ಮಾದಕ ದ್ರವ್ಯಕ್ಕೆ ದಾಸರಾಗದೇ ಪರಿಶುದ್ಧ ಜೀವನ ನಡೆಸಿ: ನಿಂಗಪ್ಪ ಜಿ.

| Published : Jul 10 2025, 12:45 AM IST

ಮಾದಕ ದ್ರವ್ಯಕ್ಕೆ ದಾಸರಾಗದೇ ಪರಿಶುದ್ಧ ಜೀವನ ನಡೆಸಿ: ನಿಂಗಪ್ಪ ಜಿ.
Share this Article
  • FB
  • TW
  • Linkdin
  • Email

ಸಾರಾಂಶ

ದುಶ್ಚಟಗಳಿಂದ ಬದುಕನ್ನು ಬಲಿಕೊಟ್ಟ ಉದಾಹರಣೆಗಳು ಸಾಕಷ್ಟಿವೆ. ಚಟಗಳಿಂದ ಚಟ್ಟ ನಿಶ್ಚಿತ. ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗದೆ ಪರಿಶುದ್ಧ ಜೀವನ ನಡೆಸಿ. ವಿದ್ಯಾರ್ಥಿ ಜೀವನ ಅಮೂಲ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ನಿಂಗಪ್ಪ ಜಿ. ತಿಳಿಸಿದರು.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ದುಶ್ಚಟಗಳಿಂದ ಬದುಕನ್ನು ಬಲಿಕೊಟ್ಟ ಉದಾಹರಣೆಗಳು ಸಾಕಷ್ಟಿವೆ. ಚಟಗಳಿಂದ ಚಟ್ಟ ನಿಶ್ಚಿತ. ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗದೆ ಪರಿಶುದ್ಧ ಜೀವನ ನಡೆಸಿ. ವಿದ್ಯಾರ್ಥಿ ಜೀವನ ಅಮೂಲ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ನಿಂಗಪ್ಪ ಜಿ. ತಿಳಿಸಿದರು.

ರಾಮಪುರದ ಶ್ರೀಎಂ.ಪಿ. ಬಿಳ್ಳೂರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರ ಇರಬೇಕು. ಮೊಬೈಲ್ ನಿಂದ ನಾವು ಉತ್ತಮ ಅಂಶಗಳನ್ನು ಕಲಿಯಬಹುದಾದರೂ ಕೆಡಕಿನತ್ತ ಮನಸ್ಸು ಆಕರ್ಷಣೀಯವಾಗಿರುವುದು ದುರದೃಷ್ಟಕರ. ಉತ್ತಮ ನಿರ್ಧಾರದಿಂದ ಬದುಕಿದರೆ ಬಾಳು ಬೆಳಕಾಗುತ್ತದೆ ಎಂದು ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಮಹಿಳೆಯರಿಗೆ ಅಂಗವಿಕಲರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು. ಶಿಕ್ಷಣದಲ್ಲಿ ಪ್ರಗತಿ ಸಾಧಿಸುವಾಗ ಕೆಟ್ಟ ಚಟಗಳು ಅಡ್ಡಿಯಾಗಬಹುದು. ಅವುಗಳನ್ನು ನಿವಾರಿಸಿ ಸಾಧನ ಪಥದತ್ತ ನಡೆಯಬೇಕು ಎಂದರು.

ಬನಹಟ್ಟಿಯ ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕರಾದ ಎಂ.ಕೆ. ಮುಲ್ಲಾ ವಿಶೇಷ ಉಪನ್ಯಾಸ ನೀಡಿ, ಕನಸು, ಯಶಸ್ಸು, ಆಯಸ್ಸು ಹಾಗೂ ಶ್ರೇಯಸ್ಸು ಪಡೆಯಬೇಕಾದ ವಯಸ್ಸು ಈ ಹದಿಹರೆಯ. ಸಕಾರಾತ್ಮಕ ಮನೋಭಾವ, ಸುಂದರ ಚಿಂತನೆಗಳು ಉಜ್ವಲ ಭವಿಷ್ಯವನ್ನು ಕಟ್ಟಿಕೊಡುತ್ತವೆ. ಮಕ್ಕಳು ಕೆಟ್ಟ ಚಟಕ್ಕೆ ಬಲಿಯಾಗಿ ತಮ್ಮ ಉತ್ತಮ ಭವಿಷ್ಯ ಹಾಳು ಮಾಡಿಕೊಳ್ಳಬಾರದು. ಆಧುನಿಕ ಜಗತ್ತಿನಲ್ಲಿ ಆಕರ್ಷಣೆಗಿಂತ ವಿಕರ್ಷಣೆಯೇ ಹೆಚ್ಚು ಎಂದು ಅಭಿಪ್ರಾಯಪಟ್ಟರು.

ಶಿಕ್ಷಕ ಶ್ರೀಶೈಲ ಬುರ್ಲಿ ಮಾತನಾಡಿದರು. ಅಧ್ಯಕ್ಷತೆಯನ್ನು ಮುಖ್ಯ ಗುರು ಮಹೇಶ ಘಾಟಗೆ ವಹಿಸಿಕೊಂಡಿದ್ದರು.ವಲಯ ಮೇಲ್ವಿಚಾರಕಿ ಶಿವಲೀಲಾ ನಿರೂಪಿಸಿದರು. ಸೇವಾ ಪ್ರತಿನಿಧಿ ಶೈಲಾ ವಂದಿಸಿದರು. ಮಂಗಲ ಬಕರೆ, ಗೀತಾ ಪಕೀರಪೂರ್, ಎ.ಎ. ಮೊಮೀನ್, ಅಪ್ಪಾಸಾಬ ತುಬಚಿ, ನಯನಾ ಹಾಸಿಲಕರ್ ಉಪಸ್ಥಿರಿದ್ದರು.ದುಶ್ಚಟಗಳಿಂದ ಬದುಕನ್ನು ಬಲಿಕೊಟ್ಟ ಉದಾಹರಣೆಗಳು ಸಾಕಷ್ಟಿವೆ. ಚಟಗಳಿಂದ ಚಟ್ಟ ನಿಶ್ಚಿತ. ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗದೆ ಪರಿಶುದ್ಧ ಜೀವನ ನಡೆಸಿ. ವಿದ್ಯಾರ್ಥಿ ಜೀವನ ಅಮೂಲ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ಷೇತ್ರ ಯೋಜನಾಧಿಕಾರಿ ನಿಂಗಪ್ಪ ಜಿ. ತಿಳಿಸಿದರು.