ಸರ್ದಾರ ವಲ್ಲಭಭಾಯ್ ಪಟೇಲರ ಹಾದಿಯಲ್ಲಿ ಸಾಗೋಣ: ಮರಿರಾಮಪ್ಪ

| Published : Nov 01 2025, 02:15 AM IST

ಸಾರಾಂಶ

ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ, ಸ್ವಾಸ್ಥ್ಯ ಸಮಾಜದೊಂದಿಗೆ ಏಕತೆ ಸಾರೋಣ.

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್, ಕೂಡ್ಲಿಗಿ ಉಪವಿಭಾಗದ ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿ, ಮರಿಯಮ್ಮನಹಳ್ಳಿ ಠಾಣೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯ ಪ್ರಯುಕ್ತ ರಾಷ್ಟ್ರೀಯ ಏಕತಾ ಒಟದ ಸ್ಪರ್ಧೆ ಏರ್ಪಡಿಸಲಾಗಿತ್ತು.

ಈ ಕುರಿತು ಪಟ್ಟಣದ ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ಮಾತನಾಡಿ, ಏಕತೆಯ ಸಾರುವಲ್ಲಿ ಏಕತೆಯ ಒಟದ ಸ್ಫರ್ಧೆ ಪ್ರಮುಖ ಪಾತ್ರ ವಹಿಸಿದೆ. ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ, ಸ್ವಾಸ್ಥ್ಯ ಸಮಾಜದೊಂದಿಗೆ ಏಕತೆ ಸಾರೋಣ. ಸರ್ದಾರ್ ವಲ್ಲಭಭಾಯ್ ಪಟೇಲ್‌ರ ಹಾದಿಯಲ್ಲಿ ಸಾಗೋಣ ಎಂದರು.

ತಹಶೀಲ್ದಾರ್ ಆರ್.ಕವಿತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ದಾರ ವಲ್ಲಭಭಾಯ್ ಪಟೇಲ್ ರಾಷ್ಟ್ರದ ಏಕತೆಯನ್ನು ಗುರಿಯಾಗಿಟ್ಟುಕೊಂಡು 500ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.

ಸಿಪಿಐ ವಿಕಾಸ ಲಮಾಣಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಳಕೆ ಸಹಜವಾಗಿದೆ. ಅದರಲ್ಲಿ ಬಳಸಲ್ಪಡುವ ಜಾಲತಾಣಗಳು ನೆಮ್ಮದಿಗೆ ಭಂಗ ತರದಂತೆ ಬಳಸಿದರೆ ಸೂಕ್ತ. ಯಾವುದೇ ಜಾತಿ, ಮತ, ಪಂಥಗಳಿಗೆ ಸಂಬಂಧಿಸಿದಂತಹ ವಿಷಯಗಳನ್ನು ಹಂಚಿಕೊಳ್ಳದೇ ಬೇಕಿರುವ ಮಾಹಿತಿಗಷ್ಟೇ ಮೊಬೈಲ್ ಸೀಮಿತವಾಗಬೇಕು ಎಂದರು.

ಇದಕ್ಕೂ ಮುನ್ನ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಘಟಕದಿಂದ ಮ್ಯಾರಥಾನ್ ಓಟ ಪ್ರಾರಂಭವಾಗಿ ಪೊಲೀಸ್ ಠಾಣೆಗೆ ಕೊನೆಗೊಂಡಿತು. ಓಟದಲ್ಲಿ ಪೊಲೀಸ್ ಇಲಾಖೆಯ ಮಹೇಶ, ಚಂದ್ರಶೇಖರ, ಗೃಹ ರಕ್ಷಕ ಸಿಬ್ಬಂದಿ ಪರಶುರಾಮ, ಪುರುಷರ ವಿಭಾಗದಲ್ಲಿ ಸಿ.ಅಭಿಷೇಕ್, ಜಿ.ಸುರೇಶ, ಕೆ.ಕೊಟ್ರೇಶ, ಮಹಿಳೆಯರ ವಿಭಾಗದಲ್ಲಿ ಕರಿಯಮ್ಮ ಕೆ, ನಿರ್ಮಲ.ಎಸ್, ಪಲ್ಲವಿ ಲಂಬಾಣಿ ಅವರಿಗೆ ಬಹುಮಾನ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಮಂಜುನಾಥ್, ಪಿಎಸ್‌ಐ ತಾರಾಬಾಯಿ, ನಾಗರಾಜ್, ಎಎಸೈ ಶಿವರಾಜ್, ಪೇದೆಗಳಾದ ಮಲ್ಲೇಶ ನಾಯ್ಕ್, ದಶರಥ, ವೆಂಕಟೇಶ, ಶಂಕರ ನಾಯ್ಕ್, ಅವಿನಾಶ ಜಾಧವ್, ಪುರಸಭೆ, ಪೋಲಿಸ್ ಸಿಬ್ಬಂದಿಗಳು ಇದ್ದರು.