ಸಾರಾಂಶ
ಕುರುಗೋಡು: ಪ್ರತಿಯೊಂದು ಮಗು ಕೂಡತನಲ್ಲಿರುವ ಪ್ರತಿಭೆಯನ್ನುಗುರುತಿಸುವಂತಹ ಸಾಮರ್ಥ್ಯಇರುತ್ತದೆ. ಅದನ್ನು ಹೊರಗಡೆತರಬೇಕಾದಜವಾಬ್ದಾರಿ ಶಿಕ್ಷಕರ ಮೇಲಿದೆಎಂದು ಹಿಂದುಳಿದ ವರ್ಗಗಳ ಇಲಾಖೆಯಜಿಲ್ಲಾಅಧಿಕಾರಿಜಾಲಾಲಪ್ಪಅಭಿಪ್ರಾಯ ವ್ಯಕ್ತಪಡಿಸಿದರು.ಸಮೀಪದ ಕೋಳೂರಿನ ಗಾಂಧಿತತ್ವಆಧಾರಿತ ಬಾಲಕಿಯರ ವಸತಿ ಶಾಲೆಯ ೬ ನೇ ತರಗತಿ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ವೆಲ್ಕಮ್ ಪಾರ್ಟಿ ಹಾಗೂ ೨೦೨೩-೨೪ ನೇ ಸಾಲಿನಲ್ಲಿಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ದೀಪಾನನ್ನು ಅಭಿನಂದಿಸಿ ಗೌರವಿಸಿ ಮಾತನಾಡಿದಅವರು,ಬಳ್ಳಾರಿ ಜಿಲ್ಲೆಯಲ್ಲಿ ೧೯ ಮುರಾರ್ಜಿದೇಸಾಯಿ ಶಾಲೆಗಳಿದ್ದು, ಇಲ್ಲಿ ಕಳೆದ ವರ್ಷ ೯೫೦ ಎಸ್ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿಗಾಂಧಿತತ್ವ ಶಾಲೆಯ ದೀಪಾ ಟಾಪರ್ ಆಗಿದ್ದಾಳೆ ಎಂದು ಶ್ಲಾಘನಿಯ ವ್ಯಕ್ತಪಡಿಸಿದರು. ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಇಲಾಖೆ ಕೊಡುತ್ತದೆ. ಎಲ್ಲಾ ಸೌಲಭ್ಯಗಳ ನಡುವೆಯೂತನ್ನ ಫಲಿತಾಂಶ ಹೆಚ್ಚಿಸುವಲ್ಲಿ ಪ್ರಯತ್ನದ ಹಾದಿಯಲ್ಲಿರುವ ವಿದ್ಯಾರ್ಥಿಗಳ ತಂಡಕೂಡಇರುತ್ತದೆ. ಆ ತಂಡಗಳಲ್ಲಿ ದೀಪಾ ಎನ್ನುವ ವಿದ್ಯಾರ್ಥಿಯಂತಹ ಪ್ರತಿಭೆಯುಕೂಡಇರುತ್ತದೆ. ಕಳೆದ ವರ್ಷ ಬಹಳ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡತನ್ನ ಹಗಲಿರುಳು ಶ್ರಮದಿಂದಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಎಂದು ವಿದ್ಯಾರ್ಥಿಯನ್ನುಕೊಂಡಾಡಿದರು.ನAತರ ೬ನೇ ತರಗತಿ ವಿದ್ಯಾರ್ಥಿಗಳನ್ನು ಅಧಿಕಾರಿಗಳು, ಶಾಲಾ ಶಿಕ್ಷಕರು,ಸಂಗೀತ ಶಿಕ್ಷಕರಾದ ವಸಂತ್ಕುಮಾರ್ ಸಾಹಿತ್ಯ ಬರೆದು ಮಕ್ಕಳನ್ನು ಸ್ವಾಗತಿಸಿದರು.