ಸಾರಾಂಶ
ಮೂಡುಬಿದಿರೆ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ 78 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವದ ನಾಲ್ಕನೇ ದಿನ ಗುರುವಾರ ಸಂಜೆ ‘ಪಂಪನ ಕಾವ್ಯಗಳಲ್ಲಿ ಜೀವನ ದೃಷ್ಟಿ’ ಕುರಿತು ಉಪನ್ಯಾಸ ಸಂಪನ್ನಗೊಂಡಿತು.
ಮೂಡುಬಿದಿರೆ: ಆದಿ ಕವಿ ಪಂಪ ಮಹಾನ್ ಮಾನವತಾವಾದಿಯಾಗಿದ್ದು ರಾಷ್ಟ್ರಕವಿ ಕುವೆಂಪು ಅವರಿಗೂ ವಿಶ್ವಮಾನವ ಗೀತೆಯ ರಚನೆಗೆ ಸ್ಫೂರ್ತಿಯಾದವರು. ತನ್ನ ಕಾವ್ಯಗಳ ಪಾತ್ರಗಳ ಮೂಲಕ ಜೀವನಾದರ್ಶ, ಮೌಲ್ಯಗಳನ್ನು ಸಮಾಜಕ್ಕೆ ಸಂದೇಶವಾಗಿ ನೀಡಿದ ಮಹಾಕವಿ ಪಂಪ ಎಂದು ವಿಶ್ರಾಂತ ಪ್ರಾಧ್ಯಾಪಕ, ಎಕ್ಸಲೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್ ಹೇಳಿದ್ದಾರೆ.
ಇಲ್ಲಿನ ಸಮಾಜ ಮಂದಿರ ಸಭಾ ವತಿಯಿಂದ ಸಮಾಜ ಮಂದಿರದಲ್ಲಿ 78 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವವದ ನಾಲ್ಕನೇ ದಿನ ಗುರುವಾರ ಸಂಜೆ ‘ಪಂಪನ ಕಾವ್ಯಗಳಲ್ಲಿ ಜೀವನ ದೃಷ್ಟಿ’ ಕುರಿತು ಅವರು ಉಪನ್ಯಾಸ ನೀಡಿದರು.ಎ.ಜಿ.ಸೋನ್ಸ್ ಐಟಿ ಐ ಪ್ರಾಧ್ಯಾಪಕ ಶಿವಪ್ರಸಾದ್ ಹೆಗ್ಡೆ ಕಣಜಾರು ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮಂದಿರ ಸಭಾ ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ ಉಪಸ್ಥಿತರಿದ್ದರು.
ಸಮಾಜ ಮಂದಿರ ಪುರಸ್ಕಾರ:ವಿವಿಧ ರಂಗಗಳಲ್ಲಿ ಸಾಧನೆಗೈದ ಡಾ.ರೇವತಿ ಭಟ್ (ವೈದ್ಯಕೀಯ), ಪಿ.ರಾಜಾರಾಮ ಭಟ್ ( ಸಾಹಿತ್ಯ ಸೇವೆ), ಸೀತಾರಾಮ ಶೆಟ್ಟಿ ತೋಡಾರು (ವೇದಿಕೆ ವಿನ್ಯಾಸ), ದಾಮೋದರ ಡಿ.ಸಪಲಿಗ ( ಸಮುದಾಯ ಸೇವೆ), ದಿನೇಶ್ ಪೂಜಾರಿ (ಸಮುದಾಯ ಸೇವೆ), ಕಿರಣ್ ಕುಮಾರ್ (ಶಿಕ್ಷಣ), ಸಾಧಕರನ್ನು ಸಮಾಜ ಮಂದಿರ ಗೌರವ 2025 ಮೂಲಕ ಗೌರವಿಸಲಾಯಿತು.ಜತೆಕಾರ್ಯದರ್ಶಿ, ದಸರಾ ಉತ್ಸವ ಸಂಚಾಲಕ ಗಣೇಶ್ ಕಾಮತ್ ಸಮ್ಮಾನಿತರ ವಿವರ ನೀಡಿದರು. ದಸರಾ ಉತ್ಸವ ಸಂಚಾಲಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಎಚ್. ಸುರೇಶ್ ಪ್ರಭು ವಂದಿಸಿದರು. ಪತ್ರಕರ್ತ ಧನಂಜಯ ಮೂಡುಬಿದಿರೆ ನಿರೂಪಿಸಿದರು.