ಕೆಜಿಎಫ್‌ನ ಟ್ಯಾಂಕ್ ಬ್ಲಾಕ್ ನಿವಾಸಿಯಾದ ಲೋಕೇಶ್(೩೨) ಜೀವಾವಧಿ ಶಿಕ್ಷಗೆ ಒಳಗಾಗಿರುವ ಆರೋಪಿ, ಈತ ೨೦೨೪ ರಲ್ಲಿ ಉರಿಗಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿ ಪವಿತ್ರಳನ್ನು ಲಾಂಗ್‌ನಿಂದ ಕೊಲೆ ಮಾಡಿರುತ್ತಾನೆ.

ಕೆಜಿಎಫ್:ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ ಪತಿಗೆ ಕೆಜಿಎಫ್‌ನ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಬಿ. ಅವರು ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರು.ಗಳ ದಂಡವನ್ನು ವಿಧಿಸಿ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದಾರೆ.ಕೆಜಿಎಫ್‌ನ ಟ್ಯಾಂಕ್ ಬ್ಲಾಕ್ ನಿವಾಸಿಯಾದ ಲೋಕೇಶ್(೩೨) ಜೀವಾವಧಿ ಶಿಕ್ಷಗೆ ಒಳಗಾಗಿರುವ ಆರೋಪಿ, ಈತ ೨೦೨೪ ರಲ್ಲಿ ಉರಿಗಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ನಿ ಪವಿತ್ರಳನ್ನು ಲಾಂಗ್‌ನಿಂದ ಕೊಲೆ ಮಾಡಿರುತ್ತಾನೆ.ಕೊಲೆಗೆ ಕಾರಣವೇನು:ಗಂಡನ ಮೇಲೆ ನ್ಯಾಯಾಲಯದಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದು, ಪ್ರಕರಣವನ್ನು ವಾಪಸ್ಸು ಪಡೆಯುವಂತೆ ಲೋಕೇಶ್ ತನ್ನ ಪತ್ನಿ ಪವಿತ್ರಳನ್ನು ಒತ್ತಾಯಿಸಿದ್ದರೂ ಪವಿತ್ರ ಪ್ರಕರಣವನ್ನು ವಾಪಸ್ಸು ಪಡೆದಿರಲಿಲ್ಲ.ಪವಿತ್ರ ಬಂಗಾರಪೇಟೆ ಗಾರ್ಮೆಂರ್ಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸು ಆಗುವ ಸಂದರ್ಭದಲ್ಲಿ ಉರಿಗಾಂನ ಆಟದ ಮೈದಾನದಲ್ಲಿ ಲಾಂಗ್‌ನಿಂದ ಪವಿತ್ರಳನ್ನು ಕೊಲೆ ಮಾಡಿದ್ದಾನೆ. ದಂಪತಿಗೆ ಇಬ್ಬರು ಮಕ್ಕಳಿದ್ದು ನ್ಯಾಯಾಲಯ ತಲಾ ೫೦ ಸಾವಿರ ರು.ಗಳನ್ನು ನೀಡುವಂತೆ ಅದೇಶ ನೀಡಿದೆ.

ಸುದೀರ್ಘ ಎರಡು ವರ್ಷಗಳ ಕಾಲ ನಡೆದ ವಿಚಾರಣೆಯಲ್ಲಿ ಸರಕಾರಿ ಅಭಿಯೋಕರಾಗಿ ನಾನಾ ಸಾಹೇಬ್ ನಾಯಕ್ ಹಾಗೂ ಆರೋಪಿ ಪರ ಖಾಸಗಿ ವಕೀಲರ ನಡುವೆ ವಾದ ವಿವಾದವನ್ನು ಅಲಿಸಿದ ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಶಿವಕುಮಾರ್ ಬಿ. ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರು.ಗಳ ದಂಡವನ್ನು ವಿದಿಸಿದ್ದಾರೆ.

೫ಕೆಜಿಎಫ್೪ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಲೋಕೇಶ್.