ಸಾರಾಂಶ
ವಿದ್ಯಾರ್ಥಿಗಳು ಸಂವಿಧಾನದ ಮೂಲ ಅಂಶಗಳನ್ನು ತಿಳಿದಿರಬೇಕಾದುದು ಬಹಳ ಮುಖ್ಯ. ಸಾಹಿತ್ಯವು ಹೇಗೆ ಮಾನವನ ಮನಸ್ಸಿಗೆ ಮಾರ್ಗಗಳನ್ನು ತೆರೆಯುತ್ತದೆ
ಓದುವಿಕೆ ಒಬ್ಬ ಶ್ರೇಷ್ಠ ಮನಸ್ಸಿನೊಂದಿಗೆ ಸಂಪರ್ಕ ಸಾಧಿಸುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಇಂಗ್ಲಿಷ್ ಸಹಾಯಕ ಪ್ರಾಧ್ಯಾಪಕ ಡಾ.ಜಿ. ನಟರಾಜ್ ತಿಳಿಸಿದರು.
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ಆಯೋಜಿಸಿದ್ದ ಅನ್ ಪ್ಯಾಕಿಂಗ್ ದ ಪೇಜಸ್: ಅನ್ ಓರಲ್ ಪ್ರಸೆಂಟೇಷನ್ ಎಂಬ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕಗಳನ್ನು ಓದುವುದರಿಂದ ಜೀವನದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವುದರ ಜೊತೆಗೆ ಹೊಸ ಪ್ರಪಂಚ, ಜನರ ಅಭಿಪ್ರಾಯಗಳು ಮತ್ತು ಸಂಶೋಧನಾ ಸಾಹಿತ್ಯಗಳ ಮೂಲಕ ವಿವಿಧ ಸಂಶೋಧನಾ ಮಾಹಿತಿಗಳನ್ನು ತಿಳಿಸುತ್ತವೆ ಎಂದು ಹೇಳಿದರು.ವಿದ್ಯಾರ್ಥಿಗಳು ಸಂವಿಧಾನದ ಮೂಲ ಅಂಶಗಳನ್ನು ತಿಳಿದಿರಬೇಕಾದುದು ಬಹಳ ಮುಖ್ಯ. ಸಾಹಿತ್ಯವು ಹೇಗೆ ಮಾನವನ ಮನಸ್ಸಿಗೆ ಮಾರ್ಗಗಳನ್ನು ತೆರೆಯುತ್ತದೆ ಮತ್ತು ಮಾನವನ ಭಾವನೆಗಳು, ಆಲೋಚನೆಗಳು, ಪ್ರವೇಶಿಸುತ್ತದೆ ಎನ್ನುವ ವಾಸ್ತವದ ಒಳನೋಟವನ್ನು ಕಾಣಬಹುದಾಗಿದೆ. ಸಾಹಿತ್ಯ, ಪಠ್ಯದ ಪ್ರತಿಯೊಂದು ತುಣುಕು ಕಲಾತ್ಮಕ ಸೃಷ್ಟಿಯಾಗಿದೆ ಮತ್ತು ಭವ್ಯವಾದ ಸಿದ್ಧಾಂತವನ್ನು ಹೊಂದಿದೆ ಎಂದರು.
ಪದವಿ ವಿದ್ಯಾರ್ಥಿಗಳಾದ ನೀವು ಓದಿದ ಪುಸ್ತಕಗಳ ಕುರಿತು ಅಂತಹ ದೃಷ್ಟಿಕೋನದಿಂದ ಮಾತನಾಡುತ್ತಿರುವುದು ನಿಜಕ್ಕೂ ಇದಕ್ಕೊಂದು ನಿದರ್ಶನವಾಗಿದೆ. ಇಂದು ಸಾಹಿತ್ಯ ಸಿದ್ಧಾಂತಗಳು ಮಾತನಾಡುತ್ತವೆ ಮತ್ತು ಪುಸ್ತಕ ಸಾಹಿತ್ಯವು ಓದುಗರ ಆಸ್ತಿಯಾಗಿದೆ. ಬರಹಗಾರರ ಆಸ್ತಿಯಲ್ಲ. ಆದುದರಿಂದ ಸಾಹಿತ್ಯದ ಮೌಲ್ಯವನ್ನು ಓದುಗರರಾದ ನೀವು ನಿರ್ಣಯ ಮಾಡಬೇಕು ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ವಿದ್ಯಾರ್ಥಿಗಳು ಬಹಳ ಪ್ರೌಢಿಮೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಪುಸ್ತಕದ ವಿಮರ್ಶೆಯನ್ನು ತಮ್ಮದೇ ರೀತಿಯಲ್ಲಿ ಮಂಡಿಸಿದ್ದಾರೆ. ಉತ್ತಮ ಪುಸ್ತಕಗಳು ಒಂದು ಶಕ್ತಿಯಾಗಿವೆ. ಅವು ನಮಗೆ ಮಾರ್ಗದರ್ಶಕ, ತತ್ವಜ್ಞಾನಿಯಾಗಿ ಮತ್ತು ಒಳ್ಳೆಯ ಗೆಳೆತನದ ಅನುಭವವನ್ನು ನೀಡುತ್ತವೆ ಎಂದು ತಿಳಿಸಿದರು.
ಓದುವ ಅಭಿರುಚಿಯನ್ನು ಕೈ ಬಿಡಬಾರದು, ಅದು ಚಟವಾಗಬೇಕು. ಅರಿವೇ ಗುರು ಎಂಬಂತೆ ಪುಸ್ತಕಗಳು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಒಳಗೆ ಅವಿತಿರುವ ಚೇತನವನ್ನು ಜಾಗೃತಗೊಳಿಸುತ್ತವೆ. ನಿರಂತರ ಪ್ರಕ್ರಿಯೆಯಲ್ಲೂ ಓದುವ ಅಭ್ಯಾಸವನ್ನು ನಿಲ್ಲಿಸಬಾರದು ಎಂದು ಅವರು ಕಿವಿಮಾತು ಹೇಳಿದರು. ಗ್ರಂಥಪಾಲಕಿ ಎಂ. ವೀಣಾ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಐಕ್ಯೂಎಸಿ ಸಂಚಾಲಕಿ ಡಿ. ಗೀತಾ ಮೊದಲಾದವರು ಇದ್ದರು.