ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ರಬಕವಿ-ಬನಹಟ್ಟಿ ತಾಲೂಕಿನ ಕೇಂದ್ರ ಸ್ಥಳವಾದ ಮತ್ತು ವಿಶೇಷಚೇತನರಾದಿಯಾಗಿ ತಾಲೂಕಿನ ಯಾವುದೇ ಮೂಲೆಯಿಂದ ಬರುವವರಿಗೆ ಜಿಎಲ್‌ಬಿಸಿ ಹಿಂಬದಿಯ ಜಾಗ ಗುರುತಿಸಿದ್ದು, ಇದೇ ಜಾಗೆಯಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿತ ಪ್ರಜಾಸೌಧ ಕಟ್ಟಡಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕೆಂದು ರಬಕವಿಯ ಸಮಸ್ತ ನಾಗರಿಕರ ಸಭೆಯಲ್ಲಿ ಒಮ್ಮತದ ಆಗ್ರಹ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಬಕವಿ-ಬನಹಟ್ಟಿ ತಾಲೂಕಿನ ಕೇಂದ್ರ ಸ್ಥಳವಾದ ಮತ್ತು ವಿಶೇಷಚೇತನರಾದಿಯಾಗಿ ತಾಲೂಕಿನ ಯಾವುದೇ ಮೂಲೆಯಿಂದ ಬರುವವರಿಗೆ ಜಿಎಲ್‌ಬಿಸಿ ಹಿಂಬದಿಯ ಜಾಗ ಗುರುತಿಸಿದ್ದು, ಇದೇ ಜಾಗೆಯಲ್ಲಿ ರಾಜ್ಯಪತ್ರದಲ್ಲಿ ಪ್ರಕಟಿತ ಪ್ರಜಾಸೌಧ ಕಟ್ಟಡಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಬೇಕೆಂದು ರಬಕವಿಯ ಸಮಸ್ತ ನಾಗರಿಕರ ಸಭೆಯಲ್ಲಿ ಒಮ್ಮತದ ಆಗ್ರಹ ಕೇಳಿ ಬಂದಿದೆ.

ಗುರುವಾರ ರಬಕವಿಯ ಶ್ರೀಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಕರೆದ ರಬಕವಿ ಸಮಸ್ತ ನಾಗರಿಕರ ಸಭೆಯಲ್ಲಿ ಮಾತನಾಡಿದ ಧುರೀಣ ಸಂಜೀವ ಜೋತಾವರ, ನಮ್ಮಲ್ಲಿನ ಆಂತರಿಕ ಭಿನ್ನತೆಗಳನ್ನು ಮರೆತು ಒಗ್ಗಟ್ಟಿನಿಂದ ಪ್ರಜಾಸೌಧ ಕಟ್ಟಡದ ಶಂಕುಸ್ಥಾಪನೆಗೆ ಸರ್ಕಾರ ಮತ್ತು ಅಧಿಕಾರಿಗಳನ್ನು ಆಗ್ರಹಿಸಲು ಒಟ್ಟಾಗಬೇಕಿದೆ. ಅದಕ್ಕಾಗಿ ಶುಕ್ರವಾರ ಸ್ಥಳೀಯ ತಹಸೀಲ್ದಾರ್‌, ಜಮಖಂಡಿ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಎಲ್ಲರೂ ಸ್ವಯಂಪ್ರೇರಿತರಾಗಿ ತಮ್ಮದೇ ವಾಹನಗಳಲ್ಲಿ ಹೋಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.ಹಿರಿಯರಾದ ರಾಮಣ್ಣಾ ಹುಲಕುಂದ ಮಾತನಾಡಿ, ಯುವಕರು ಹೋರಾಟಕ್ಕೆ ಹೆಚ್ಚಿನ ಬೆಂಬಲ ನೀಡಬೇಕು. ಮಹಿಳೆಯರಿಗೆ ಪ್ರತ್ಯೇಕ ವಾಹನಗಳ ವ್ಯವಸ್ಥೆಯಾಗಿದ್ದು, ಪ್ರತಿ ವಾಹನದಾರರು ನಾಲ್ವರನ್ನು ಕರೆತಂದು ಮನವಿ ಸಲ್ಲಿಕೆ ಕಾರ್ಯ ಸರಾಗಗೊಳಿಸಬೇಕೆಂದರು.

