ಉಕ್ಕು ಕಾರ್ಖಾನೆ ವಿರೋಧಿಸಿ ಪತ್ರ ಚಳವಳಿ

| Published : Feb 18 2025, 12:35 AM IST

ಸಾರಾಂಶ

ಕೊಪ್ಪಳ ತಾಲೂಕಿಗೆ ಬಿಎಸ್‌ಪಿಎಲ್ ಬೃಹತ್ ಉಕ್ಕು ಕಾರ್ಖಾನೆ ಬೇಡ, ಸರ್ಕಾರದಿಂದ ಕೊಟ್ಟ ಅನುಮತಿಯನ್ನು ಈ ಕೂಡಲೇ ರದ್ದು ಮಾಡಬೇಕು. ಮುಂದಿನ ದಿನಗಳಲ್ಲಿ ಇದರಿಂದ ಹೆಚ್ಚು ತೊಂದರೆ ಎದುರಿಸಬೇಕಾಗುತ್ತದೆ. ನಗರ ಸೇರಿ ಸುತ್ತಲಿನ ಹಳ್ಳಿಗಳ ಜನತೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಲಿದೆ.

ಕೊಪ್ಪಳ:

ಸಮೀಪದಲ್ಲಿಯೇ ಬೃಹತ್ ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ನಗರದಲ್ಲಿ ಪತ್ರ ಚಳವಳಿ ನಡೆಸಲಾಯಿತು.

ನಗರದ ಪ್ರಧಾನ ಅಂಚೆ ಕಚೇರಿ ಮುಂದೆ ೧೦೦ಕ್ಕೂ ಹೆಚ್ಚು ಕಾರ್ಯಕರ್ತರು ಪತ್ರ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿದರು.

ತಾಲೂಕಿಗೆ ಬಿಎಸ್‌ಪಿಎಲ್ ಬೃಹತ್ ಉಕ್ಕು ಕಾರ್ಖಾನೆ ಬೇಡ, ಸರ್ಕಾರದಿಂದ ಕೊಟ್ಟ ಅನುಮತಿಯನ್ನು ಈ ಕೂಡಲೇ ರದ್ದು ಮಾಡಬೇಕು. ಮುಂದಿನ ದಿನಗಳಲ್ಲಿ ಇದರಿಂದ ಹೆಚ್ಚು ತೊಂದರೆ ಎದುರಿಸಬೇಕಾಗುತ್ತದೆ. ನಗರ ಸೇರಿ ಸುತ್ತಲಿನ ಹಳ್ಳಿಗಳ ಜನತೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಲಿದೆ. ಕೂಡಲೇ ಕೈಗಾರಿಕೆ ಸ್ಥಾಪನೆಗೆ ಕೊಟ್ಟಿರುವ ಅನುಮತಿ ವಾಪಸ್ ಪಡೆಯಲೇ ಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಸಂಚಾಲಕ ವಿಜಯಕುಮಾರ ಕವಲೂರು, ಗೌರವ ಅಧ್ಯಕ್ಷ ಜಿ.ಎಸ್. ಗೋನಾಳ, ವಿನೋದ ಕುಮಾರ್ ಜಿ., ಶಿವಕುಮಾರ ಏಣಗಿ, ಚಂದ್ರು ಅಣ್ಣಿಗೇರಿ, ಗವಿಸಿದ್ದಪ್ಪ ಮಂಗಳಾಪುರ, ಮಹ್ಮದ್ ಗರ್ಸಗಲ್, ವಿನೋದ ಕುಮಾರ, ಸೋಹೇಲ್, ದೇವೇಂದ್ರಪ್ಪ ತೋಂಡಿಹಾಳ, ಶಾಮ್ ಬೇಣಗಿ, ಹನುಮಗೌಡ ಆಟೋ, ಶಕೀಲ್ ಅಹ್ಮದ್ ಬ್ಯಾಗವಾಟ್, ಮಂಜುನಾಥ ಪಾಟೀಲ್, ಮಂಜುನಾಥ ಶಹಾಪುರ, ರಾಮಣ್ಣ ಗಾಣಿಗೇರ ಇತರರಿದ್ದರು.