ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಕೊಣನೂರು ಹೋಬಳಿಯ ಬನ್ನೂರು ಗ್ರಾ.ಪಂ ವ್ಯಾಪ್ತಿಯಲ್ಲಿರುವ ಮರಿಯಾನಗರದಲ್ಲಿರುವ ದಿವ್ಯಜ್ಯೋತಿ ಶಾಲೆಯ ಆವರಣದಲ್ಲಿ 4ರಿಂದ 7ನೇ ತರಗತಿಯವರಿಗೆ ವಿಜ್ಞಾನ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್ಲಾ ಶಿಕ್ಷಕರು ವಿಜ್ಞಾನದ ಪ್ರಯೋಗಗಳನ್ನು ನೋಡಿ ಸಂತಸಪಟ್ಟರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಸೆಲೆಸ್ಟಿನ್ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಮೈಗೂಡಿಸಿಕೊಂಡಾಗ ತಮ್ಮ ಸುತ್ತಮುತ್ತಲಿನ ಪರಿಸರವನ್ನು ನೈಜವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಮತ್ತು ನಿಮ್ಮ ಮುಂದಿನ ಪೀಳಿಗೆಗೂ ವೈಜ್ಞಾನಿಕತೆಯ ಮಹತ್ವದ ಅರಿವನ್ನು ಮೂಡಿಸಲು ಸಾಧ್ಯ. ಶಾಲಾ ಮಕ್ಕಳಲ್ಲಿನ ಮನೋವಿಕಸನಕ್ಕೆ ಹಾಗೂ ಆತ್ಮಸ್ಥೈರ್ಯಕ್ಕೆ ಶಾಲೆಗಳಲ್ಲಿ ನಡೆಯುವ ವಸ್ತುಪ್ರದರ್ಶನಗಳು ಸಹಕಾರಿಯಾಗಲಿವೆ ಎಂದು ಎಂದು ತಿಳಿಸಿದರು.
ವಿಜ್ಞಾನ ಶಿಕ್ಷಕಿ ಸೇಲಿನ್ ಮಾತನಾಡಿ, ಮಕ್ಕಳಿಗೆ ಇಂತಹ ವಸ್ತುಪ್ರದರ್ಶನಗಳನ್ನು ನಡೆಸುವುದರಿಂದ ಅವರೊಳಗಿನ ಸುಪ್ತ ಪ್ರತಿಭೆಗಳು ಹೊರಬರಲು ಅವಕಾಶ ಸಿಗುತ್ತದೆ ಹಾಗೂ ಮಕ್ಕಳಿಂದ ನಾವೂ ಕಲಿಯಬೇಕಾದದ್ದು ಬಹಳಷ್ಟು ಇರುತ್ತದೆ ಎಂದು ತಿಳಿಸಿದರು.ವಿಜ್ಞಾನ ವಸ್ತುಪ್ರದರ್ಶನದಲ್ಲಿ 4ನೇ ತರಗತಿಯ ಮನ್ವಿತ್ ಪ್ರಥಮ, ಮೌಲ್ಯ ದ್ವಿತೀಯ, ಮಿಂಚುತ ತೃತೀಯ, 5ನೇ ತರಗತಿಯ ಶ್ರಾವಣಿ ಪ್ರಥಮ, ಚಿಂತನ್ ಗೌಡ ದ್ವಿತೀಯ, ಧನ್ಯಶ್ರೀ ತೃತೀಯ, 6ನೇ ತರಗತಿಯ ಲಿಖಿತ್ ಗೌಡ ಪ್ರಥಮ, ಜೀವಿತ್ ಗೌಡ ದ್ವಿತೀಯ, ಹರ್ಷಿತ್ ಗೌಡ ತೃತೀಯ, 7ನೇ ತರಗತಿಯ ಮಧುಸೂಧನ್ ಪ್ರಥಮ, ತ್ರಿಶಾ ದ್ವಿತೀಯ ಹಾಗೂ ಶೋಭ ತೃತೀಯ ಬಹುಮಾನವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಾಲಾ ವ್ಯವಸ್ಥಾಪಕ ಫಾದರ್ ರಾಜೇಂದ್ರ, ಫಾದರ್ ಟೋನಿ, ಮುಖ್ಯ ಶಿಕ್ಷಕಿ ಸೆಲೆಸ್ಟಿನಾ, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಎಂ. ರವಿಕುಮಾರ್, ಶಾಲಾ ಶಿಕ್ಷಕ ವೃಂದದವರು, ಪೋಷಕರು ಮತ್ತು ವಿದ್ಯಾರ್ಥಿಗಳಿದ್ದರು.===============
ಫೊಟೋ ಶಿರ್ಷಿಕೆ: ಕೊಣನೂರು ಹೋಬಳಿಯ ಬನ್ನೂರು ಗ್ರಾ.ಪಂ ವ್ಯಾಪ್ತಿಯ ಮರಿಯಾನಗರದಲ್ಲಿರುವ ದಿವ್ಯಜ್ಯೋತಿ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಕ್ಕಳು ತಯಾರಿಸಿದ ವಿಜ್ಞಾನದ ಮಾದರಿಗಳು ಗಮನ ಸೆಳೆದವು.