ರಬಕವಿ ಜಿಎಲ್‌ಬಿಸಿ ಜಾಗದಲ್ಲಿ ಈಗಾಗಲೇ ಸರ್ಕಾರ ಅಧಿಕೃತ ಗೆಜೆಟ್ ಹೊರಡಿಸಿದ್ದು, ಅದನ್ನು ವಿರೋಧಿಸಿ ಪಕ್ಕದ ನಗರದಲ್ಲಿ ನಡೆಯುತ್ತಿರುವ ಧರಣಿ, ನಿರಶನ ನಡೆಸಲು ಮುಂದಾದಾಗ ಮಾತ್ರ ಶಂಕುಸ್ಥಾಪನೆ ಶೀಘ್ರ ನಡೆಯಲಿದೆ. ಈ ಕಾರ್ಯಕ್ಕೆ ನೆರವಾಗಲು ಮಾದಿಗ ಸಮಾಜದಿಂದ ₹ ೨೫ ಸಾವಿರ ಕಾಣಿಕೆ ನೀಡುವುದಾಗಿ ಬಾಬು ನಡುವಿನಮನಿ ಘೋಷಿಸಿದರು.

ಧರೆಪ್ಪ ಉಳ್ಳಾಗಡ್ಡಿ, ಸೋಮಶೇಖರ ಕೊಟ್ರಶೆಟ್ಟಿ, ಶಿವಾನಂದ ಬಾಗಲಕೋಟಮಠ, ಬಸವರಾಜ ತೆಗ್ಗಿ, ಈಶ್ವರ ನಾಗರಾಳ, ವೆಂಕಟೇಶ ನಿಂಗಸಾಣಿ, ವೆಂಕನಗೌಡ ಪಾಟೀಲ, ಆಯೂಬ್ ಅತ್ತಾರ, ನೀಲಕಂಠ ಮುತ್ತೂರ, ಗಣಪತರಾವ ಹಜಾರೆ, ಸತೀಶ ಹಜಾರೆ, ಮಾರುತಿ ನಾಯಕ, ಗಿರೀಶ ಮುತ್ತೂರ, ಅಶೋಕ ಹೊಸಕೋಟಿ ಪ್ರಜಾಸೌಧ ಕಟ್ಟಡಕ್ಕೆ ಸರ್ಕಾರ ಗುರ್ತಿಸಿದ ಜಾಗ ತಾಲೂಕು ಕೇಂದ್ರ ಸ್ಥಳದಲ್ಲಿದೆ. ಅಲ್ಲದೇ, ಬಸ್‌ನಿಲ್ದಾಣದ ಪಕ್ಕದಲ್ಲೇ ಇರುವುದರಿಂದ ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲರೂ ಅನುಕೂಲವಾಗಲಿದೆ. ಸರ್ಕಾರ ತಾಲೂಕಿನ ಎಲ್ಲ ಭಾಗಗಳ ಜನತೆಯ ಹಿತ ಲಕ್ಷಿಸಿ ಗುರ್ತಿಸಿದ ಜಾಗೆಯಲ್ಲೇ ಪ್ರಜಾಸೌಧ ಕಟ್ಟಡದ ಶಂಕುಸ್ಥಾಪನೆಗೆ ಮುಂದಾಗಬೇಕೆಂದು ಆಗ್ರಹಿಸಿದರು.ಸಭೆಯ ಅಧ್ಯಕ್ಷತೆಯನ್ನು ಹಿರಿಯ ವೈದ್ಯ ಡಾ.ಎ.ಕೆ.ನಾಡಗೌಡಪಾಟೀಲ ವಹಿಸಿದ್ದರು. ಬುದ್ದಪ್ಪ ಕುಂದಗೋಳ, ವಿವೇಕಾನಂದ ಭಸ್ಮೆ, ರಾಮಚಂದ್ರ ಕಂಕಣವಾಡಿ, ಸಂಗಮೆಶ ಮಡಿವಾಳರ, ಮಹಾದೇವ ಕೋಟ್ಯಾಳ, ಯಲ್ಲಪ್ಪ ಕಟಗಿ, ಅಭಿಯಂತರ ಸುರೇಶ ಪಟ್ಟಣಶೆಟ್ಟಿ, ಅಶೋಕ ಕುಚನೂರ, ಮಾರುತಿ ನಾಯಕ, ರಮೇಶ ಮಾಡವಕರ, ಮಾರುತಿ ಗಾಡಿವಡ್ಡರ, ಸಂಜಯ ತೆಗ್ಗಿ, ರವಿ ಮುತ್ತೂರ, ರವಿ ಕೊಕಟನೂರ ಮುಂತಾದವರು ಸಭೆ ಯಶಸ್ಸಿಗೆ ಶ್ರಮಿಸಿದರು.