ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳು ಪ್ರತಿ ಹಳ್ಳಿ ಹಳ್ಳಿಗೂ ತಲುಪಲು ಎಲ್ಲ ಪದಾಧಿಕಾರಿಗಳು ಬದ್ಧರಾಗಬೇಕಿದೆ. ರಾಜ್ಯ ಘಟಕದಿಂದ ಜಿಲ್ಲಾ ಶಾಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ರಾಜೀವ ಶೆಟ್ಟಿ ಹೇಳಿದರು.

ಹಾವೇರಿ: ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳು ಪ್ರತಿ ಹಳ್ಳಿ ಹಳ್ಳಿಗೂ ತಲುಪಲು ಎಲ್ಲ ಪದಾಧಿಕಾರಿಗಳು ಬದ್ಧರಾಗಬೇಕಿದೆ. ರಾಜ್ಯ ಘಟಕದಿಂದ ಜಿಲ್ಲಾ ಶಾಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ರಾಜೀವ ಶೆಟ್ಟಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಏಕೈಕ ಸೇವಾ ಸಂಸ್ಥೆಯಾಗಿರುವ ರೆಡ್ ಕ್ರಾಸ್ ಸಂಸ್ಥೆಯು ನಿರಂತರವಾಗಿ ಉತ್ತಮ ಸೇವಾ ಕಾರ್ಯ ಮಾಡುತ್ತ ಬರುತ್ತಿದೆ. ರಾಜ್ಯದ ಎಲ್ಲ ಜಿಲ್ಲಾ ಘಟಕ ಬಲಪಡಿಸುವ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆ- ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ ಸೇವೆ ಕಾರ್ಯ ಮಾಡಲು ಉತ್ತೇಜನ ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಕ್ರಿಯಾಶೀಲ ಪದಾಧಿಕಾರಿಗಳು ಇದ್ದು, ಉತ್ತಮ ಚಟುವಟಿಕೆ ಮಾಡಲಾಗುತ್ತಿದೆ. ಆರು ತಿಂಗಳ ಒಳಗಾಗಿ ಬ್ಲಡ್ ಬ್ಯಾಂಕ್ ಕಟ್ಟಡ ಪೂರ್ಣಗೊಳಿಸಿ. ಬ್ಲಡ್ ಬ್ಯಾಂಕಿಗೆ ಪೀಠೋಪಕರಣ ಹಾಗೂ ಆರ್ಥಿಕ ಸಹಕಾರ ನೀಡಲಾಗುವುದು ಎಂದರು.

ಜಿಲ್ಲಾ ಗೌರವ ಕಾರ್ಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಎಲ್ಲ ಪದಾಧಿಕಾರಿಗಳು ಅನುಭವ ಹೊಂದಿದವರಾಗಿದ್ದು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಚಟುವಟಿಕೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತೇವೆ. ಬ್ಲಡ್ ಬ್ಯಾಂಕ್‌ಗೆ ಆರ್ಥಿಕ ನೆರವು ನೀಡಿದರೆ ರೆಡ್ ಕ್ರಾಸ್ ಹೆಚ್ಚು ಕೆಲಸ ಮಾಡಲು ಸಾಧ್ಯ. ಜಿಲ್ಲೆಗೆ ಆಗಮಿಸಿದ ರಾಜ್ಯ ಘಟಕದ ಎಲ್ಲ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ರಾಜ್ಯಾಧ್ಯಕ್ಷರಾದ ರಾಜೀವಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಮಹಾಂತೇಶ ವೀರಾಪುರ, ಬಾಲಕೃಷ್ಣ ವ್ಹಿ, ರವಿ ಮೆಣಸಿನಕಾಯಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ನಿಂಗಪ್ಪ ಆರೇರ, ಜಿಲ್ಲಾ ಖಜಾಂಚಿ ಪ್ರಭು ಹಿಟ್ನಳ್ಳಿ, ಸಹಕಾರ್ಯದರ್ಶಿ ಡಾ. ಪ್ರದೀಪ ದೊಡ್ಡಗೌಡ್ರ, ಜಿಲ್ಲಾ ಸಮಿತಿ ಸದಸ್ಯ ಹನುಮಂತಗೌಡ ಗೊಲ್ಲರ, ರವಿ ಹಿಂಚಿಗೇರಿ, ಸಿದ್ದರಾಜ ಕಲಕೋಟಿ, ಉಡಚಪ್ಪ ಮಾಳಗಿ, ಎಸ್.ಸಿ. ಹಿರೇಮಠ, ಮಲ್ಲಿಕಾರ್ಜುನ ಕೊಟೂರ, ನಾಗರಾಜ ಇಚ್ಚಂಗಿ, ವಿಜಯಕುಮಾರ ಚಿನ್ನಿಕಟ್ಟಿ, ಪ್ರಕಾಶ ಶೆಟ್ಟಿ, ಉಜ್ವಲ ಹಿರೇಗೌಡ್ರ, ಡಿಡಿಆರ್‌ಸಿ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಡಾ. ಅಂಕಿತ ಆನಂದ, ಇರ್ಶಾದಲಿ ದುಂಡಸಿ, ನವೀನ ಮುಗದೂರ, ಜಗದೀಶ ಬೇಟಗೇರಿ ಇದ್ದರು.