ಸಾರಾಂಶ
ಬಾಂಗ್ಲಾ ನುಸುಳುಕೋರರ ವಿರುದ್ಧ ಎನ್.ಐ.ಎ. ತನಿಖೆ ನಡೆಸಲು ಹಾಗೂ ನಕಲಿ ಆಧಾರ್ ಕಾರ್ಡ್ ಮಾಡುತ್ತಿರುವವರ ಜಾಲದ ಕುರಿತು ಸನಿಖೆ ನಡೆಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕೆಲ ದಿನಗಳ ಹಿಂದೆ ಹಾಸನದ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಗಾರೆ ಕೆಲಸದವರ ಸೋಗಿನಲ್ಲಿದ್ದ ಇಂತಹ ಮೂವರು ನುಸುಳುಕೋರರನ್ನು ಪೊಲೀಸರು ಬಂಧಿಸಿದ್ದು, ಮೂವರೂ ಪಶ್ಚಿಮ ಬಂಗಾಳ ವಿಳಾಸವಿರುವ ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಲ್ಲಿ ಈಗಾಗಲೇ ಬಂಧನವಾಗಿರುವ ಬಾಂಗ್ಲಾ ನುಸುಳುಕೋರರ ವಿರುದ್ಧ ಎನ್.ಐ.ಎ. ತನಿಖೆ ನಡೆಸಲು ಹಾಗೂ ನಕಲಿ ಆಧಾರ್ ಕಾರ್ಡ್ ಮಾಡುತ್ತಿರುವವರ ಜಾಲದ ಕುರಿತು ಸನಿಖೆ ನಡೆಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ಇದೇ ವೇಳೆ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಲೋಕೇಶ್ ಮಾಧ್ಯಮದೊಂದಿಗೆ ಮಾತನಾಡಿ, ರಾಷ್ಟ್ರಪತಿಯವರಿಗೆ ಹಿಂದೂ ಜಾಗರಣಾ ವೇದಿಕೆಯ ಮೂಲಕ ಆಗ್ರಹ ಪಡಿಸುವುದೇನೆಂದರೆ, ನಮ್ಮ ನೆರೆಯ ದೇಶವಾದ ಬಾಂಗ್ಲಾದೇಶದಿಂದ ಭಾರತ ದೇಶಕ್ಕೆ ಅಕ್ರಮವಾಗಿ ನುಸುಳುತ್ತಿರುವ ನುಸುಳುಕೋರರು ಹಾಸನ ಜಿಲ್ಲೆಯಲ್ಲಿಯೂ ಕಂಡುಬಂದಿರುವುದು ತೀವ್ರ ಆತಂಕದ ವಿಷಯವಾಗಿದೆ. ಈ ನುಸುಳುಕೋರಿರಿಂದ ಹಿಂಸಾಚಾರ ಮತ್ತು ಭಯೋತ್ಪಾದನೆಯ ಕೃತ್ಯಗಳು ನಡೆಯಬಹುದಾಗಿರುತ್ತದೆ. ಕೆಲ ದಿನಗಳ ಹಿಂದೆ ಹಾಸನದ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಗಾರೆ ಕೆಲಸದವರ ಸೋಗಿನಲ್ಲಿದ್ದ ಇಂತಹ ಮೂವರು ನುಸುಳುಕೋರರನ್ನು ಪೊಲೀಸರು ಬಂಧಿಸಿದ್ದು, ಅವರುಗಳನ್ನು ಫಾರೂಕ್ ಅಲಿ, ಅಕ್ಕಲ್ ಹೂಗ್ಲಿ, ಜಮಾಲ್ ಅಲಿ ಎಂದು ಗುರುತಿಸಲಾಗಿದೆ. ಮೂವರೂ ಪಶ್ಚಿಮ ಬಂಗಾಳ ವಿಳಾಸವಿರುವ ನಕಲಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರಮ, ಬೇಲೂರು, ಆಲೂರು ತಾಲೂಕುಗಳಲ್ಲಿನ ಕಾಫಿ ಎಸ್ಟೇಟ್‌ಗಳಲ್ಲಿ ಅತಿ ಹೆಚ್ಚು ಬಾಂಗ್ಲಾ ನುಸುಳುಕೋರರು ಕೆಲಸಗಾರರ ಸೋಗಿನಲ್ಲಿ ಆಡಗಿರುವ ಶಂಕೆಯಿದ್ದು, ಇಂತಹವರಿಂದ ಗಾಂಜಾ ಮರಾಟ, ನಕಲಿ ನೋಟು , ಕೋಮು ಸಂಘರ್ಷ, ಕೊಲೆ, ಸುಲಿಗೆ ಇತ್ಯಾದಿಗಳಂತಹ ಸಮಾಜ ವಿದ್ರೋಹಿ ಘಟನೆಗಳು ನಡೆಯುವ ಅನುಮಾನ ವ್ಯಕ್ತವಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಎನ್.ಐ.ಎ. ತನಿಖೆ ನಡೆಸಬೇಕೆಂದು ಸಂಘಟನೆಯು ಆಗ್ರಹಿಸುತ್ತದೆ ಎಂದರು. ಹಾಸನದಲ್ಲಿ ಅಕ್ರಮವಾಗಿ ನಕಲಿ ಆಧಾರ್ ಕಾರ್ಡ್‌ಗಳನ್ನು ಸರ್ಕಾರಿ ಆಧಾರ್ ಕೇಂದ್ರಗಳಲ್ಲಿ ನಕಲಿ ಆಧಾರ್ ಕಾರ್ಡ್ ಮಾಡುವವರು ಹೆಚ್ಚಾಗಿರುವುದಲ್ಲದೆ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಇಂತಹ ದಂಧೆ ನಡೆಸುತ್ತಿದ್ದು, ಅಂದಾಜು ೪೦೦೦೦ಕ್ಕೂ ಹೆಚ್ಚು ಇಂತಹ ಅಕ್ರಮ ನುಸುಳುಕೋರರು ಇರುವ ಖಚಿತ ಮಾಹಿತಿ ಇದ್ದು, ಇಂತವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ಎನ್ಐಎ ತನಿಖೆ ನಡೆಸಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಆಧಾರ್ ಕೇಂದ್ರದಲ್ಲೇ ನಕಲಿ ಕಾರ್ಡ್ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದ್ದು ಎಫ್.ಐ.ಆರ್. ದಾಖಲಾಗಿರುವುದು ಇಲ್ಲಿ ಗಮನಾರ್ಹ ವಿಷಯವಾಗಿದೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಸಂಘಟನೆಯ ವಿಭಾಗ ಕಾರ್ಯದರ್ಶಿ ಮಹಿಪಾಲ್, ವಿಭಾಗ ಸಂಯೋಜಕ ಶರತ್, ಜಿಲ್ಲಾಧ್ಯಕ್ಷ ಅನೂಪ್, ಜಿಲ್ಲಾ ಕಾರ್ಯದರ್ಶಿ ವಿಕಾಸ್, ಜಿಲ್ಲಾ ಸಂಯೋಜಕ ಅಭಿಷೇಕ್, ಜಿಲ್ಲಾ ಸಹಕಾರ್ಯದರ್ಶಿ ಮಂಜುಗೌಡ ಹಾಗೂ ವೇಣುಗೋಪಾಲ್ ಇತರರು ಪಾಲ್ಗೊಂಡಿದ್ದರು.