ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನವು ಸಾಮಾನ್ಯ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ವೇದಿಕೆಯಾಗಿ ಮಾರ್ಪಡುವಂತೆ ಮಾಡಬೇಕು ಎಂದು ನಾಗಠಾಣ ಮೀಸಲು ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಮುಖಂಡ ಶಿವಾನಂದ ಮಖಣಾಪುರ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನವು ಸಾಮಾನ್ಯ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ವೇದಿಕೆಯಾಗಿ ಮಾರ್ಪಡುವಂತೆ ಮಾಡಬೇಕು ಎಂದು ನಾಗಠಾಣ ಮೀಸಲು ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಮುಖಂಡ ಶಿವಾನಂದ ಮಖಣಾಪುರ ಆಗ್ರಹಿಸಿದರು.ಪ್ರತಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ ಅವರು, ಅಧಿವೇಶ ವೇಳೆ ರಾಜಕೀಯ ಆಟ, ಕಾಟಾಚಾರ ಮತ್ತು ಅನವಶ್ಯಕ ವಿವಾದಗಳನ್ನು ಬಿಟ್ಟು ಪ್ರಮುಖ ವಿಷಯಗಳ ಮೇಲೆ ಚರ್ಚೆ ಮಾಡಲು ಗಮನಹರಿಸುವುದು ಮುಖ್ಯವಾಗಿದೆ. ಉತ್ತರ ಕರ್ನಾಟಕದ ಜನರು ನಿರೀಕ್ಷಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.ಸಾರ್ವಜನಿಕರಿಂದ ಸಂಗ್ರಹಿಸಿದ ಕೋಟ್ಯಂತರ ತೆರಿಗೆ ಹಣವನ್ನು ವ್ಯರ್ಥ ಮಾಡದೇ ತ್ವರಿತ ಮತ್ತು ಪರಿಣಾಮಕಾರಿಯಾದ ಕಾಮಗಾರಿಗಳನ್ನು ಆರಂಭಿಸುವ ಅಗತ್ಯವಿದೆ. ನೀರಿನ ಕೊರತೆ ಸೇರಿದಂತೆ ಹಲವು ಯೋಜನೆಗಳು, ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ವಕ್ಫ್ ಕಾಯ್ದೆಯಿಂದ ತಮ್ಮ ಜಮೀನು, ಮಠ, ಮಂದಿರಗಳನ್ನು ಕಳೆದುಕೊಳ್ಳುವ ಭಯದಿಂದ ಮುಕ್ತರಾಗಬೇಕು. ಅವರ ಹಿತಾಸಕ್ತಿ ಬಗ್ಗೆ ರಾಜ್ಯ ಸರ್ಕಾರ ಗಮನ ಹಿರಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಮಸ್ಯೆಗಳಿಗೆ ಪ್ರಾಮಾಣಿಕ ಪರಿಹಾರ ಕಂಡುಹಿಡಿಯಲು ಸಚಿವರು, ಶಾಸಕರುಗಳು ಅಧಿವೇಶನದಲ್ಲಿ ಭಾಗವಹಿಸಬೇಕು. ರಾಜಕೀಯ ವ್ಯತ್ಯಾಸವನ್ನು ಬಿಟ್ಟು, ಜನರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು. ಸಣ್ಣ, ಸಣ್ಣ ವಿಚಾರಗಳಲ್ಲಿ ತಲೆ ತಗ್ಗಿಸಿ ಸಮಯ ವ್ಯರ್ಥ ಮಾಡದೇ ಜನರ ಗಂಭೀರ ಸಂಕಷ್ಟಗಳಿಗೆ ಪರಿಹಾರ ಕಂಡುಹಿಡಿಯಲು ಅಧಿವೇಶನ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.