ಗಣಿತ ಶಿಕ್ಷಕ ರಾಘವೇಂದ್ರ ಮಾತನಾಡಿ, ದೀಪಾ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದ್ದಾಳೆ. ಅವಳ ಕಠಿಣ ಪರಿಶ್ರಮವೇ ಯಶಸ್ಸಿನ ದಾರಿ ದೀಪವಾಗಿದೆ ಶ್ರಮಪಟ್ಟರೆಯಶಸ್ಸುಖಂಡಿತಎAದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ವಸತಿ ಶಾಲೆಯ ಪ್ರಾಂಶುಪಾಲ ಡಿ. ವಿಶ್ವನಾಥ ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ಒಳ್ಳೆಯ ವಾತಾವರಣದಲ್ಲಿ ಬಂದಿದ್ದೇವೆ. ನೀವು ಶ್ರಮ ಹಾಕಿ ಓದಿದರೆರಾಜ್ಯಕ್ಕೆಟಾಪರ್ ಪಡೆದಅಂಕಿತ ಸರಿಗಟ್ಟುತ್ತೀರಿ ಸಮಸ್ಯೆಗಳೇ ಎಲ್ಲವೂಅಲ್ಲ, ಅವುಗಳಿಗೆ ಪರಿಹಾರಇದೆ. ಹಂತ ಹಂತವಾಗಿ ಅವುಗಳನ್ನು ಬಗೆಹರಿಸುವ ಪ್ರಯತ್ನ ಮಾಡಬೇಕುಎಂದು ಹೇಳಿದರು.ನಂತರಎಸ್ಎಸ್ಎಲ್ ಸಿ ಪರೀಕ್ಷೆಯಕನ್ನಡ ವಿಷಯದಲ್ಲಿ ೧೨೫ ಕ್ಕೆ ೧೨೫ ಅಂಕ ಪಡೆದ ದೀಪಾ, ರಕ್ಷಿತಾಇಬ್ಬರ ವಿದ್ಯಾರ್ಥಿಗಳಿಗೆ ಸಹಕರಿಸಿದ ಕನ್ನಡ ಶಿಕ್ಷಕಿ ವಿ.ಮಾಲತಿ ಯಶಸ್ವಿ ಯಾಗಿರುವುದರಿಂದ ೨೦೨೪ರ ಕರುನಾಡಕನ್ನಡ ಸಿರಿ ಬಳಗದಿಂದ ಕನ್ನಡ ಸಾಧಕಿ ಪ್ರಶಸ್ತಿ ಪದಕ, ಪ್ರಮಾಣ ಪತ್ರ, ಕನ್ನಡದ ಶಾಲು ನೀಡಿ ಸನ್ಮಾನಿಸಿ ಗೌರವಿಸಿದರು.ಸತತ ೮ ವರ್ಷದಿಂದಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಗೊಂಡ ಸಮಾಜ ವಿಜ್ಞಾನದಅತಿಥಿ ಶಿಕ್ಷಕರಗಳಾದ ಬಿ.ಮಾರೆಪ್ಪ, ದೈಹಿಕ ಶಿಕ್ಷಕ ಜಡೆಮ್ಮ, ಮುಖ್ಯಅಡುಗೆ ಸಹಾಯಕಿ ಹೆಚ್.ಹುಲಿಗೆಮ್ಮ, ರಾತ್ರಿಕಾವಲುಗಾರರಾದ ಹೇಮಾವತಿ,ವಿಜಯಕುಮಾರ್, ಮೀನಾಕ್ಷಮ್ಮಇವರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ವಿಶ್ವನಾಥ್, ರಾಮಕೃಷ್ಣ ಪ್ರಸಾದ್, ಚೇರ್ಮನ್ಕಿರಣ್ಕುಮಾರ್. ಬಳ್ಳಾರಿ ರೂರಲ್ ಪಾಲಿಟೆಕ್ನಿಕ್ ನ ಚೇರ್ಮನ್ಕಿರಣ್ಕುಮಾರ್, ಪ್ರಾಂಶುಪಾಲ ರಾಮಕೃಷ್ಣ ಪ್ರಸಾದ್, ಶಿಕ್ಷಕರಾದ ಭರತ್ಗೌಡ, ವಸಂತ್ಕುಮಾರ್, ಹೀನಾ ನಾಜ್, ವೀರೇಶ್, ನೀಲಮ್ಮ,ಶರಣಬಸವ, ಕೆ.ಮಲ್ಲಿಕಾರ್ಜುನ, ವಿಶಾಲಾಕ್ಷಿ, ಉಮೇಶ್, ಪುನೀತ್ ಇದ್ದರು.