ಅಭಿವೃದ್ಧಿಗಾಗಿ ಶಾಸಕರ ಕೈ ಬಲಪಡಿಸೋಣ

| Published : Oct 11 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ, ಚಿಂತನೆ, ಕ್ಷೇತ್ರದ ನೂತನ ಯೋಜನೆಗಳ ಅನುಷ್ಠಾನಕ್ಕೆ ನಾವೆಲ್ಲರೂ ಶಾಸಕರ ಕೈಬಲಪಡಿಸೋಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರ, ಚಿಂತನೆ, ಕ್ಷೇತ್ರದ ನೂತನ ಯೋಜನೆಗಳ ಅನುಷ್ಠಾನಕ್ಕೆ ನಾವೆಲ್ಲರೂ ಶಾಸಕರ ಕೈಬಲಪಡಿಸೋಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ ಹೇಳಿದರು.

ಶಾಸಕ ಯಶವಂತರಾಯಗೌಡ ಪಾಟೀಲ ಅವರ ಜನ್ಮದಿನದ ನಿಮಿತ್ತ ಇಂಡಿ ಬ್ಲಾಕ್ ಕಾಂಗ್ರೆಸ್ ಹಾಗೂ ಅಭಿಮಾನಿಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿ ಮಾತನಾಡಿದರು. ಮತಕ್ಷೇತ್ರವನ್ನು ಶೈಕ್ಷಣಿಕ, ನೀರಾವರಿ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರಿದ್ದು, ಇಂಡಿ ಜಿಲ್ಲೆಯನ್ನಾಗಿಸುವ ಕನಸು, ನೂತನ ನಗರ ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿಯ ಚಿಂತನೆ ಹೊಂದಿರುವ ಶಾಸಕ ಯಶವಂತರಾಯಗೌಡರಿಗೆ ಬೆಂಬಲವಾಗಿ ನಿಲ್ಲೊಣ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಅವರು ಬಸವ ಸಿದ್ದಾಂತವನ್ನು ಒಪ್ಪಿಕೊಂಡವರು. ಅದರ ಆಧಾರದ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಸರ್ವ ಸಮುದಾಯವನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುಂತೆ ಮತಕ್ಷೇತ್ರದ ಸರ್ವ ಸಮುದಾಯಕ್ಕೆ ರಾಜಕೀಯ ಅಧಿಕಾರ ನೀಡಿದ್ದಾರೆ. ಪ್ರವಾಹ, ಮಳೆಯಿಂದ ಜನರು, ರೈತರು ಸಂಕಷ್ಟದಲ್ಲಿರುವುದರಿಂದ ಜನ್ಮದಿನ ಆಚರಣೆ ಮಾಡಬಾರದು ಎಂದು ತಿಳಿಸಿದ್ದಾರೆ. ಹೀಗಾಗಿ ಜನ್ಮದಿನ ರೋಗಿಗಳಿ ಹಣ್ಣುಹಂಪಲ, ರಕ್ತದಾನ ಶಿಬಿರ ಹಮ್ಮಿಕೊಂಡು ಸರಳವಾಗಿ ಆಚರಿಸಲಾಗಿದೆ ಎಂದರು.

ಮುಸ್ತಾಕ ಅಹ್ಮದ ಇಂಡಿಕರ, ಸದಾಶಿವ ಪ್ಯಾಟಿ, ಟಿ.ಎಸ್.ಖಟ್ಟೆ, ಜಾವೀದ ಮೋಮಿನ, ಅತಿಕ ಅಹ್ಮದ ಮೋಮಿನ, ಮಹೇಶಗೌಡ ಲಚ್ಯಾಣ, ಬಾಬು ಗುಡಮಿ, ಧರ್ಮು ವಾಲಿಕಾರ, ಬಿ.ಸಿ.ಸಾಹುಕಾರ, ಹಣಮಂತ ಅರವತ್ತು, ಸುಭಾಷ್ ಬಾಬರ, ರಮಜಾನ ವಾಲಿಕಾರ, ಆಶೀಫ್ ಕಾರಬಾರಿ, ಸಣ್ಣಪ್ಪ ತಳವಾರ, ಮಹಿಬೂಬ ಜಹಾಗೀರದಾರ, ಸಲೀಮ ಶೇಖ, ಶಿವು ಚವ್ಹಾಣ, ಸದಾಶಿವ ಹೊನಸೂರೆ, ಶಾಹಿಸಷಾ ಜಹಾಗೀರದಾರ, ಜಟ್ಟೆಪ್ಪ ರವಳಿ, ಯಮುನಾಜಿ ಸಾಳುಂಕೆ, ಆದಮ್ ಇಂಡಿಕರ, ಶಪಿಕ ರೂಗಿ, ಇಮ್ರಾನ ಬುಡಕಿ, ನಿರ್ಮಲಾ ತಳಕೇರಿ, ಶೈಲಜಾ ಜಾಧವ ಇತರರು ಇದ್ದರು.