ನಿಸರ್ಗದತ್ತ ಮಾರ್ಗೋಪಾಯದಿಂದ ಬದುಕು ಹಸನು

| Published : Apr 04 2024, 01:04 AM IST

ಸಾರಾಂಶ

ಪರಿಸರದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ತರಗತಿಗಳು, ಬೋಧನೆ, ಬೀದಿ ನಾಟಕ, ಜಾಥಾ ಹಮ್ಮಿಕೊಂಡಿದ್ದರೂ ಅಂತಹ ಹೇಳಿಕೊಳ್ಳುವ ಅರಿವು ಜನತೆಯಲ್ಲಿ ಕಂಡು ಬರದಿರುವುದು ಅತ್ಯಂತ ವಿಷಾದದ ಸಂಗತಿ. ಹಲವು ಆವಿಷ್ಕಾರದ ಪರಿಣಾಮದಿಂದಾಗಿ ಭೂಮಿಯ ಉಷ್ಣಾಂಶ ಹೆಚ್ಚಾಗಿ ಮಳೆ ಮಾರುತಗಳು, ವಾಯುವಿನ ಚಲನೆ ಸರಿಯಾದ ಸಮಯಕ್ಕೆ ಆಗದೆ ಮಳೆ ಇಳೆಗೆ ತಲುಪುತಿಲ್ಲ

- ವಿಶ್ರಾಂತ ಪರಿಸರ ವಿಜ್ಞಾನಿ ಡಾ.ವಿ. ಜಗನ್ನಾಥ ಅಭಿಮತಕನ್ನಡಪ್ರಭ ವಾರ್ತೆ ಮೈಸೂರು

ಮಾನವನ ಆಧುನಿಕ ಜೀವನ ಶೈಲಿ ಪರಿಸರವನ್ನು ಎಗ್ಗಿಲ್ಲದೇ ಹಾಳುಗೆಡವುತ್ತಿದೆ. ಜೊತೆಗೆ ಆಧುನಿಕ ತಂತ್ರಜ್ಞಾನದಲ್ಲಿ ಮಾನವನ ಸಂಬಂಧ ಹಾಳಾಗುತ್ತಿದ್ದು ಅದಕ್ಕಾಗಿ ನಮ್ಮಲ್ಲಿನ ಅರಿವನ್ನು ಗೊತ್ತಿರುವಂತೆಯೇ ಕಾರ್ಯನಿರ್ವಹಿಸುವುದೇ ಬಹುಮುಖ್ಯ ವಿಜ್ಞಾನವಾಗಿದೆ ಎಂದು ಇಸ್ರೋದ ವಿಶ್ರಾಂತ ಪರಿಸರ ವಿಜ್ಞಾನಿ ಡಾ.ವಿ. ಜಗನ್ನಾಥ ಅಭಿಪ್ರಾಯಪಟ್ಟರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಸಕ್ತ ಶೈಕ್ಷಣಿಕ ಸಾಲಿನ ವಿಶೇಷ ಉಪನ್ಯಾಸ ಮಾಲೆಯಲ್ಲಿ ಹವಾಮಾನ ವೈಪರೀತ್ಯ ನಿರ್ವಹಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ವಿಷಯ ಕುರಿತು ಅವರು ಮಾತನಾಡಿದರು.

ಪರಿಸರದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ತರಗತಿಗಳು, ಬೋಧನೆ, ಬೀದಿ ನಾಟಕ, ಜಾಥಾ ಹಮ್ಮಿಕೊಂಡಿದ್ದರೂ ಅಂತಹ ಹೇಳಿಕೊಳ್ಳುವ ಅರಿವು ಜನತೆಯಲ್ಲಿ ಕಂಡು ಬರದಿರುವುದು ಅತ್ಯಂತ ವಿಷಾದದ ಸಂಗತಿ. ಹಲವು ಆವಿಷ್ಕಾರದ ಪರಿಣಾಮದಿಂದಾಗಿ ಭೂಮಿಯ ಉಷ್ಣಾಂಶ ಹೆಚ್ಚಾಗಿ ಮಳೆ ಮಾರುತಗಳು, ವಾಯುವಿನ ಚಲನೆ ಸರಿಯಾದ ಸಮಯಕ್ಕೆ ಆಗದೆ ಮಳೆ ಇಳೆಗೆ ತಲುಪುತಿಲ್ಲ. ನಮ್ಮ ಸುತ್ತಲಿನ ವಾತಾವರಣವನ್ನು ಮಾಲಿನ್ಯದಿಂದ ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿಗೊತ್ತಿರುವುದನ್ನು ಮಾಡುವುದೇ ಇಂದಿನ ಪೀಳಿಗೆಯ ಪ್ರಮುಖ ಗುರಿಯಾಗಿದೆ. ಜೀವನದ ಅಗತ್ಯವನ್ನರಿತು ವಸ್ತು ಮತ್ತು ಶಕ್ತಿಯನ್ನು ಮಿತವಾಗಿ ಬಳಕೆ ಮಾಡಿದರೇ ಪರಿಸರ ಸಂರಕ್ಷಿಸಬಹುದು ಎಂದರು.

ಪ್ರಾಂಶುಪಾಲ ಡಾ.ಎಸ್. ಮರೀಗೌಡರು ಅಧ್ಯಕ್ಷತೆ ವಹಿಸಿದ್ದರು. ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಶ್ರೀಹರ್ಷ ಸ್ವಾಗತಿಸಿದರು. ವಿಶೇಷ ಉಪನ್ಯಾಸ ಮಾಲೆಯ ಸಂಚಾಲಕ ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಟಿ. ಸತೀಶ್ ವಂದಿಸಿದರು.ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಇದ್ದರು.