನಿಕ ಯಾವಾಗಲೂ ಯುದ್ಧ ಗೆಲ್ಲುತ್ತಾನೆ. ಸೋಲುವುದು ಬರೀ ರಾಜಕಾರಣಿಗಳು ಮಾತ್ರ ಎಂದು ತಿಳಿಸಿದರು.
ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿರ ನಮ್ಮ ಸೈನಿಕರ ಶೌರ್ಯ ಶ್ಲಾಘನೀಯ. ೨೦೧೪ರಿಂದ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತವನ್ನು ಹಾಗೂ ಭಾತರದ ಸೈನಿಕರ ಮಾನವನ್ನು ಕಳೆಯಲು ಬಿಡುತ್ತಿಲ್ಲ. .ಇದಕ್ಕೆ ಉದಾಹರಣೆಗೆ ಪುಲ್ವಾಮಾ ದಾಳಿ ಸೇರಿದಂತೆ ಹಲವು ದಾಳಿಗಳಿಗೆ ಪ್ರತ್ಯುತ್ತರವಾಗಿ ಭಾರತ ಉತ್ತರ ನೀಡಿದೆ. ಇಡೀ ವಿಶ್ವದಲ್ಲಿ ಸೈನಿಕರಿಗೆ ಗೌರವ ಕೊಡುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ ಎಂದು ಹೇಳಿದರು.ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಬ್ರಿಗೇಡಿಯರ್ ಶರಣಯ್ಯ ಸ್ವಾಮಿ, ಶಿವಶರಣಪ್ಪ ತಾವರಖೇಡ್, ನೆವ್ವಿ ಮುಖ್ಯಸ್ಥ ಅನಿಲ್ ಮೋರೆ, ಯುವ ಬ್ರಿಗೇಡ್ ಮುಖ್ಯಸ್ಥ ಅನಿಲ ತುಂಬಾಕೆ, ನಾಗೇಂದ್ರ ಕಾಬಡೆ, ಶ್ರೀಶೈಲ ಮೂಲಗೆ, ಅಶ್ವಿನ್ ಡಿ, ಮಹಾದೇವಯ್ಯ ಕರದಳ್ಳಿ, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಪೂರ್ಣಿಮಾ, ಇದ್ದರು.ಪ್ರತಿದಿನ ನಮ್ಮ ನಮ್ಮ ಮನೆಯಲ್ಲಿ ಸಾಯಂಕಾಲದ ಹೊತ್ತಿಗೆ ಸೈನಿಕರ ಹೆಸರಿನಲ್ಲಿ ಒಂದು ದೀಪವನ್ನು ಹಚ್ಚುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಗಡಿಯಲ್ಲಿ ಕಾಯುವ ಸೈನಿಕನಿಂದ ಇಂದು ನಾವು ನಮ್ಮ ಮನೆಯಲ್ಲಿ ನೆಮ್ಮದಿಯ ನಿದ್ದೆ ಮಾಡುತ್ತಿದ್ದೇವೆ. ನಮ್ಮ ನೆಮ್ಮದಿಗೆ ಕಾರಣವಾಗಿರುವ ಸೈನಿಕರನ್ನು ನೆನೆಯದೇ ಹೋದರೆ ನಮ್ಮ ಜನ್ಮ ಸಾರ್ಥಕವಾಗದು.
- ಚಕ್ರವರ್ತಿ ಸೂಲಿಬೆಲೆ, ಚಿಂತಕ,ಯುವ ಬ್ರಿಗೇಡ್ ಸಂಸ್ಥಾಪಕ.;Resize=(128,128))
;Resize=(128,128))