ಸಮಾಜ ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ: ಡಾ.ಗುರುದೇವಿ

| Published : Jul 08 2024, 12:37 AM IST

ಸಮಾಜ ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕಿದೆ: ಡಾ.ಗುರುದೇವಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸಮಾಜವನ್ನು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಮಾಜದ ಬಗ್ಗೆ ಚಿಂತನೆ, ಗೌರವ ಇಟ್ಟಕೊಂಡು ಮನ ಮುಟ್ಟುವ ಕವನಗಳನ್ನು ನೀಡಿರುವ ಸುನೀತಾ ಅವರ ಕೃತಿಯಲ್ಲಿ ವಿಶೇಷತೆ ಅಡಗಿದೆ ಎಂದು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಮಾಜವನ್ನು ಪರಿವರ್ತಿಸುವ ಶಕ್ತಿ ಸಾಹಿತ್ಯಕ್ಕೆ ಇದೆ. ಸಮಾಜದ ಬಗ್ಗೆ ಚಿಂತನೆ, ಗೌರವ ಇಟ್ಟಕೊಂಡು ಮನ ಮುಟ್ಟುವ ಕವನಗಳನ್ನು ನೀಡಿರುವ ಸುನೀತಾ ಅವರ ಕೃತಿಯಲ್ಲಿ ವಿಶೇಷತೆ ಅಡಗಿದೆ ಎಂದು ಹಿರಿಯ ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುನೀತಾ ಸೊಲಾಪುರೆ- ಪಾಟೀಲ ಅವರ ಮುಕ್ತಕ ಮಣಿ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸುನೀತಾ ಅವರು, ಮಕ್ಕಳ ಗೆಲುವನ್ನು ತಮ್ಮ ಗೆಲುವೆಂದು ಪ್ರೀತಿಯಿಂದ ಕಾಣುವ ಮನೋಭಾವದವರು. ಸಮಾಜದ ಬಗ್ಗೆ ವಿಶೇಷ ಚಿಂತನೆ ಉಳ್ಳ ಅಪರೂಪದ ಗುಣದವರು ಎಂದು ಶ್ಲಾಘಿಸಿದರು. ನಾವು ಒಳ್ಳೆಯವರ ಗೆಳೆತನ ಮಾಡಿದರೆ, ಅದು ಮಕ್ಕಳ ಮೇಲೆ ಪ್ರಭಾವ ಬಿರುತ್ತದೆ ಎನ್ನುವುದು ಮುಕ್ತಕ ಮಣಿ ಕೃತಿ ಎಂದು ತಿಳಿಸಿದರು.

ಮುಕ್ತ ಕವಿ ಅನಂತ ತಾಮ್ಹನ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಮುಖಿ ಕಾರ್ಯಗಳೊಂದಿಗೆ ಸಾಹಿತ್ಯ ಲೋಕಕ್ಕೆ ಸುನೀತಾ ಅವರು ವಿಭಿನ್ನ ಬರವಣಿಗೆ ಮೂಲಕ ನೀಡಿದ್ದಾರೆ. ಬರೆಯುವ ಹಾಗೂ ಬರೆದಿದ್ದನ್ನು ಬದುಕಿಗೆ ಅಳವಡಿಸಿಕೊಳ್ಳುವ ಕೆಲಸವನ್ನು ಲೇಖಕಿಯರು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಅವರಿಂದ ಇನ್ನಷ್ಟು ಕೃತಿ ಬರಲಿ ಸಮಾಜದ ಮೇಲೆ ಬೆಳಕು ಚೆಲ್ಲಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಟಿ.ಶ್ರೀಮತಿ ಅವರು ಕೃತಿ ಪರಿಚಯಿಸಿದರು. ಕಸಾಪ ಅಧ್ಯಕ್ಷ ಮಂಗಲಾ ಮೆಟಗುಡ್ಡ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಮುಕ್ತ ಕವಯತ್ರಿ ಸುನೀತಾ ಸೊಲಾಪುರೆ ಪಾಟೀಲ ಅವರು ಕೃತಿಕಾರರ ಬಗ್ಗೆ ಪರಿಚಯಿಸಿದರು. ಸಾಹಿತಿ ಹಮೀದಾ ಬೇಗಂ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.