ನಾಡಿನ ಸಾಹಿತ್ಯ, ಸಂಸ್ಕೃತಿ ಶ್ರೀಮಂತಗೊಳಿಸುವ ಕಾರ್ಯವಾಗಲಿ

| Published : May 21 2024, 12:30 AM IST

ನಾಡಿನ ಸಾಹಿತ್ಯ, ಸಂಸ್ಕೃತಿ ಶ್ರೀಮಂತಗೊಳಿಸುವ ಕಾರ್ಯವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ಸಂಘ ಸಂಸ್ಥೆಗಳ ಸಾಮಾನ್ಯ ಧನಸಹಾಯ ಯೋಜನೆಯಡಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಂಗೀತ ಕವಿಗೋಷ್ಠಿ ಕನ್ನಡ ಹಾಡುಗಳ ಪ್ರಸಾರ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ಮಂಜೂರು ಮಾಡಿರುವ ಹಣ ಸರ್ಮಪಕವಾಗಿ ಬಳಸಿಕೊಂಡು, ನಾಡಿನ ವಿವಿಧ ಜಿಲ್ಲೆಗಳಿಂದ ದೇಶದ ವಿವಿಧ ರಾಜ್ಯಗಳಿಂದ ಮತ್ತು ಸ್ಥಳಿಯ ಕಲಾವಿದರು, ಕವಿಗಳನ್ನು ಕರೆಸಿ ಕಾರ್ಯಕ್ರಮ ಮಾಡಿರುವುದು ಶ್ಲಾಘನೀಯವಾದ ಕೆಲಸವಾಗಿದೆ ಎಂದು ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ನುಡಿದರು.

ಅವರು ನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ 2021-22ನೇ ಸಾಲಿನ ಸಂಘ ಸಂಸ್ಥೆಗಳ ಸಾಮಾನ್ಯ ಧನಸಹಾಯ ಯೋಜನೆಯಡಿಯಲ್ಲಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಂಗೀತ ಕವಿಗೋಷ್ಠಿ ಕನ್ನಡ ಹಾಡುಗಳ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೊಬೈಲ್‌ ಮಾನವರಾಗಿ ಜೀವನ ನಡೆಸುತ್ತಿರುವ ನಾವು ಮಾಹಿತಿ ತಂತ್ರಜ್ಞಾನವನ್ನು ನಾಡಿನ ಸಾಹಿತ್ಯ ಸಂಸ್ಕೃತಿ ಶ್ರೀಮಂತಗೊಳಿಸುವ ಕಾರ್ಯಕ್ಕಾಗಿ ಉಪಯೋಗ ಮಾಡಬೇಕು ಎಂದು ಮಕ್ಕಳಿಗೆ, ಪಾಲಕರು ವಿದ್ಯಾರ್ಥಿಗಳಿಗೆ ಶಿಕ್ಷಕರು ಕಲಿಸಿಕೊಡಬೇಕಾಗಿದೆ ಎಂದರು.

ಭರತ ನಾಟ್ಯ ಕು. ಭವಾನಿ ಎಸ್ ಕವಲ್ದಾರ ಕಲಬುರಗಿ, ಕು.ಅನುಶ್ರೀ ಮುಂಬಯಿ, ಜಾನಪದ ವಾದ್ಯ ಶೇಷಪ್ಪಾ ಚಿಟ್ಟಾ ನಡೆಸಿಕೊಟ್ಟರು, ಹರಿಷ ಚಕ್ರವರ್ತಿ, ಸೆಬಾಸ್ಟಿನ್ ಡಾ. ಸುನೀತಾ ಬಿಕ್ಲೆ, ಕನ್ನಡ ಹಾಡುಗಳು ಹಾಡಿದರು, ಮಾತೋಶ್ರೀ ರಮಾಬಾಯಿ ಸಾಂಸ್ಕೃತಿಕ ಸಂಘ ಅಧ್ಯಕ್ಷ ಭಾರತಿ ತಂಡದವರು ಭಜನೆ ಹಾಡುಗಳು ಹಾಡಿದರು.

