ಕನಕದಾಸರ ಬದುಕು ಸರ್ವರಿಗೂ ದಾರಿದೀಪವಾಗಲಿ: ಶಾಸಕ ಶಿವರಾಮ ಹೆಬ್ಬಾರ್

| Published : Nov 19 2024, 12:51 AM IST

ಕನಕದಾಸರ ಬದುಕು ಸರ್ವರಿಗೂ ದಾರಿದೀಪವಾಗಲಿ: ಶಾಸಕ ಶಿವರಾಮ ಹೆಬ್ಬಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕನಕದಾಸರು ಸೇರಿದಂತೆ ಇನ್ನು ಅನೇಕ ದಾರ್ಶನಿಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಇಡೀ ಮಾನವ ಕುಲಕ್ಕೆ ಆದರ್ಶವನ್ನು ನೀಡಿದಂತ ಶ್ರೇಷ್ಠ ಸ್ಥಾನದಲ್ಲಿಡಬೇಕು.

ಮುಂಡಗೋಡ: ಕನಕದಾಸರ ಜೀವನ ಚರಿತ್ರೆಯು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸೋಮವಾರ ಮುಂಡಗೋಡ ತಾಲೂಕು ಆಡಳಿತ ಹತ್ತಿರದ ಕನಕಪೀಠ ಆವರಣದಲ್ಲಿ ಜಿಲ್ಲಾ ಮಟ್ಟದ ೫೩೭ನೇ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕದಾಸರು ಸೇರಿದಂತೆ ಇನ್ನು ಅನೇಕ ದಾರ್ಶನಿಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಇಡೀ ಮಾನವ ಕುಲಕ್ಕೆ ಆದರ್ಶವನ್ನು ನೀಡಿದಂತ ಶ್ರೇಷ್ಠ ಸ್ಥಾನದಲ್ಲಿಡಬೇಕು. ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದವರು. ಅವರ ಆದರ್ಶವನ್ನು ಅಳವಡಿಸಿಕೊಂಡರೆ ಜೀವನ ಕೂಡ ಸಾರ್ಥಕವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ, ಕನಕದಾಸರಂತೆ ಸರ್ಕಾರಿ ನೌಕರರಿರಬಹುದು ಅಥವಾ ಸಾರ್ವಜನಿಕರಿರಬಹುದು ನಾವು ಕೂಡ ಮಾಡುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಅಲ್ಲದೇ ಅವರ ಆದರ್ಶದ ಬಗ್ಗೆ ಮಕ್ಕಳಲ್ಲಿ ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.ತಹಸೀಲ್ದಾರ್ ಶಂಕರ್ ಗೌಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಮುಖಂಡರಾದ ಬಸವರಾಜ ಠಣಕೆದಾರ್ ಮಾತನಾಡಿದರು. ಡಾ. ಪಿ. ನಾಗೇಂದ್ರ ಉಪನ್ಯಾಸ ನೀಡಿದರು.

ಶಿರಸಿ ಉಪ ವಿಭಾಗಾಧಿಕಾರಿ ಕಾವ್ಯಾರಾಣಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಶಿವಾನಂದ ಕುರುಬರ, ರಾಜು ಗುಬ್ಬಕ್ಕನವರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಬಿಜೆಪಿ ಅಧ್ಯಕ್ಷ ಮಂಜುನಾಥ ಪಾಟೀಲ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಮುಖ್ಯಾಧಿಕಾರಿ ಚಂದ್ರಶೇಖರ, ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ, ತಾಪಂ ಸದಸ್ಯೆ ಗೀತಾ ಯಲ್ಲಾಪುರ, ಚಿದಾನಂದ ಹರಿಜನ, ಕಸಾಪ ಅಧ್ಯಕ್ಷ ವಸಂತ ಕೊಣಸಾಲಿ, ಶಿವಾನಂದ ದೊಡ್ಡಮನಿ, ಯಲ್ಲಪ್ಪ ಕುರುಬರ, ಪೀರಪ್ಪ ಸಾಗರ, ನಾಗರಾಜ ಉಪಾಧ್ಯ, ಮಂಜುನಾಥ ಕೋಣನಕೆರೆ ಹಾಗೂ ಪಪಂ ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಕೆ.ಕೆ. ಕರವಿನಕೊಪ್ಪ ನಿರೂಪಿಸಿದರು. ಬಿಆರ್‌ಸಿ ಸಮನ್ವಯಾಧಿಕಾರಿ ಜಿ.ಎನ್. ನಾಯ್ಕ ವಂದಿಸಿದರು.

ಮೆರವಣಿಗೆ: ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ಕನಕದಾಸರ ಭಾವಚಿತ್ರದ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಮೆರವಚಣಿಗೆಯುದ್ದಕ್ಕೂ ಗೆಜ್ಜೆ ಕುಣಿತ, ಡೊಳ್ಳು ಕುಣಿತಗಳು ಗಮನ ಸೆಳೆದವು.