ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರುಸಂಸ್ಕೃತಿ, ಬದುಕು ಹಾಗೂ ಸಂಬಂಧಗಳನ್ನು ಕಟ್ಟಲು ಜನಪದ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ರುದ್ರಪ್ಪ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಬೀರೂರು ಶೈಕ್ಷಣಿಕ ವಲಯದ 63ನೇ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ "ಶಿಕ್ಷಣದಲ್ಲಿ ಜನಪದ ಸಂಭ್ರಮ " ಶೈಕ್ಷಣಿಕ ಕಾರ್ಯಾಗಾರ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನಪದ ಗಾರುಡಿಗ ಡಾ. ಅಪ್ಪಗೆರೆ ತಿಮ್ಮರಾಜು ಮಾತನಾಡಿ, ಮೇರು ಗಾಯಕರ ಮೂಲಕ ಜನಪದ ಸಾಹಿತ್ಯ ಹಾಗೂ ಸಂಗೀತದ ಪರಿಕರಗಳು ಜನಪದದ ಮೂಲವಾಗಿದೆ. ಜನಪದ ಸಾಹಿತ್ಯ, ಕಲೆ ಗ್ರಾಮೀಣ ಜನರ ಮಣ್ಣಿನಿಂದ ಉದ್ಭವಿಸಿದ್ದು, ಅದು ನಮ್ಮೆಲ್ಲರ ಸಾಹಿತ್ಯದ ಬೇರು. ಜಾನಪದ ಗೀತೆಗಳು, ಜಾನಪದ ಸಾಹಿತ್ಯ ಉಳಿಯಬೇಕು ಅಂದರೆ ಜಾನಪದ ಸಂಗೀತ ಸಂಭ್ರಮ, ಜಾನಪದ ಸಂವಾದ - ಹಾಡು ಕಾರ‍್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.ಮನುಷ್ಯ ಇಂದು ಒತ್ತಡದ ಜೀವನ ನಡೆಸುವ ಪರಿಸ್ಥಿತಿ ಇದ್ದು, ಮೊಬೈಲ್ ನಿಂದ ಸಂಗೀತ ಮತ್ತು ಸಾಹಿತ್ಯದಂತಹ ಕಲೆಗಳು ದೂರ ಉಳಿದ ಪರಿಣಾಮ ಮಾನಸಿಕ ರೋಗಗಳಿಗೆ ತುತ್ತಾಗಿ ಅವನ ಮೌಲ್ಯಗಳು ಅಧಃಪತನಗೀಡಾಗುತ್ತಿರುವುದು ಬೇಸರದ ಸಂಗತಿ ಎಂದರು.ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಿ.ಜೆ. ಜಗದೀಶ್ ಮಾತನಾಡಿ, ದೇಹ ಮತ್ತು ಮನಸ್ಸು ಪರಿವರ್ತಿಸುವ ಶಕ್ತಿ ಇರುವುದು ಸಂಗೀತಕ್ಕೆ ಮಾತ್ರ. ವಿಶ್ವವಿದ್ಯಾಲಯದಲ್ಲಿ ಕಲಿತವರು ಮಾಡಲಾಗದ ಕೆಲಸ ಜನಪದರು ಮಾಡಿದ್ದಾರೆ. ಶಿಕ್ಷಕರ ಜೀವನ ಜಂಜಾಟದ ಮಧ್ಯೆ ಇಂತಹ ಜನಪದ ಸಂಭ್ರಮ ಅನುಭವಿಸಿದರೆ ಮನಸ್ಸು ಪ್ರಪುಲ್ಲವಾಗುತ್ತದೆ ಎಂದು ಬೀರೂರು ಶೈಕ್ಷಣಿಕ ವಲಯದಲ್ಲಿ ಈ ಬಾರಿ ಶಿಕ್ಷಕರ ದಿನಾಚರಣೆಯನ್ನು ಇದೇ ಸೆ.11ರಂದು ಏರ್ಪಡಿಸಿದ್ದು, ವಲಯದ ಎಲ್ಲಾ ಶಿಕ್ಷಕರು ಭಾಗಿಯಾಗುವಂತೆ ಕೋರಿದರು.ಶಿಕ್ಷಕರ ಸಂಘದ ಅಧ್ಯಕ್ಷೆ ಯಮುನಾ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಅದು ಮನುಷ್ಯನಿಗೆ ಬದುಕುವ ದಾರಿ ತೋರಿಸುತ್ತದೆ. ಜನಪದ ಸಾಹಿತ್ಯ ಆಕಾಶದಷ್ಟು ವಿಶಾಲ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿ ರುವ ಜನಪದವನ್ನು ಗಾರುಡಿಗ ಡಾ. ಅಪ್ಪಗೆರೆ ತಿಮ್ಮರಾಜು ಮತ್ತು ಮಲ್ಲಿಗೆ ಸುಧೀರ್ ಕಂಠದಲ್ಲಿ ನಾವೆಲ್ಲ ಕೇಳುತ್ತಿರುವುದು ವಲಯದ ಎಲ್ಲಾ ಶಿಕ್ಷಕರಲ್ಲಿ ಸಂತಸ ಮೂಡಿಸಿದೆ ಎಂದು ಹೇಳಿದರು.ಬಿ.ಆರ್.ಸಿ ಶೇಖರಪ್ಪ ಮಾತನಾಡಿ, ಕನ್ನಡ ಸಾರಸ್ವತ ಲೋಕದಲ್ಲಿ ಜಾನಪದ ಸಾಹಿತ್ಯಕ್ಕೆ ತನ್ನದೆ ಆದ ವಿಶಿಷ್ಟ ಇತಿಹಾಸ ವಿದೆ. ಸಂಗೀತಕ್ಕೆ ದೈವತ್ವ ಗುಣವಿದ್ದು, ಜಾನಪದ ಕೇಳುವ ನಿಮ್ಮೆಲ್ಲರಿಗೂ ಹೊಸ ಚೈತನ್ಯ ನೀಡಲಿದೆ ಎಂದರು.ಕಾರ‍್ಯಕ್ರಮದಲ್ಲಿ ದಾನಿಗಳಾದ ಶೃತಿ, ವ್ಯವಸ್ಥಾಪಕ ಅಶೋಕ್ ಕುಮಾರ್, ಅಡಕೆ ವ್ಯಾಪಾರಿ ಪ್ರಸನ್ನರನ್ನು ಗೌರವಿಸಲಾಯಿತು. ಶಿಕ್ಷಕರ ಸಂಘದ ಶಿವಕುಮಾರ್, ಎಚ್. ನಾಗರಾಜ್, ಬಸಪ್ಪ, ಮಾದಯ್ಯ ರಾಜಕುಮಾರ್ ಮಾತನಾಡಿದರು.ಚಿಕ್ಕಮಗಳೂರು ಮಲ್ಲಿಗೆ ಸುಧೀರ್ ತಂಡ, ಎನ್. ಮಹೇಶ್, ಆರ್.ಟಿ. ಅಶೋಕ್, ಸತೀಶ್, ಉಮಾಕಾಂತ್, ಮೋಹನ್ ರಾಜ್, ಸಿಂಗಟಗೆರೆ ಸಿದ್ದಪ್ಪ,ಕುಸುಮಾ, ಜಯಶ್ರೀ, ಗೀತಾಜ್ಞಾನಮೂರ್ತಿ, ಕವಿತಾ ಪುಟ್ಟಸ್ವಾಮಿ ಸೇರಿದಂತೆ ವಲಯದ