ಕಾರಟಗಿ ಪಟ್ಟಣದ ಜೆ.ಪಿ. ನಗರದ ಶ್ರೀದೇವಿ ದೇವಸ್ಥಾನದ ಪುರಾಣ ಮಂಟಪದಲ್ಲಿ ದೈವಜ್ಞ ಸಮಾಜದವರು ಸೋಮವಾರ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ಚಾಲನೆ ನೀಡಿದರು.
ಕಾರಟಗಿ: ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರ ಜೀವಂತವಾಗಿದ್ದರೆ ನಾವು ಬದಲಾಗಬೇಕಿಲ್ಲ. ಇಲ್ಲದಿದ್ದರೆ ನಾವು ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಜೆ.ಪಿ. ನಗರದ ಶ್ರೀದೇವಿ ದೇವಸ್ಥಾನದ ಪುರಾಣ ಮಂಟಪದಲ್ಲಿ ದೈವಜ್ಞ ಸಮಾಜದವರು ಸೋಮವಾರ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದ ಅವರು, ದೈವಜ್ಞ ಸಮಾಜಕ್ಕೆ ಇರುವ ರೀತಿ, ನೀತಿ, ಪದ್ಧತಿ, ಸಂಸ್ಕಾರ ಸಮಾಜದ ಪ್ರತಿಯೊಬ್ಬ ಯುವಕರು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.ಸಮಾಜದ ಪ್ರತಿ ಕುಟುಂಬದ ಮಕ್ಕಳು ಸಂಸ್ಕಾರವಂತರಾಗಬೇಕು. ಆಸ್ತಿ, ಅಂತಸ್ತು, ಹಣ, ಎಲ್ಲವೂ ಇರುತ್ತದೆ. ಆದರೆ ಧರ್ಮ ಅಧಃಪತನವಾಗುತ್ತಿದೆ. ಅಂದರೆ ಮೂಲ ಆಚಾರ, ವಿಚಾರ, ಸಂಸ್ಕಾರದಿಂದ ದೂರವಾಗುತ್ತಿದ್ದೇವೆ. ಈ ಹಿಂದೆ ಬಡತನ, ನಿರುದ್ಯೋಗ ತಾಂಡವವಾಡುತ್ತಿತ್ತು. ಆದರೆ ಸಂಸ್ಕಾರ, ಆಚಾರ, ವಿಚಾರ, ಸಂಸ್ಕಾರ ಎಲ್ಲವೂ ಸಮರ್ಪಕವಾಗಿ ಕುಟುಂಬದಲ್ಲಿ ನಡೆಯುತ್ತಲಿದ್ದವು. ಆಗ ಸಮಾಧಾನ, ಶಾಂತಿ ಎಲ್ಲವೂ ನಮ್ಮ ಜತೆಯಲ್ಲಿ ಇದ್ದವು. ಇಗ ಅವುಗಳಿಂದಲೇ ನಾವು ದೂರವಾಗುತ್ತಿದ್ದೇವೆ. ಹೆಸರಿಂದ ಮಾತ್ರ ಶ್ರೇಷ್ಠನಾದರೆ ಸಾಲದು. ನಮ್ಮ ಕರ್ತವ್ಯದಲ್ಲಿ, ನಮ್ಮ ವಿಚಾರದಲ್ಲಿ, ನಮ್ಮ ಮನಸ್ಥಿತಿಯಲ್ಲಿ ಕೂಡ ಶ್ರೇಷ್ಠರಾಗಬೇಕು ಎಂದು ಹೇಳಿದರು.
ಬಳಿಕ ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಭಕ್ತಿಯಿಂದ ಭಗವಂತನ ಆರಾಧನೆ, ಸ್ಮರಣೆ, ಧ್ಯಾನ ಮಾಡಿದರೆ ಸಾಕು ಭಗವಂತ ಎಲ್ಲರಿಗೂ ಒಲಿಯುತ್ತಾನೆ. ಇನ್ನೊಬ್ಬರನ್ನು ವಂಚಿಸಿ, ತಂದ ಹಣದಿಂದ ದೇವರಿಗೆ ಅರ್ಪಿಸಿದರೆ ದೇವರು ಒಲಿಯುವುದಿಲ್ಲ ಎಂದರು.ಇದಕ್ಕೂ ಮುಂಚೆ ಶ್ರೀದೇವಿ ದೇವಸ್ಥಾನದ ಪುರಾಣ ಮಂಟಪದಲ್ಲಿ ಶ್ರೀಗಳಿಗೆ ರಾಘವೇಂದ್ರ ಕುರ್ಡೇಕರ ದಂಪತಿ ಪಾದಪೂಜೆ ನೆರವೇರಿಸಿದರು. ರಮ್ಯಾ ದಿನೇಶ ರೇವಣಕರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಂಗನಾಥ ವೆರ್ಣೇಕರ, ಸುಬ್ರಹ್ಮಣ್ಯ ರಾಯ್ಕರ, ಪ್ರಭಾಕರ ಎಲ್. ರೇವಣಕರ ಹಿತವಚನ ನೀಡಿದರು. ಶ್ವೇತಾ, ಮಂಜುನಾಥ ವೆರ್ಣೇಕರ ಕಾರ್ಯಕ್ರಮ ನಿರ್ವಹಿಸಿದರು.
