ಸಾರಾಂಶ
ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ, ಪ್ರವಚನ ಆಲಿಸಬೇಕು. ಮನುಷ್ಯ ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯಕ ಎಂದ ಅವರು, ನಾವೆಲ್ಲರೂ ಜಗತ್ತು ನೋಡಲು ಬಂದವರು. ಈ ಜಗತ್ತನ್ನು ಆನಂದದಿಂದ ನೋಡಬೇಕು.
ಕೊಪ್ಪಳ(ಯಲಬುರ್ಗಾ):
ಬದುಕು ಪಾವನ ಆಗಬೇಕಾದರೆ ಪ್ರತಿ ಕ್ಷಣ ಆನಂದದಿಂದ ಕಳೆಯಬೇಕು ಎಂದು ಹೂವಿನಹಡಗಲಿಯ ಹಿರಿಶಾಂತವೀರ ಸ್ವಾಮೀಜಿ ಹೇಳಿದರು.ಯಲಬುರ್ಗಾ ತಾಲೂಕಿನ ಬಂಡಿಹಾಳದ ಶ್ರೀಕೆರಿಬಸವೇಶ್ವರ ನೂತನ ದೇವಸ್ಥಾನದ ಶಿಲಾ ಮಂಟಪ, ಗೋಪೂರ ಕಳಸಾರೋಹಣ ಲೋಕಾರ್ಪಣೆ ಮತ್ತು ದೇವಸ್ಥಾನ ಉದ್ಘಾಟನಾ ಸಮಾರಂಭ ಪ್ರಯುಕ್ತ ಏರ್ಪಡಿಸಿರುವ ಐದು ದಿನದ ಪ್ರವಚನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಬದುಕಿನಲ್ಲಿ ಪ್ರತಿಯೊಬ್ಬರು ಸನ್ಮಾರ್ಗ ತಾಳಬೇಕು. ಸನ್ಮಾರ್ಗ ಎಂಬುದು ಗುರುವಿನ ಸಾಕ್ಷಾತ್ಕಾರದಿಂದ ಒಲಿಯುತ್ತದೆ. ಗುರುವಿನ ಮಾರ್ಗದರ್ಶನದಿಂದ ಜೀವನ ಸುಂದರ ಆಗುತ್ತದೆ ಎಂದರು.
ಸಂಸ್ಕಾರ ಮತ್ತು ನೆಮ್ಮದಿಗಾಗಿ ಪುರಾಣ, ಪ್ರವಚನ ಆಲಿಸಬೇಕು. ಮನುಷ್ಯ ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯಕ ಎಂದ ಅವರು, ನಾವೆಲ್ಲರೂ ಜಗತ್ತು ನೋಡಲು ಬಂದವರು. ಈ ಜಗತ್ತನ್ನು ಆನಂದದಿಂದ ನೋಡಬೇಕು. ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಪ್ರತಿ ಕ್ಷಣ ಹೃದಯಕ್ಕೆ ಹರ್ಷತನದ ನಲಿವು ಸಿಗಲಿ ಎಂದು ಆಶಿಸಿದರು.ಪುರಾಣ ಪ್ರವಚನಕಾರ ಶ್ರೀಸಿದ್ದಲಿಂಗಯ್ಯ ಶಾಸ್ತ್ರಿ, ಪ್ರಮುಖರಾದ ಬಸವರಾಜ ಕಳಸಪ್ಪನವರ, ಬಸಪ್ಪ ಸಂಗಣ್ಣನವರ, ಕಳಕಪ್ಪ ನಿಡಗುಂದಿ, ತಿಪ್ಪನಗೌಡ ಮಾಳಗೌಡ್ರ, ಕೇರಿಬಸಪ್ಪ ಪಟ್ಟೇದ, ವಿರೂಪಾಕ್ಷಪ್ಪ ಶ್ರೀಗಿರಿ, ಬಸಪ್ಪ ದಿಂಡೂರ, ಶೇಖರಗೌಡ ಗೋಣಿ, ಕಲ್ಲಿನಾಥ ಲಿಂಗಣ್ಣನವರ ಇತರರಿದ್ದರು.