ಡಾ.ಬಸವರಾಜ ವಿಜಯಪೂರ, ಡಾ. ಸುನೀತಾ ಪಿ ಸೂರ್ಯವಂಶಿ, ಸುರೇಖ ಕಾಂಬಳೆ ಅಜೀತ , ದಿಲೀಪ ಮೋಘ, ಅವಿನಾಶ ಸೋನೆ, ಪ್ರಿಯಾಂಕ ಎಚ್ ಬಿ, ಡಾ. ಹಣಮಂತರಾಯ ಜೆವರ್ಗಿ, ರವಿದಾಸ ಕಾಂಬಳೆ, ಬಸವೇಶ್ವರಿ ರಾಯಬಾಗ, ಡಾ. ವಿಲಾಸ ಕಾಂಬಳೆ ಬೆಳಗಾವಿ, ಶಿವಾನಂದ, ರಾಜು ಮಾರುತಿ ಪವಾರ ಸ್ವರಚಿತ ಕವಿತೆಗಳನ್ನು ವಾಚನ ಮಾಡಿದರು.

ಬೀದರ್ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಡಾ. ರಾಮಚಂದ್ರಪ್ಪ ಗಣಾಪೂರ ವಿಶೇಷ ಉಪನ್ಯಾಸ ನೀಡಿ, ಗ್ರಾಮೀಣ ಭಾರತದ ಜಾನಪದ ಸಾಹಿತ್ಯ ಸಂಸ್ಕೃತಿ ಜೀವಂತವಾಗಿಡಬೇಕಾದರೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಸಾಹಿತ್ಯ ಸಂಸ್ಕೃತಿ ಪ್ರಸಾರ ಮಾಡುವ ಕಾರ್ಯ ಮಾಡಬೇಕು. ಗ್ರಾಮೀಣ ಒಗಟುಗಳಲ್ಲಿ ನಡೆ ನುಡಿ ನಡಾವಳಿ ಹಿಡಿಟ್ಟಿದೆ. ಜಾನಪದ ವಾದ್ಯಗಳು, ಸಹಾಸ ಕಲೆಗಳು ಆಟ ಓಟಗಳು, ಜಾತ್ರೆ ಉತ್ಸವಗಳಲ್ಲಿನ ಸಂಸ್ಕೃತಿ ನಮ್ಮ ನಾಡಿನ ದೇಶದ ಘನತೆ ಗೌರವ ಹೆಚ್ಚಿಸುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಎಂ ಎಸ್ ಮನೋಹರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡದ ಕೆಲಸಕ್ಕಾಗಿ ಟೊಂಕಕಟ್ಟಿ ದುಡಿಯುವ ಸುಬ್ಬಣ್ಣ ಕರಕನಳ್ಳಿ ಸೇವೆ ಗುರುತಿಸಿ ಏಷ್ಯಾ ಅಂತಾರಾಷ್ಟ್ರೀಯ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ತಂದಿರುವ ಗೌರವಾಗಿದೆ ಎಂದರು. ಕರ್ನಾಟಕದವರಾಗಿ ಮುಂಬೈನಲ್ಲಿ ಅನಾಥ ಆಶ್ರಮಗಳು, ನಡೆಸುತ್ತಿರುವ ಸುರೇಶ ಪ್ರಭಾಕರ ರೇವಣಕರ ಮಾತನಾಡಿದರು.

ಮಹಾರಾಷ್ಟ್ರದ ಸತಾರಾದಿಂದ ಪ್ರಸಾದ ಚಂದ್ರಕಾಂತ ಭಾಗವಹಿಸಿದರು. ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರೆ ಪ್ರೇಮ ಅವಿನಾಸ ಪಕ್ಕಲವಾಡ ನಿರೂಪಿಸಿದರು.