ರೈತರು ಸಹಕಾರ ಸಂಘದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ: ಸಂಘದ ಉಪಾಧ್ಯಕ್ಷ ರಾಮಚಂದ್ರಪ್ಪ

| Published : Sep 26 2024, 10:17 AM IST

ರೈತರು ಸಹಕಾರ ಸಂಘದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಲಿ: ಸಂಘದ ಉಪಾಧ್ಯಕ್ಷ ರಾಮಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ಸಂಘಗಳಲ್ಲಿ ಹಲವಾರು ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಎಸ್‌ಎಫ್‌ಸಿಎಸ್ ಸಂಘದ ಉಪಾಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು. ಹೊಸಕೋಟೆಯಲ್ಲಿ ರೈತರ ಸೇವಾ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಸರ್ವ ಸದಸ್ಯರ ಸಭೆ

ಕನ್ನಡಪ್ರಭವಾರ್ತೆ ಹೊಸಕೋಟೆರೈತರ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ಸಂಘಗಳಲ್ಲಿ ಹಲವಾರು ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಎಸ್‌ಎಫ್‌ಸಿಎಸ್ ಸಂಘದ ಉಪಾಧ್ಯಕ್ಷ ರಾಮಚಂದ್ರಪ್ಪ ತಿಳಿಸಿದರು.ತಾಲೂಕಿನ ಜಡಿಗೆನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ಸರ್ಕಾರಗಳು ಸಹಕಾರ ಸಂಘಗಳ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸಂಘದಲ್ಲಿ ಠೇವಣಿ ಇಡುವುದು, ಕೃಷಿ ಸಾಲ ಆಭರಣ ಸಾಲ ಪಡೆಯುವುದು, ಸೇರಿದಂತೆ ಆರ್ಥಿಕ ವಹಿವಾಟನ್ನು ನಿರಂತರವಾಗಿ ಮಾಡುವುದರ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಿ ಎಂದರು.ಸಂಘದ ನಿರ್ದೇಶಕ ಮಾಕನಹಳ್ಳಿ ರಮೇಶ್ ಮಾತನಾಡಿ, ಜಡಿಗೇನಹಳ್ಳಿ ಎಸ್‌ಎಫ್‌ಸಿಎಸ್ ಸಂಘ 1977 ರಲ್ಲಿ ಪ್ರಾರಂಭವಾಗಿ 49 ವರ್ಷಗಳನ್ನು ಪೂರೈಸಿದ್ದು, ಪ್ರಸ್ತುತ 5610 ಷೇರುದಾರರನ್ನು ಹೊಂದಿದೆ. ಈ ಹಿಂದೆ ಷೇರಿನ ಬೆಲೆ ₹೫೦೦ ನಿಗದಿಪಡಿಸಲಾಗಿತ್ತು. ಆದರೆ ಈಗ ಸರ್ಕಾರವೇ ಪ್ರತಿ ಷೇರಿನ ಬೆಲೆ ₹1000 ಸಾವಿರ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಷೇರುದಾರರು ಉಳಿದ ₹500 ಪಾವತಿ ಮಾಡಬೇಕು ಎಂದರು.ಸಂಘದ ಸಿಇಒ ಜೆಆರ್ ರಾಜಣ್ಣ ಮಾತನಾಡಿ, ಪ್ರಸ್ತುತ ವರ್ಷದಲ್ಲಿ ಸಂಘವು ₹18.5 ಲಕ್ಷ ಲಾಭಾಂಶವನ್ನು ಗಳಿಸಿದ್ದು, ಮುಂದಿನ ದಿನಗಳಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಸಂಘಕ್ಕೆ ಆದಾಯ ಬರುವಂತೆ ಮಾಡುವ ಚಿಂತನೆ ನಡೆಸಲಾಗಿದೆ ಎಂದರು.ಭತ್ಯೆಪ್ಪ, ಮುನಿ ಅಣ್ಣಯ್ಯ, ಜೆ.ಎಂ.ನಟರಾಜು, ಎಸ್.ರಮೇಶ್, ಕರಿಯಪ್ಪ, ಸರ್ದಾರ್ ಬೇಗ್, ಚಿಕ್ಕನಾರಾಯಣ ಸ್ವಾಮಿ, ನಾರಾಯಣಪ್ಪ, ಶಿಲ್ಪ, ಜಯಲಕ್ಷ್ಮೀ, ಅಂಬರೀಶ್ ಹಾಜರಿದ್ದರು.