ಸಾರಾಂಶ
ನರಸಿಂಹರಾಜಪುರ: ಅಂತಾರಾಷ್ಟೀಯ ಲಯನ್ಸ್ ಕ್ಲಬ್‌ನ ಎನ್.ಸಿ.ಎಫ್ ಫಂಡ್‌ಗೆ ನಮ್ಮ ದೇಶದ ಲಯನ್ಸ್ ಕ್ಲಬ್‌ನಿಂದ 117 ಬಿಲಿಯನ್ ಡಾಲರ್ ನೀಡಿದ್ದೇವೆ ಎಂದು ಲಯನ್ಸ್ ಕ್ಲಬ್‌ನ 317 ಡಿ ಜಿಲ್ಲೆಯ ಪ್ರಥಮ ಉಪ ರಾಜ್ಯಪಾಲ ತಾರಾನಾಥ್ ತಿಳಿಸಿದರು.
ಬುಧವಾರ ಸಿಂಸೆಯ ಕನ್ಯಾಕುಮಾರಿ ಕಂಪರ್ಟ್ ಹಾಲ್‌ನಲ್ಲಿ ಲಯನ್ಸ್ ಕ್ಲಬ್‌ನ 317ಡಿ ಜಿಲ್ಲಾ ವ್ಯಾಪ್ತಿಯ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕುಗಳ 6 ಲಯನ್ಸ್ ಕ್ಲಬ್ ವತಿಯಿಂದ 100 ಬಡ ಜನರಿಗೆ ಅನ್ನಪೂರ್ಣ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ನಾವು ಅಂತಾರಾಷ್ಟೀಯ ಲಯನ್ಸ್ ಕ್ಲಬ್‌ನ ಎನ್.ಸಿ.ಎಫ್ ಫಂಡಿಗೆ ನೀಡಿದ ಹಣದಿಂದಲೇ ಮತ್ತೆ ನಮಗೆ ವಾಪಾಸು ಸಮಾಜ ಸೇವೆಗಾಗಿ ಎನ್.ಸಿ.ಎಫ್ ಫಂಡಿನಿಂದಲೇ ಹಣ ಬರಲಿದೆ. ಕೊಪ್ಪ, ನರಸಿಂಹರಾಜಪುರ, ಶೃಂಗೇರಿ, ಬಾಳೆಹೊನ್ನೂರು, ಹರಿಹರಪುರ ಸೇರಿ 6 ಲಯನ್ಸ್ ಕ್ಲಬ್ ವ್ಯಾಪ್ತಿಯಲ್ಲಿ 100 ಬಡ ಜನರಿಗೆ ಅನ್ನಪೂರ್ಣ ಕಿಟ್ ವಿತರಿಸುತ್ತಿದ್ದೇವೆ ಎಂದರು.
ಲಯನ್ಸ್ ಸೇವೆಗಾಗಿ ಇರುವ ಸಂಸ್ಥೆಯಾಗಿದೆ. ಲಯನ್ಸ್ ಕ್ಲಬ್‌ನಿಂದ ಆರೋಗ್ಯ ಶಿಬಿರ, ಕುಡಿಯುವ ನೀರಿನ ಯೋಜನೆ, ಬಸ್ಸು ನಿಲ್ದಾಣ ಸೇರಿದಂತೆ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ವರ್ಷ ಹಾಂಕಾಂಗ್ ದೇಶದಲ್ಲಿ ನಾನು 317 ಡಿ ಜಿಲ್ಲಾ ರಾಜ್ಯಪಾಲನಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದು, ಎಲ್ಲಾ ಲಯನ್ಸ್ ಅಧ್ಯಕ್ಷರುಗಳು ಆಗಮಿಸಬೇಕು ಎಂದು ಮನವಿ ಮಾಡಿದರು.ನರಸಿಂಹರಾಜಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ ಮಾತನಾಡಿ, ನಮ್ಮ ಲಯನ್ಸ್ ಕ್ಲಬ್‌ನಿಂದ 40 ಜನ ಬಡವರಿಗೆ ಅನ್ನಪೂರ್ಣ ಕಿಟ್ ವಿತರಿಸುತ್ತಿದ್ದೇವೆ. ದಾನ ಮಾಡುವುವರ ಸಂಖ್ಯೆ ಹೆಚ್ಚಾದರೆ ಸಮಾಜದ ಕಟ್ಟ ಕಡೆಯ ಕುಟುಂಬಗಳಿಗೆ ಅನುಕೂಲವಾಗಲಿದೆ. ಲಯನ್ಸ್ ಕ್ಲಬ್ ಹಲವಾರು ಸಮಾಜ ಮುಖಿ ಕೆಲಸ ಮಾಡುತ್ತಾ ಬಂದಿದೆ ಎಂದರು.
ಪಪಂ ಅಧ್ಯಕ್ಷೆ ಜುಬೇದ ಮಾತನಾಡಿ, ಸೇವೆಯಲ್ಲಿ ಲಯನ್ಸ್ ಕ್ಲಬ್ ತನ್ನದೇ ಆದ ಛಾಪು ಮೂಡಿಸಿದೆ ಎಂದರು.ಲಯನ್ಸ್ ಕ್ಲಬ್ ನ ಪ್ರಾಂತೀಯ ಅಧ್ಯಕ್ಷ ಸಿಜು, ಲಯನ್ಸ್ ಕ್ಲಬ್‌ನ ಪ್ರಾಂತೀಯ ರಾಯಭಾರಿ ಎಂ.ಪಿ.ಸನ್ನಿ,ಲಯನ್ಸ್ ಕ್ಲಬ್ ವಲಯ ಅಧ್ಯಕ್ಷ ಎಂ.ಡಿ.ಶಿವರಾಂ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಹಾಗೂ ದಾನಿ ಡಿ.ರಮೇಶ್,ಶೃಂಗೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಧರ್ಮಪ್ಪ ಹೆಗಡೆ, ಕೊಪ್ಪ ಸಹ್ಯಾದ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಭಾಪ್ರಕಾಶ್, ನರಸಿಂಹರಾಜಪುರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಲ್ದೋ, ಖಜಾಂಚಿ ಸಜಿ, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್ ಇದ್ದರು.
ನರಸಿಂಹರಾಜಪುರ ಲಯನ್ಸ್ ಕ್ಲಬ್ ವ್ಯಾಪ್ತಿಯಲ್ಲಿ 40 ಫಲಾನುಭವಿಗಳಿಗೆ ಅನ್ನಪೂರ್ಣ ಕಿಟ್ ವಿತರಿಸಲಾಗಿದ್ದು ಕಿಟ್ ಜೊತೆಗೆ ದಾನಿ ಡಿ.ರಮೇಶ್ ನಗದು ಹಣವನ್ನು ಫಲಾನುಭವಿಗಳಿಗೆ ದಾನವಾಗಿ ನೀಡಿದರು.