ಜಮೀನಿನ ಮೂಲ ಪಟ್ಟದಾರರಿಗೆ ಜೀವಬೆದರಿಕೆ

| Published : Feb 19 2024, 01:32 AM IST

ಸಾರಾಂಶ

ಜಿಲ್ಲೆಯ ದೇವದುರ್ಗ ಹೋಬಳಿಯ ಅಂಜಳ ಗ್ರಾಮದ ಸಿಮಾಂತರದ ಸರ್ವೆ ನಂಬರ್ 50/1/ಅ,54//, 35/3/ಆ, ಮತ್ತು 199/ರ ಒಟ್ಟು 11 ಎಕರೆ 2 ಗುಂಟೆ ಜಮೀನುಗಳಲ್ಲಿ ಬೆಳೆದ ಬೆಳೆಯನ್ನು ಬಿಡಿಸಿಕೊಳ್ಳಲು ಪೊಲೀಸರು ರಕ್ಷಣೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಆಗ್ರಹಿಸಿದರು.

ರಾಯಚೂರು: ಜಿಲ್ಲೆಯ ದೇವದುರ್ಗ ಹೋಬಳಿಯ ಅಂಜಳ ಗ್ರಾಮದ ಸಿಮಾಂತರದ ಸರ್ವೆ ನಂಬರ್ 50/1/ಅ,54//, 35/3/ಆ, ಮತ್ತು 199/ರ ಒಟ್ಟು 11 ಎಕರೆ 2 ಗುಂಟೆ ಜಮೀನುಗಳಲ್ಲಿ ಬೆಳೆದ ಬೆಳೆಯನ್ನು ಬಿಡಿಸಿಕೊಳ್ಳಲು ಪೊಲೀಸರು ರಕ್ಷಣೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವದುರ್ಗ ಹೋಬಳಿಯ ಅಂಜಳ ಗ್ರಾಮದ ಸೀಮಾಂತರದ ಜಮೀನುಗಳ ಪಟ್ಟದಾರರು ಸ್ವಾಮಿ ತಂದೆ ಸಿದ್ದಯ್ಯ, ಹನುಮಂತ್ರಾಯ ತಂದೆ ಸಿದ್ದಯ್ಯ, ಹನುಮಂತಿ ಗಂಡ ನರಸಪ್ಪ ಮತ್ತು ಅಂಜಮ್ಮ ಗಂಡ ಸಾಬಣ್ಣ ಸಾಹ ಅಂಜಳ ತಾಕಿ ದೇವದುರ್ಗ ಅವರಗಳ ಹೆಸರಿನಲ್ಲಿ ಜಂಟಿಯಾಗಿ ಪಟ್ಟಾ ಮತ್ತು ಕಬ್ಜಾದಲ್ಲಿದ್ದು, ಈ ಜಮೀನು ಮಾಲೀಕರು ಮತ್ತು ಜಂಟಿ ಅನುಭೋಗದಾರರಾಗಿದ್ದಾರೆ ಎಂದು ವಿವರಿಸಿದರು.

ಈ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದ್ದು, ಬೆಳೆ ತೆಗೆಯಲು ಸಕಾಲವಾಗಿದೆ. ಆದರೆ, ಅದೇ ಗ್ರಾಮದ ರಂಗಣ್ಣ ತಂದೆ ಹನುಮಗೌಡ, ಚನ್ನಮ್ಮ ಗಂಡ ರಂಗಣ್ಣ, ಚನ್ನನಗೌಡ ತಂದೆ ರಂಗಣ್ಣ, ಹನುಮಗೌಡ ತಂದೆ ರಂಗಣ್ಣ, ಬಾಲಯ್ಯ ತಂದೆ ಯಂಕಣ್ಣ, ಗೋಪಾಲ ತಂದೆ ಯಂಕಣ್ಣ ಮತ್ತು ಶಿವಣ್ಣ ತಂದೆ ಬಾಲಯ್ಯ ಅವರುಗಳು ಅಕ್ರಮಕೂಟ ಕಟ್ಟಿಕೊಂಡು ಜಮೀನುಗಳಿಗೆ ತೆರಳಿ ಮೂಲ ಪಟ್ಟದಾರರಿಗೆ ಜೀವಬೆದರಿಕೆ ಹಾಕಿ ಬೆಳೆ ಬಿಡಿಸಿಕೊಳ್ಳಲು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಅಕ್ರಮಕೂಟದಿಂದ ತೆರಳಿ ಜೀವಬೆದರಿಕೆ ಹಾಕಿ, ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಶಿವಪ್ಪ, ಹನುಮಂತ, ಸ್ವಾಮಿ, ಅಂಜಿನಮ್ಮ, ನರಸಪ್ಪ ಇದ್ದರು.