ಭವ್ಯ ಮೆರವಣಿಗೆ: ಮಠಾಧೀಶರಿಗೆ ಜ್ಞಾನೇಶ್ವರಿ ದೇವಿಯ ರಥದಲ್ಲಿ ನವಲಿ ರಸ್ತೆಯ ಕರಿಯಪ್ಪ ತಾತನವರ ದೇವಸ್ಥಾನದಿಂದ ಜೆಪಿ ನಗರದ ಶ್ರೀದೇವಿ ದೇವಸ್ಥಾನದ ವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆ ನಡೆಸಿದರು. ಪಟ್ಟಣಕ್ಕೆ ಆಮಗಮಿಸಿದ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.ದೈವಜ್ಞ ಸಮಾಜದ ಕರ್ಕಿಮಠದ ಟ್ರಸ್ಟಿಗಳಾದ ಸುಬ್ರಹ್ಮಣ್ಯ ಆರ್. ರಾಯ್ಕರ, ರಾಜೇಂದ್ರ ಶೇಟ್ ಮಂಗಳೂರು, ಸತೀಶ ಬೆಂಗಳೂರು, ದೈವಜ್ಞ ಸಮಾಜದ ಪ್ರಮುಖರಾದ ಪ್ರಭಾಕರ ಎಲ್. ರೇವಣಕರ, ರಂಗನಾಥ ವೆರ್ಣೇಕರ, ಮಂಜುನಾಥ ವೆರ್ಣೇಕರ, ರೇಣುಕಾ ವಿ. ಕುರ್ಡೇಕರ, ಸತ್ಯನಾರಾಯಣ ಎಸ್. ವೆರ್ಣೇಕರ, ಸುಬ್ರಾಯ ಕೆ. ರೇವಣಕರ, ನಾರಾಯಣ ಎನ್. ಕುರ್ಡೇಕರ, ದಿನೇಶ ಕೆ. ಶೇಟ್, ನಾರಾಯಣಪ್ಪ ಜಿ. ರೇವಣಕರ, ಪಾಂಡುರಂಗ ಕುರ್ಡೇಕರ, ಬಾಲಾಜಿ ಪಾಲನಕರ, ಗೋಪಾಲ ವೆರ್ಣೇಕರ ಜಿವಿಟಿ, ರಾಘವೇಂದ್ರ ಜಿ. ರೇವಣಕರ, ಅಶೋಕ ಕುರ್ಡೇಕರ, ಅನಿಲ ರಾಯ್ಕರ, ಶಿವಾನಂದ ರೇವಣಕರ, ನಾಗರಾಜ ಕಾಗಲ್ಕರ, ಪ್ರಶಾಂತ ಪ್ರಭಾಕರ ರೇವಣಕರ, ಅರುಣ ಎಲ್. ಪಾಲನಕರ, ವೆಂಕಟೇಶ ರಾಯ್ಕರ, ವಾದಿರಾಜ ಗೋಪಾಲಕೃಷ್ಣ ರೇವಣಕರ, ಆರ್.ಎನ್. ಕುರ್ಡೇಕರ, ನಾಗಾನಂದನ್ ಎನ್. ಕುರ್ಡೇಕರ, ಪ್ರವೀಣ ಪಿ. ಕುರ್ಡೇಕರ, ಉಲ್ಲಾಸ ಎಸ್. ಪಾಲನಕರ, ರಾಜು ದಿವಾಕರ, ಮೋಹನ ಆರ್. ರೇವಣಕರ, ಮಂಜುನಾಥ ರಾಯ್ಕರ, ಗಣೇಶ ಕುರ್ಡೇಕರ, ನಾಗರಾಜ ಪಿ. ರೇವಣಕರ, ನಾಗರಾಜ, ಶಿವಣ್ಣ ನಾಯಕ, ಕಾರ್ತಿಕ ಜಾಲಿಹಾಳ, ಮೋನೇಶ ಚನ್ನಳ್ಳಿ ಇದ್ದರು.