ಕ್ಷಯಮುಕ್ತ ದೇಶ ಮಾಡಲು ನಾವೆಲ್ಲರು ಶ್ರಮಿಸೋಣ

| Published : Mar 29 2024, 12:47 AM IST

ಕ್ಷಯಮುಕ್ತ ದೇಶ ಮಾಡಲು ನಾವೆಲ್ಲರು ಶ್ರಮಿಸೋಣ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕ್ಷಯರೋಗ ನಿಯಂತ್ರಣ ವಿಭಾಗ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಜೆ.ಎನ್.ಎಂ.ಸಿ ವೈದ್ಯಕೀಯ ಮಹಾವಿದ್ಯಾಲಯ, ನೈರುತ್ಯ ರೈಲ್ವೆ ವಲಯ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ರೈಲ್ವೆ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ವಿಭಾಗದ ಸಹ ನಿರ್ದೇಶಕ ಡಾ.ಎಸ್.ವಿ.ಮುನ್ಯಾಳ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕ್ಷಯರೋಗ ನಿರ್ಮೂಲನೆಯಡಿಯಲ್ಲಿ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವುಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸಿ ೨೦೨೫ರ ವೇಳೆಗೆ ಕ್ಷಯ ಮುಕ್ತ ಭಾರತ ಮಾಡಲು ಎಲ್ಲರೂ ಶ್ರಮಿಸಬೇಕು. ದೇಶದಿಂದ ಕ್ಷಯರೋಗನಿರ್ಮೂಲನೆ ಮಾಡುವ ಕಾರ್ಯ ಮಾಡೋಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ವಿಭಾಗದ ಸಹ ನಿರ್ದೇಶಕ ಡಾ.ಎಸ್.ವಿ.ಮುನ್ಯಾಳ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕ್ಷಯರೋಗ ನಿಯಂತ್ರಣ ವಿಭಾಗ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಜೆ.ಎನ್.ಎಂ.ಸಿ ವೈದ್ಯಕೀಯ ಮಹಾವಿದ್ಯಾಲಯ, ನೈರುತ್ಯ ರೈಲ್ವೆ ವಲಯ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ರೈಲ್ವೆ ಆರೋಗ್ಯ ಕೇಂದ್ರದಲ್ಲಿ ಬುಧವಾರ ಜಿಲ್ಲಾಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಮಾತನಾಡಿದರು.

ಬಿಮ್ಸ್ ಆಸ್ಪತ್ರೆ ವಿಭಾಗದ ಮುಖ್ಯಸ್ಥರು ಹಾಗೂ ಕ್ಷಯ ಮತ್ತು ಶಾಸ್ವಕೋಶ ತಜ್ಞರಾದ ಡಾ.ಗಿರೀಶ ದಂಡಗಿ ಮಾತನಾಡಿ, ಕ್ಷಯರೋಗಾಣು ತನ್ನ ಜೈವಿಕ ರಚನೆಯಲ್ಲಿ ಬದಲಾವಣೆ ತಂದುಕೊಂಡು ತನ್ನ ಅಸ್ತಿತ್ವವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ನಾವು ಆದಷ್ಟು ಬೇಗ ಎಚ್ಚೆತ್ತುಕೊಳ್ಳದಿದ್ದರೇ ಮತ್ತೆ ನಮ್ಮ ಮೇಲೆ ತನ್ನ ಪ್ರಭಾವ ಬೀರಲಿದೆ. ಕ್ಷಯರೋಗವಿದೆ ಎಂದು ದೃಢಪಟ್ಟ ಎಲ್ಲ ರೋಗಿಗಳು ಹಾಗೂ ರೋಗಿಯ ಸಂಪರ್ಕಿತರು ಪರೀಕ್ಷಿಸಿಕೊಂಡು ಕ್ಷಯವಿಲ್ಲವೆಂದು ದೃಢಪಟ್ಟ ನಂತರ ಕ್ಷಯ ಬಾಧಿತರಾಗಬಾರದೆಂದು ಕ್ಷಯ ತಡೆಗಟ್ಟುವ ಚಿಕಿತ್ಸೆ ಪಡೆದಲ್ಲಿ ಈ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಎಂದು ವಿವರಿಸಿದರು.

ಬಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತೃ ಚಿಕಿತ್ಸಕ ಡಾ.ವಿ.ವಿ.ಶಿಂಧೆ ಮಾತನಾಡಿ, ಕ್ಷಯ ಮುಕ್ತ ಜಿಲ್ಲೆಯನ್ನಾಗಿಸುವ ದೃಷ್ಟಿಯಿಂದ ಬಿಮ್ಸ್ ಆಸ್ಪತ್ರೆಯಿಂದ ಎಲ್ಲ ಸಹಾಯ ಸಹಕಾರ ನೀಡುವೆ. ಕ್ಷಯರೋಗ ನಿರ್ಮೂಲನೆಯತ್ತ ಬೆಳಗಾವಿ ಜಿಲ್ಲೆ ಮುನ್ನಡೆಯುತ್ತಿದ್ದು, ಈಗಾಗಲೇ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕ್ಷಯರೋಗ ಪತ್ತೆಗೆ ಅವಶ್ಯವಿರುವ ಅತ್ಯಾಧುನಿಕ ಸೌಲಭ್ಯಗಳಾದ ಸಿಬಿನ್ಯಾಟ್, ಟ್ರೂನ್ಯಾಟ್‌, ಸಿಟಿಸ್ಕಾನ್ ಎಂಆರ್‌ಐ ಸೌಲಭ್ಯ ಒದಗಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಕ್ಷಯಮುಕ್ತ ರಾಗುವಂತೆ ಮನವಿ ಮಾಡಿದರು.ಚಿಕ್ಕೋಡಿಯ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ಗಡೇದ, ರೈಲ್ವೆ ಆರೋಗ್ಯ ಕೇಂದ್ರದ ಸಹಾಯಕ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಶೈಲ ಪಡಸಲಗಿ ಮಾತನಾಡಿದರು.

ಈ ವೇಳೆ ರೈಲ್ವೆ ಇಲಾಖೆಯ ಕಾರ್ಮಿಕರಿಗೆ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಬೆಳಗಾವಿಯ ನೈರುತ್ಯ ರೈಲ್ವೆ ವಲಯದ ಸಹಾಯಕ ವಿಭಾಗೀಯ ಅಭಿಯಂತರ ಮಹೇಶ ಬಾರ್ಲೆ, ಬೆಳಗಾವಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ, ವೈದ್ಯಾಧಿಕಾರಿ ಡಾ.ಬಿ.ಎನ್.ತುಕ್ಕಾರ, ಡಾ.ಜೆ.ಎ.ನಾಗಲೀಕರ, ಡಾ.ರಮೇಶ ನಿರಗಟ್ಟಿ, ಡಾ.ಕಿರಣ ಪೂಜಾರ, ಡಾ.ನಿಂಗಪ್ಪ ಡಾ. ಚಾಂದ ದೇವಡಿ, ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ, ಕಾರ್ಮಿಕರು, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಹಾಗೂ ತಾಲೂಕು ಆರೋಗ್ಯ ಕಚೇರಿಯ ಎಲ್ಲ ಸಿಬ್ಬಂದಿ, ಆಶಾ ಕಾರ್ಯಕರ್ತೆಯವರು ಹಾಗೂ ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು.